‘ಚುನಾವಣಾ ಅಧಿಕಾರಿ ಫಲಿತಾಂಶ ಪ್ರಕಟಿಸಿದಾಗ, ಬಿಜೆಪಿ ವಿಜೇತ ಅಭ್ಯರ್ಥಿ ಓಡಿಬಂದು ಮೇಯರ್ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ. ಕೂಡಲೇ ಚುನಾವಣಾ ಅಧಿಕಾರಿಯು ತಾನು ತಿರಸ್ಕರಿಸಿದ ಮತಗಳನ್ನು ಸದಸ್ಯರ ಏಜೆಂಟಿಗೆ ತೋರಿಸದೆ ನಿರ್ಗಮಿಸಿದ್ದು, ಸ್ಥಳದಲ್ಲಿ ವಾದವಿವಾದ ಉಂಟಾಗಿದೆ’. ಇದಿಷ್ಟು ಇಂದು ನಡೆದ ಚಂಡೀಗಢ ಮೇಯರ್ ಚುನಾವಣೆ ಸಂದರ್ಭದಲ್ಲಿ ಕಂಡುಬಂದ ಚಿತ್ರಣ. ಕಾಂಗ್ರೆಸ್-ಎಎಪಿ ಮೈತ್ರಿ ಪಕ್ಷವು 20 ಸದಸ್ಯರನ್ನು ಹೊಂದಿದ್ದರೂ, ಕೇವಲ 14 ಸದಸ್ಯರಿರುವ ಬಿಜೆಪಿ ಮೇಯರ್ ಸ್ಥಾನ ಪಡೆದುಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.
ಪ್ರತಿಪಕ್ಷಗಳ ಆಕ್ರೋಶದ ನಡುವೆಯೆ ಬಿಜೆಪಿ ನಾಯಕ ಮನೋಜ್ ಸೋಂಕರ್ ಅವರು ಮಂಗಳವಾರ ಚಂಡೀಗಢ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 36 ಮತಗಳ ಪೈಕಿ ಎಂಟು ಮತಗಳು ಅಸಿಂಧು ಎಂದು ಘೋಷಿಸಲಾಯಿತು. ಎಎಪಿ-ಕಾಂಗ್ರೆಸ್ ಗುಂಪು ಈ ವಿಷಯವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನಲ್ಲಿ ಪ್ರಶ್ನಿಸಲು ತೀರ್ಮಾನ ತೆಗೆದುಕೊಂಡಿವೆ.
36 ಮತಗಳಲ್ಲಿ ಸೋಂಕರ್ 16 ಮತಗಳನ್ನು ಪಡೆದು ಉನ್ನತ ಸ್ಥಾನವನ್ನು ಪಡೆದುಕೊಂಡರೆ, ಇಂಡಿಯಾ ಬ್ಲಾಕ್‌ನ ಎಎಪಿ ಅಭ್ಯರ್ಥಿ ಕುಲದೀಪ್ ಸಿಂಗ್ 12 ಮತಗಳನ್ನು ಪಡೆದರು. ವಿರೋಧ ಪಕ್ಷಗಳ ಎಂಟು ಮತಗಳನ್ನು ಚುನಾವಣಾ ಅಧಿಕಾರ ಅಮಾನ್ಯವೆಂದು ಘೋಷಿಸಿದರು. ಆದರೆ, ಅದಕ್ಕೆ ಕಾರಣ ತಿಳಿಸದೆ ಅಲ್ಲಿಂದ ನಿರ್ಗಮಿಸಿದರು.
When the Presiding Officer announced the result, the BJP Mayor Candidate sat on the Mayor Chair, and the Presiding Officer left with the rejected votes without showing them to the Councillor agent. #ChandigarhMayorElection pic.twitter.com/ACo9gRxjk4
— Gagandeep Singh (@Gagan4344) January 30, 2024
ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್ 35 ಸದಸ್ಯರನ್ನು ಹೊಂದಿದೆ ಮತ್ತು ಮತದಾನದ ಹಕ್ಕು ಹೊಂದಿರುವ ನಾಮನಿರ್ದೇಶಿತ ಸದಸ್ಯರನ್ನು ಹೊಂದಿದೆ. ಪ್ರಸ್ತುತ ಬಿಜೆಪಿ ಸಂಸದ ಕಿರಣ್ ಖೇರ್ ಅವರು ಈ ಹುದ್ದೆಯನ್ನು ಹೊಂದಿದ್ದಾರೆ. ಎಎಪಿ ಪ್ರಸ್ತುತ 13 ಕೌನ್ಸಿಲರ್‌ಗಳನ್ನು ಹೊಂದಿದ್ದರೆ, ಕಾಂಗ್ರೆಸ್ ಏಳು ಸದಸ್ಯರನ್ನು ಹೊಂದಿದೆ. ಬಿಜೆಪಿ 14 ಸದಸ್ಯರು ಮತ್ತು ಶಿರೋಮಣಿ ಅಕಾಲಿದಳದ ಇಬ್ಬರು ಸದಸ್ಯರಿದ್ದಾರೆ.
ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಮೊದಲ ಬಾರಿಗೆ 36 ಮತಗಳಲ್ಲಿ ಎಂಟು ಅಸಿಂಧು ಎಂದು ಘೋಷಿಸಲಾಯಿತು. ಕಾಂಗ್ರೆಸ್ ಮತ್ತು ಎಎಪಿ ಮೈತ್ರಿಕೂಟ 20 ಮತಗಳನ್ನು ಪಡೆಯಬೇಕಿತ್ತು. ನಮಗೆ 12 ಮತಗಳು ಬಂದಿದ್ದು, ಎಂಟು ಮತಗಳು ಅಸಿಂಧುವಾಗಿವೆ. ಬಿಜೆಪಿಯ ಒಂದು ಮತವೂ ಅಸಿಂಧು ಎಂದು ಘೋಷಣೆಯಾಗಿಲ್ಲ… ಮುಂಬರುವ 2024ರ ಚುನಾವಣೆಯಲ್ಲಿ ಏನಾಗುತ್ತದೋ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ಬಿಜೆಪಿಯು ಇಂತಹ ಕೀಳು ಮಟ್ಟಕ್ಕೆ ಇಳಿದು ನಕಲಿ ಮತ್ತು ಅಕ್ರಮ ಎಸಗಲು ಸಾಧ್ಯವಾದರೆ… ಅದು ಯಾವುದೇ ಹಂತಕ್ಕೆ ಹೋಗಬಹುದು’ ಎಂದು ಆಪ್ ಸಂಸದ ರಾಘವ್ ಚಡ್ಡಾ ಹೇಳಿದ್ದಾರೆ.
‘ಇದು ದರೋಡೆ. ಚಂಡೀಗಢದಲ್ಲಿ 36 ಕೌನ್ಸಿಲರ್ ಸ್ಥಾನಗಳಿದ್ದು, ಅದರಲ್ಲಿ 14 ಸ್ಥಾನಗಳು ಬಿಜೆಪಿ. 13 ಸ್ಥಾನಗಳು ಎಎಪಿ ಮತ್ತು ಏಳು ಸ್ಥಾನಗಳು ಕಾಂಗ್ರೆಸ್. ಒಟ್ಟು ಎಎಪಿ (13 + 7) 20 ಸ್ಥಾನಗಳನ್ನು ಹೊಂದಿದೆ…ಬಿಜೆಪಿ ಬಣ್ಣ ಮತ್ತೆ ಬಹಿರಂಗವಾಗಿದೆ…” ಎಂದು ಪಕ್ಷದ ಸಹ ನಾಯಕ ಸೌರಭ್ ಭಾರದ್ವಾಜ್ ವಾಗ್ದಾಳಿ ನಡೆಸಿದ್ದಾರೆ.
चंडीगढ़ मेयर चुनाव घोटाला :-
●भाजपा+अकाली दल: 16 पार्षद वोट
●कांग्रेस+आप : 20 पार्षद वोट
●कांग्रेस+आप के रद्द मत: 8 पार्षद वोट 🤔
●परिणाम – बीजेपी की हिटलरशाही जीत
*आपको शक है क्या भारत में लोकतंत्र है? खत्म है।#ChandigarhMayorElection pic.twitter.com/bduzTm4Mjl— Hansraj Meena (@HansrajMeena) January 30, 2024
ಪ್ರಜಾಪ್ರಭುತ್ವದ ಗೆಲುವು ಎಂದ ಬಿಜೆಪಿಗರು
ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಕೇಸರಿ ಪಕ್ಷದ ನಾಯಕರು, “ಪ್ರಜಾಪ್ರಭುತ್ವದ ಗೆಲುವು ಮತ್ತು ಎಎಪಿ ಮತ್ತು ಕಾಂಗ್ರೆಸ್‌ನ ‘ತಗ್ಬಂಧನ್’ ಸೋಲು” ಎಂದು ಹೇಳಿದ್ದಾರೆ. ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಅವರು ಇಂಡಿಯಾ ಬಣದ ಸೋಲು; ಅವರ ಅಂಕಗಣಿತವು ಕಾರ್ಯನಿರ್ವಹಿಸುತ್ತಿಲ್ಲ ಅಥವಾ ಅವರ ರಸಾಯನಶಾಸ್ತ್ರ ಕೆಲಸ ಮಾಡುತ್ತಿಲ್ಲ ಎಂಬುದನ್ನು ತೋರಿಸುತ್ತದೆ” ಎಂದು ಲೇವಡಿ ಮಾಡಿದ್ದಾರೆ.
‘ಚಂಡೀಗಢ ಮೇಯರ್ ಚುನಾವಣೆಯಲ್ಲಿ ಹಗಲು ಹೊತ್ತಿನಲ್ಲಿ ಅಪ್ರಾಮಾಣಿಕತೆ ನಡೆಸಿರುವ ರೀತಿ ಅತ್ಯಂತ ಕಳವಳಕಾರಿಯಾಗಿದೆ. ಈ ಜನರು ಮೇಯರ್ ಚುನಾವಣೆಯಲ್ಲಿ ಇಷ್ಟು ಕೆಳಮಟ್ಟಕ್ಕೆ ಇಳಿದರೆ, ದೇಶದ ಚುನಾವಣೆಯಲ್ಲಿ ಅವರು ಯಾವುದೇ ಮಟ್ಟಕ್ಕೆ ಹೋಗಬಹುದು. ಇದು ತುಂಬಾ ಕಳವಳಕಾರಿಯಾಗಿದೆ’ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ‘ಹಿರಿಯ ಅಧಿಕಾರಿಯೊಬ್ಬರು ಮತಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ’ ಎಂದು ಪ್ರತಿಪಾದಿಸಲು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಇದು ಅವರ ಹಳೆಯ ಅಭ್ಯಾಸ
‘ಇಂದು ನಮ್ಮ ದೇಶದ ಪ್ರಜಾಪ್ರಭುತ್ವದಲ್ಲಿ “ಕಪ್ಪು ದಿನ” ಎಂದು ಬರೆಯಲಾಗುತ್ತದೆ. ದುರದೃಷ್ಟವಶಾತ್, ನಾವು ಗಣರಾಜ್ಯೋತ್ಸವವನ್ನು ಆಚರಿಸುವುದು ಇದೇ ತಿಂಗಳು. ಇಂದು ಸಂವಿಧಾನ ಛಿದ್ರಗೊಂಡಿದೆ. ಚಂಡೀಗಢ ಮೇಯರ್ ಚುನಾವಣೆಯನ್ನು ಬಿಜೆಪಿಯವರು ಮಾಧ್ಯಮಗಳ ಮುಂದೆ, ಕ್ಯಾಮರಾಗಳ ಮುಂದೆ ‘ಲೂಟಿ’ ಮಾಡಿದ ರೀತಿ. ಅವರು ಈ ಮೊದಲು ಮಧ್ಯಪ್ರದೇಶ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಈಶಾನ್ಯ ರಾಜ್ಯಗಳಲ್ಲಿ ಇದನ್ನು ಮಾಡಿದರು. ಹಾಗಾಗಿ, ಇದು ಅವರ ಹಳೆಯ ಅಭ್ಯಾಸ’ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆಕ್ರೋಶ ಹೊರಹಾಕಿದ್ದಾರೆ.
ಕಣ್ಣೀರಿಟ್ಟ ಎಎಪಿ ಅಭ್ಯರ್ಥಿ
ಬಿಜೆಪಿ ಮತ್ತು ಇಂಡಿಯಾ ಮೈತ್ರಿಕೂಟದ ನಡುವಿನ ಮೊದಲ ಪ್ರಮುಖ ಸ್ಪರ್ಧೆ ಎಂದು ಬಿಂಬಿಸಲಾಗಿದ್ದ ಆಘಾತಕಾರಿ ಹಿನ್ನಡೆಯ ನಂತರ, ಚಂಡೀಗಢದ ಮೇಯರ್ ಚುನಾವಣೆಗೆ ಎಎಪಿ ಅಭ್ಯರ್ಥಿ ಕ್ಯಾಮರಾಗಳ ಮುಂದೆ ಅಳಲು ತೋಡಿಕೊಂಡರು. ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದ ಕುಲದೀಪ್ ಕುಮಾರ್ ಅವರು ಬಿಜೆಪಿಯ ಮನೋಜ್ ಸೋಂಕರ್ ಅವರಿಂದ ಪರಾಭವಗೊಂಡಿದ್ದು, ಸುತ್ತಮುತ್ತಲಿನ ಜನರು ಅವರನ್ನು ಸಮಾಧಾನಪಡಿಸಿ ಘೋಷಣೆಗಳನ್ನು ಕೂಗುತ್ತಿದ್ದರೂ ಅವರು ಕಣ್ಣೀರು ಸುರಿಸುವುದನ್ನು ನಿಲ್ಲಿಸಲಿಲ್ಲ.
ಇದನ್ನೂ ಓದಿ; ಇಂಡಿಯಾ ಬಣಕ್ಕೆ ಆರಂಭಿಕ ಆಘಾತ; ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು


