Homeಮುಖಪುಟ'ಸ್ಕ್ಯಾನ್ ಮಾಡಿ, ಸ್ಕ್ಯಾಮ್ ನೋಡಿ..'; ಬಿಜೆಪಿ ವಿರುದ್ಧ ತಮಿಳುನಾಡಿನಲ್ಲಿ 'ಜಿ ಪೇ' ಪೋಸ್ಟರ್ ಚಳವಳಿ!

‘ಸ್ಕ್ಯಾನ್ ಮಾಡಿ, ಸ್ಕ್ಯಾಮ್ ನೋಡಿ..’; ಬಿಜೆಪಿ ವಿರುದ್ಧ ತಮಿಳುನಾಡಿನಲ್ಲಿ ‘ಜಿ ಪೇ’ ಪೋಸ್ಟರ್ ಚಳವಳಿ!

- Advertisement -
- Advertisement -

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ ತಮಿಳುನಾಡಿನ ಹಲವು ಕಡೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಗರಣಗಳ ಪೋಸ್ಟರ್‌ಗಳು ರಾರಾಜಿಸುತ್ತಿವೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.

ಪೋಸ್ಟರ್‌ಗಳ ಮೇಲ್ಭಾಗದಲ್ಲಿ ‘ಜಿ ಪೇ’ ಎಂದು ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾಗಿದ್ದು, ಅದರ ಮೇಲೆ ಪ್ರಧಾನಿ ಮೋದಿಯವರ ಫೋಟೋ ಮತ್ತು ಕ್ಯೂಆರ್ ಕೋಡ್ ಇದೆ. ಅದರಲ್ಲಿ “ದಯವಿಟ್ಟು ಸ್ಕ್ಯಾನ್ ಮಾಡಿ ಮತ್ತು ಸ್ಕ್ಯಾಮ್ ನೋಡಿ” ಎಂದು ಬರೆಯಲಾಗಿದೆ.

ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಯ ಭ್ರಷ್ಟಾಚಾರ, ಸಿಎಜಿ ವರದಿಯಲ್ಲಿ ಹೈಲೈಟ್ ಆಗಿರುವ ಅಕ್ರಮಗಳು, ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿನ ಭ್ರಷ್ಟಾಚಾರ ಇತ್ಯಾದಿಗಳನ್ನು ವ್ಯಕ್ತಿಯೊಬ್ಬರು ವಿವರಿಸುವುದನ್ನು ವೀಡಿಯೊದಲ್ಲಿ ನೋಡಬಹುದಾಗಿದೆ.

ನಂತರ, ಬಿಜೆಪಿಯನ್ನು ತಿರಸ್ಕರಿಸಿ ಮತ್ತು ಇಂಡಿಯಾ ಬಣವನ್ನು ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡುವ ಮೂಲಕ ವೀಡಿಯೊ ಮುಂದುವರಿಯುತ್ತದೆ. ಪೋಸ್ಟರ್‌ಗಳನ್ನು ಡಿಎಂಕೆ ಹಾಕಿದೆ ಎಂಬ ಊಹಾಪೋಹವಿದೆ. ಆದರೆ, ಇನ್ನೂ ಯಾವುದೇ ದೃಢೀಕರಣವಿಲ್ಲ.

2024ರ ಲೋಕಸಭಾ ಚುನಾವಣೆಯು ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಇದನ್ನೂ ಓದಿ;

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...