“ಅತ್ಯಾಚಾರ ಆರೋಪದ ವಿಷಯಕ್ಕೆ ಲೋಕಪ್ರಸಿದ್ಧನಾಗಿರುವ ರಾಮಚಂದ್ರಪುರ ಮಠದ ಸ್ವಾಮಿ ರಾಘು ಯಾನೆ ರಾಘವೇಶ್ವರ ಭಾರತಿ ಬುರ್ನಾಸ್ ಭಾನ್ಗಡಿಗಳಿಂದು ಸುದ್ದಿಯಾಗುತ್ತಲೇ ಇದ್ದಾನೆ. ಅದೆಂದೋ ಜೈಲುಪಾಲಾಗಬೇಕಿದ್ದ ಈ ಧರ್ಮಭ್ರಷ್ಟ ನ್ಯಾಯ ಆಡಳಿತ ವ್ಯವಸ್ಥೆಗಳನ್ನೇ ದಿಕ್ಕುತಪ್ಪಿಸಿ ತಿಂದುಂಡು ಬೋಗಸ್ ಪ್ರವಚನ ಬಿಗಿಯುತ್ತ ಲೌಕಿಕಾನಂದ ಅನುಭವಿಸುತ್ತಿದ್ದಾನೆ ಎಂಬ ಆರೋಪಗಳಿವೆ. ಕನ್ಯಾದೀಕ್ಷೆ, ಏಕಾಂತ ಸಂದರ್ಶನ, ಹೆಂಗಸರ ಹಣೆಗೆ ಕುಂಕುಮವಿಟ್ಟು ಮೈಸವರಿ ಆಶೀರ್ವಾದ ಮಾಡುವುದೇ ಮುಂತಾದ ಲೈಂಗಿಕ ಕುಚೇಷ್ಟೆಗಳಿಂದ ಹವ್ಯಕರ ಮಠವನ್ನು ತನ್ನ ಕಾಮಕಾಂಡದ ಅಡ್ಡೆ ಮಾಡಿಕೊಂಡಿದ್ದಾನೆ” ಎಂದು ಮೊಟ್ಟಮೊದಲು ಆರೋಪ ಮಾಡಿದ್ದು ಕುಮಟಾದ ಪ್ರಸಿದ್ಧ ವೈದ್ಯರೂ, ಸಾಮಾಜಿಕ ಮುಖಂಡರೂ ಹವ್ಯಕ ಹೀರೇಮಾಣಿಗಳೂ ಆಗಿದ್ದ ಡಾ.ಟಿ.ಟಿ.ಹೆಗಡೆ!
ಡಾ.ಹೆಗಡೆಯನ್ನು ರಾಘವ ಮಠ ಮಾಫಿಯಾ ಒಂದೆರಡು ರೀತಿಯಲ್ಲಿ ಕಾಡಲಿಲ್ಲ. ಹಲವು ಬಾರಿ ಅವರ ಮೇಲೆ ಭೀಭತ್ಸ ಹಲ್ಲೆಯಾಗಿತ್ತು. ಪೊಲೀಸರನ್ನು ಛೂ ಬಿಟ್ಟು ಕಾಡಿದ್ದರು. ಕೇಸುಗಳನ್ನು ಹಾಕಿಸಿದ್ದರು. ರಾಘುನ ಪೂರ್ವಾಶ್ರಮದ ಸಹೋದರಿ ಗ್ಯಾಂಗು ಕಟ್ಟಿಕೊಂಡು ಪೊರಕೆಯಿಂದ ಹೊಡೆಯಲು ಹೋಗಿ ತಮ್ಮನ ಕಲ್ಯಾಣ ಗುಣಗಳ ಅನಾವರಣವೂ ಮಾಡಿದ್ದಳು. ಎಂಬತ್ತರ ಗಡಿದಾಟಿದ್ದ ಡಾ.ಹೆಗಡೆ ಹಲ್ಲೆಯಿಂದ ಆಸ್ಪತ್ರೆಯಲ್ಲಿ ಕಳೆಯುವಂತಾಗಿತ್ತು. ಇಷ್ಟಾದರೂ ಹೆಗಡೆ ಹೆದರಲಿಲ್ಲ. ತ್ರಿಕಾಲ ಪೂಜೆ ಮಾಡದೆ ಹಣ-ಹೆಣ್ಣಿನ ವಾಸನೆಗೆ ಬಿದ್ದಿರುವ ರಾಘು ಗುರು ಪೀಠದಲ್ಲಿರಲು ಅನರ್ಹನೆಂದು ತನ್ನ ಕೊನೆಗಾಲದತನಕ ಹೇಳುತ್ತಲೇ ಇದ್ದರು. ರಾಘುನ ಪೀಠೋಚ್ಛಾಟನೆ ಮಾಡಲು ನ್ಯಾಯಾಲಯಕ್ಕೂ ಹೋಗಿದ್ದರು.
ಡಾ.ಹೆಗಡೆಯವರು ಸಾಮಾಜಿಕ ಕಳಕಳಿ, ಧಾರ್ಮಿಕ ಪಾಂಡಿತ್ಯ, ನೈತಿಕ ನಡವಳಿಕೆಯಿಂದ ಹವ್ಯಕ ಸಮುದಾಯದಲ್ಲಿ ಪ್ರೀತಿ-ಗೌರವ ಸಂಪಾದಿಸಿದ್ದರು. ಸ್ತ್ರೀ ಸಖ್ಯಾ ಸುಖ ಸಂತೃಪ್ತ “ಸನ್ಯಾಸಿ” ರಾಘುನ ಕಂಡರೆ ಹವ್ಯಕರು ಮೂಗು ಮುರಿಯುತ್ತಿದ್ದರೆ ಟಿ.ಟಿ.ಹೆಗಡೆಯನ್ನು ನೋಡಿದಾಕ್ಷಣ ತಲೆಬಾಗಿ ನಮಿಸುತ್ತಿದ್ದರು. ಆದರೆ ಹವ್ಯಕರು ರಾಘು ಗ್ಯಾಂಗಿನ ಬಹಿಷ್ಕಾರ, ಹಲ್ಲೆ, ಜೀವನೋಪಾಯ ವ್ಯವಹಾರಕ್ಕೆ ಕಲ್ಲುಹಾಕುವ ಕ್ರೌರ್ಯಕ್ಕೆ ಹೆದರಿ ಟಿ.ಟಿ.ಹೆಗಡೆಯ ಹೋರಾಟಕ್ಕೆ ಬೆಂಬಲ ನೀಡಲಿಲ್ಲ. ಇದಕ್ಕೆಲ್ಲಾ ಬೇಸರಿಸದೆ ಟಿ.ಟಿ.ಹೆಗಡೆ “ಜಾಣ” ಹವ್ಯಕರ ಕಣ್ಣಿನ ಪೊರೆ ತೆರೆಯಲು ಪ್ರಯತ್ನ ಮಾಡುತ್ತಲೇ ಇದ್ದರು ಎಂಬುದು ಅವರನ್ನು ಬಲ್ಲವರೆಲ್ಲರೂ ಹೇಳುವ ಮಾತು.
ಮಠಬಾನಿಗಳನ್ನು ಎದುರುಹಾಕಿಕೊಂಡಿದ್ದ ಟಿ.ಟಿ.ಹೆಗಡೆಯವರು ಸುಮಾರು ಎರಡು ತಿಂಗಳ ಹಿಂದೆ ವಯೋಸಹಜ ಸಾವು ಕಂಡಿದ್ದಾರೆ. ಲಗಾಯ್ತಿನಿಂದಲೂ ಅನಾಚಾರಿ ರಾಘುನ ಚೇಲಾಗಿರಿ ಮಾಡುತ್ತಲೇ ಬಂದಿರುವ ಬೆಂಗಳೂರಿನ ಗಿರಿನಗರ ಪೊಲೀಸ್ ಅಧಿಕಾರಿಗಳು ದಿವಂಗತ ಟಿ.ಟಿ.ಹೆಗಡೆ ಮೇಲೆ ಕೇಸು ಜಡಿದಿದ್ದಾರೆ. ರಾಘುನ ವಿರುದ್ಧ ಅವಹೇಳನಕಾರಿ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚುರಪಡಿಸುತ್ತಿದ್ದಾರೆಂಬ ಆರೋಪ ಹೊರಿಸಿದ್ದಾರೆ. ಪಾಪಾ ಟಿ.ಟಿ ಹೆಗಡೆಯವರು ಮರಣಹೊಂದಿ ಎರಡು ತಿಂಗಳಾದರೂ ಸಹ ಅವರನ್ನು ಬಿಡುತ್ತಿಲ್ಲ ಮಠಬಾನಿಗಳು. ಮಠದ ಸಿಇಓ ಕೆ.ಜಿ.ಭಟ್ಟ ಕೊಟ್ಟ ಕಂಪ್ಲೇಂಟಿನ ಮೇಲೆ ಎಫ್‌ಐಆರ್ ಕೂಡ ಹಾಕಿರುವ ಪೆದ್ದು ಪೊಲೀಸರು ಅದನ್ನು ನ್ಯಾಯಾಲಯಕ್ಕೂ ಸಲ್ಲಿಸಿದ್ದಾರೆ. ಎನ್‌ಸಿಆರ್ 207/19 ನಂಬರಿನ ಎಫ್‌ಐಆರ್ ಅನ್ನು 25-09-2019 ರಂದು ಕೋರ್ಟಿಗೆ ಸಲ್ಲಿಸಿರುವ ಪೊಲೀಸ್ ಅಧಿಕಾರಿಗಳು ಮತ್ತು ಮಠಬಾನಿಗಳ ಹುಚ್ಚಾಟಕ್ಕೆ ಜನ ಬಿದ್ದು ಬಿದ್ದು ನಗುತ್ತಿದ್ದಾರೆ!!
ಈ ಗಿರಿನಗರ ಪೊಲೀಸರು ಹಿಂದೆ ರಾಘುನ ವಿರುದ್ಧ ಅತ್ಯಾಚಾರ ಸಂತ್ರಸ್ತೆಯು ದೂರು ಕೊಡಲು ಹೋದಾಗಲೂ ಸತಾಯಿಸಿದ್ದರು. ರಾಘುನ ರಗಳೆ-ರಾದ್ಧಾಂತದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಿದ್ದವರಿಗೆ, ಅಲ್ಲಲ್ಲಿ ಮಾತಾಡಿದವರಿಗೆಲ್ಲಾ ಈ ಗಿರಿನಗರ ಪೊಲೀಸರು ಹಿಂಸೆ ನೀಡಿದ್ದ ದೊಡ್ಡ ಪಟ್ಟಿಯೇ ಇದೆ. ಸತ್ತವರನ್ನು ಬಿಡದೇ ಕಾಡಿ ತೆವಲು ತೀರಿಸಿಕೊಳ್ಳುವ ಸ್ಯಾಡಿಸ್ಟ್ ರಾಘುನ ಪೀಠಕ್ಕೆ ಬಲಿಯಾದ ಪುತ್ತೂರಿನ ಶ್ಯಾಮಶಾಸ್ತ್ರಿಯ ಕುಟುಂಬ ಪಟ್ಟ ಕಷ್ಟ ಹೇಳತೀರದು. ಈಗ ದಿವಂಗತ ಟಿ.ಟಿ.ಹೆಗಡೆ ಮೇಲೆ ಮಸಲತ್ತಿನ ಎಫ್‌ಐಆರ್ ಆಗಿದೆ. ಹವ್ಯಕರಿಗೇಕೆ ನೈತಿಕ ಸಾತ್ವಿಕ ಸಿಟ್ಟು ಬರುತ್ತಿಲ್ಲ? ಹವ್ಯಕ ಕುಲಘಾತುಕ ರಾಘುನನ್ನ ಆ ಸಮುದಾಯ ಇನ್ನೆಷ್ಟು ದಿನ ಸಹಿಸಿಕೊಳ್ಳುತ್ತದೋ ಎಂಬ ಪ್ರಶ್ನೆ ಅವರನ್ನು ವಿರೋಧಿಸುತ್ತಿರುವ ಹವ್ಯಕರದ್ದು.


