Homeಮುಖಪುಟ'ನೀವು ಭಾರತೀಯರಾಗಿದ್ದರೆ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿ': ಬಿಜೆಪಿ ಟಿಕ್‌ಟಾಕ್‌ ಸ್ಟಾರ್‌ ವಾರ್ನಿಂಗ್‌

‘ನೀವು ಭಾರತೀಯರಾಗಿದ್ದರೆ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿ’: ಬಿಜೆಪಿ ಟಿಕ್‌ಟಾಕ್‌ ಸ್ಟಾರ್‌ ವಾರ್ನಿಂಗ್‌

- Advertisement -
- Advertisement -

ಹರಿಯಾಣದಲ್ಲಿ ಈಗ ವಿಧಾನಸಭೆ ಚುನಾವಣೆ ಕಾವು ಜೋರಿದೆ. ಟಿಕ್‌ಟಾಕ್‌ ಸ್ಟಾರ್‌ ಮತ್ತು  ಬಿಜೆಪಿ ಅಭ್ಯರ್ಥಿ ಸೋನಾಲಿ ಪೋಗಟ್ ಅವರ ವಿವಾದಾತ್ಮಕ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಮತಯಾಚನೆಗೆ ತೆರಳಿದ್ದ ಬಿಜೆಪಿ ಅಭ್ಯರ್ಥಿ ಸೋನಾಲಿ ಪೋಗಟ್ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗದವರ ಮತಗಳಿಗೆ ಯಾವುದೇ ಮೌಲ್ಯವಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಟಿಕ್‍ಟಾಕ್‍ನಲ್ಲಿ ಲಕ್ಷಾನುಲಕ್ಷ ಫಾಲೋವರ್ಸ್ ಹೊಂದಿರುವ ಮಾಜಿ ನಟಿ ಸೋನಾಲಿ ಪೋಗಟ್, ಭಾರತ್ ಮಾತಾ ಕೀ ಜೈ ಎಂದು ಹೇಳುವಂತೆ, ಕಾಂಗ್ರೆಸ್ ಅಭ್ಯರ್ಥಿ ಕುಲದೀಪ್ ಬಿಶ್ನೋಯ್‍ಗೆ ಚಾಲೆಂಜ್ ಮಾಡಿದ್ದಾರೆ. ಅದಂಪುರದ ಬಾಷನ್‍ನಲ್ಲಿರುವ ಕುಲ್ದೀಪ್ ಮತ್ತು ಅವರ ಕುಟುಂಬಸ್ಥರಿಗೆ ಸವಾಲು ಹಾಕಿದ್ದು, ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡಿದ್ದಾರೆ. ಪೋಗಟ್ ಅವರ ಟಿಕ್‍ಟಾಕ್ ವಿಡಿಯೋ ಈಗ ಸಾಕಷ್ಟು ಚರ್ಚೆಗೀಡಾಗಿದ್ದು, ವಿವಾದಕ್ಕೀಡಾಗಿದೆ.

ಅಂದ ಹಾಗೆ ಕಾಂಗ್ರೆಸ್ ಅಭ್ಯರ್ಥಿ ಕುಲ್ದೀಪ್ ಬಿಶ್ನೋಯ್, ಹರಿಯಾಣದ ಮಾಜಿ ಸಿಎಂ ಭಜನ್‍ಲಾಲ್ ಅವರ ಪುತ್ರ. ಭಜನ್‍ಲಾಲ್ 9 ಬಾರಿ ವಿಧಾನಸಭೆ ಎಲೆಕ್ಷನ್ ಎದುರಿಸಿದ್ದಾರೆ. ಹರಿಯಾಣದ ಬಾಲಾಸಮಂಡ್ ಗ್ರಾಮದಲ್ಲಿ ಮತಯಾಚನೆಗೆ ತೆರಳಿದ್ದ ಪೋಗಟ್, ತಾನು ಹೇಳಿದ ಹಾಗೆ ಭಾರತ್ ಮಾತಾ ಕೀ ಜೈ ಸ್ಲೋಗನ್ ಘೋಷಣೆ ಕೂಗುವಂತೆ ಕೇಳಿಕೊಂಡಿದ್ದಾರೆ. ಆದರೆ ಸರಿಯಾದ ಪ್ರತಿಕ್ರಿಯೆ ಬಾರದೇ ಇದ್ದ ಕಾರಣ ಅಲ್ಲಿದ್ದವರನ್ನು ಬೈಯ್ದು, ನಿಮಗೆಲ್ಲಾ ನಾಚಿಕೆಯಾಗಬೇಕು ಎಂದು ನಿಂದಿಸಿದ್ದಾರೆ.

ನೀವೆಲ್ಲಾ ಏನು ಪಾಕಿಸ್ತಾನದವರಾ..? ನೀವೆಲ್ಲಾ ಭಾರತೀಯರಾಗಿದ್ದರೆ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿ ಎಂದು ಹೇಳಿದ್ದಾರೆ. ಬಳಿಕ ಯಾರು ದೇಶಕ್ಕಾಗಿ ಜೈ ಅನ್ನುವುದಿಲ್ಲವೋ, ಅಂತವರು ನಮ್ಮ ದೇಶದಲ್ಲಿ ಇರುವುದಕ್ಕೆ ನಾಚಿಕೆ ಪಡಬೇಕು. ಅಂಥವರ ಹೊಲಸು ರಾಜಕೀಯಕ್ಕೆ ಮೌಲ್ಯವಿಲ್ಲ ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು

0
ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 47ರ ಹರೆಯದ ಮನೆ ಕೆಲಸದಾಕೆಗೆ ಲೈಂಗಿಕ...