ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ‘ದೊಡ್ಡಣ್ಣ’ ಎಂದು ಕರೆದಿದ್ದಾರೆ. ತೆಲಂಗಾಣ ಅಭಿವೃದ್ಧಿಯಾಗಬೇಕಾದರೆ ಗುಜರಾತ್ ಮಾದರಿಯನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
‘ತೆಲಂಗಾಣ ರಾಜ್ಯದ ಅಭಿವೃದ್ಧಿಗೆ ಸಹಾಯ ಮಾಡಲು ಪ್ರಧಾನಿ ಮೋದಿಯವರ ಬೆಂಬಲವನ್ನು ಕೇಳಿರುವುದರಿಂದ ಕೇಂದ್ರ ಸರ್ಕಾರದ ವಿರುದ್ಧ ಹೋರಾಡುವುದಿಲ್ಲ’ ಎಂದು ರೆಡ್ಡಿ ಸೋಮವಾರ ಹೇಳಿದ್ದಾರೆ.
‘ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಪ್ರಧಾನಿ ಕನಸನ್ನು ನನಸಾಗಿಸಲು ತೆಲಂಗಾಣ ಕೈಜೋಡಿಸಲು ಬಯಸುತ್ತದೆ. ಹೈದರಾಬಾದ್ ಮತ್ತು ತೆಲಂಗಾಣ ಮೆಟ್ರೊ ರೈಲು ಯೋಜನೆಗೆ ಹಣ ಕೋರಿದ್ದರಿಂದ ದೇಶದ ಅಭಿವೃದ್ಧಿಗೆ ಕೇಂದ್ರಕ್ಕೆ ನೆರವು ನೀಡಲಾಗುವುದು’ ಮುಖ್ಯಮಂತ್ರಿ ಹೇಳಿದರು.
అభివృద్ధి కోసం వేదికలు పంచుకుంటాం…
సంక్షేమంలో సమన్వయంతో పని చేస్తాం…
సమాఖ్య స్ఫూర్తిని గౌరవించడమే మా సిద్ధాంతం.రాష్ట్రం విషయంలో రాజీపడబోం…
ఆత్మగౌరవం విషయంలో తలెత్తుకునే ఉంటాం.#TelanganaPrajaPrabhutwam #PrajaPalana pic.twitter.com/ZUf0s523lq— Revanth Reddy (@revanth_anumula) March 4, 2024
2024ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಧಾನಿ ಮೋದಿ ತೆಲಂಗಾಣ ಪ್ರವಾಸದಲ್ಲಿದ್ದಾರೆ. ಅವರು ಸೋಮವಾರ ತೆಲಂಗಾಣದ ಆದಿಲಾಬಾದ್‌ನಲ್ಲಿ 56,000 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 30 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು.
ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ ಆದಿಲಾಬಾದ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ದೇಶದ 140 ಕೋಟಿ ಜನಸಂಖ್ಯೆಯು ನನ್ನ ಕುಟುಂಬ” ಎಂದು ಹೇಳಿದರು. “ಬಿಜೆಪಿಯು ರಾಷ್ಟ್ರದ ಅಭಿವೃದ್ಧಿಗೆ ಬದ್ಧವಾಗಿದೆ. ಅದಕ್ಕಾಗಿಯೇ ತೆಲಂಗಾಣದ ಜನರು ಸಹ ಹೇಳುತ್ತಿದ್ದಾರೆ … “ಅಬ್ಕಿ ಬಾರ್, 400 ಪಾರ್,” ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ; ‘ನೀವು ನಿಮ್ಮ ಹಕ್ಕನ್ನು ದುರುಪಯೋಗಪಡಿಸಿಕೊಂಡಿದ್ದೀರಿ..’; ಉದಯನಿಧಿ ಹೇಳಿಕೆಗೆ ಸುಪ್ರೀಂ ಪ್ರತಿಕ್ರಿಯೆ


