Homeಮುಖಪುಟಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಬಗ್ಗೆ ಮತದಾರರು ಜಾಗರೂಕರಾಗಿರಿ: ಮಾಯಾವತಿ

ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಬಗ್ಗೆ ಮತದಾರರು ಜಾಗರೂಕರಾಗಿರಿ: ಮಾಯಾವತಿ

- Advertisement -
- Advertisement -

“ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಬಗ್ಗೆ ಮತದಾರರು ಜಾಗರೂಕರಾಗಿರಬೇಕು. ಪ್ರಧಾನಿ ನರೇಂದ್ರ ಮೋದಿ ಅವರಿರು ಆಹಾರ ಧಾನ್ಯಗಳನ್ನು ನೀಡುತ್ತಾರೆ ಎಂದು ಹೇಳುವ ಮೂಲಕ ಜನರನ್ನು ಅವರು ದಾರಿ ತಪ್ಪಿಸುತ್ತಿದ್ದಾರೆ” ಎಂದು ಎಂದು ಮಾಯಾವತಿ ಹೇಳಿದ್ದಾರೆ.

“ಸರ್ಕಾರದ ಕೆಲವು ಸದಸ್ಯರು ತಮ್ಮ ಹೆಗಲ ಮೇಲೆ ಚೀಲವನ್ನು ಹೊತ್ತುಕೊಂಡು ಹಳ್ಳಿಯಿಂದ ಹಳ್ಳಿಗೆ ತಿರುಗುತ್ತಾರೆ ಎಂದು ನನಗೆ ತಿಳಿದಿದೆ. ಅವರು (ನರೇಂದ್ರ) ಮೋದಿ ನಿಮಗೆ ಬೇಳೆಕಾಳು, ಅಕ್ಕಿ ಮತ್ತು ಉಪ್ಪನ್ನು ಉಚಿತವಾಗಿ ನೀಡುತ್ತಾರೆ ಎಂದು ಹೇಳುತ್ತಾರೆ. ನಂತರ ಉಪ್ಪನ್ನು ಗೌರವಿಸಿ ಮತಗಳ ಮೂಲಕ ಕೃಪಾಕಟಾಕ್ಷ ಮಾಡಿ ಎಂದು ಹೇಳುತ್ತಾರೆ. ಅವರು ನಿಮ್ಮನ್ನು ನಮಕ್ ಹಲಾಲ್ (ನಿಷ್ಠಾವಂತ) ಎಂದು ಕೇಳುತ್ತಾರೆ” ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಧ್ಯಕ್ಷರು ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಸೋಮವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಎಚ್ಚರಿಸಿದರು.

ಇದು ಮೋದಿಯವರ ಹಣವಲ್ಲ ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ಈ ಹಣವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ನೀಡಿದ್ದೀರಿ; ಇದು ನಿಮ್ಮ ಹಣ. ಈ ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರ ಬಗ್ಗೆ ಜಾಗರೂಕರಾಗಿರಿ ಎಂದು ಮಾಯಾವತಿ ಹೇಳಿದರು.

“ಕೆಲವು ಆಹಾರಧಾನ್ಯಗಳನ್ನು ನೀಡುವುದರಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲಾಗುವುದಿಲ್ಲ. ನಿಮಗೆ ಉದ್ಯೋಗ ಮುಖ್ಯ” ಎಂದು ಅವರು ಹೇಳಿದರು.

ಮೋದಿ ಸರ್ಕಾರವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡೆಸುತ್ತಿದೆ ಎಂದು ಆರೋಪಿಸಿದ ಮಾಯಾವತಿ, ಇದು ಪ್ರತಿಪಕ್ಷಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಹೇಳಿದರು.

“ಇದು ಪ್ರಾಮಾಣಿಕ ಸರಕಾರವಲ್ಲ; 2014ರಲ್ಲಿ ಬಿಜೆಪಿ ಪ್ರತಿಯೊಬ್ಬ ಭಾರತೀಯನಿಗೆ 15 ಲಕ್ಷ ನೀಡುವುದಾಗಿ ಹೇಳಿತ್ತು. ನೀವು ಅವರನ್ನು ನಂಬಬಾರದು” ಎಂದು ಅವರು ಹೇಳಿದರು.

“ಇದು ಜಾತಿವಾದಿ ಮತ್ತು ಕೋಮುವಾದಿ ಸರ್ಕಾರ. ಆದರೆ, ಜನರು ಈ ಬಾರಿ ಜಾಗರೂಕರಾಗಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆದರೆ ಮತ್ತು ಮತಯಂತ್ರಗಳನ್ನು ದುರುಪಯೋಗಪಡಿಸಿಕೊಳ್ಳದಿದ್ದಲ್ಲಿ ಅದು (ಬಿಜೆಪಿ) ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ. ಈ ಬಾರಿ ಬಿಜೆಪಿಯು ಎಲ್ಲದಕ್ಕೂ ಗ್ಯಾರಂಟಿ ನೀಡುವ ಹೊಸ ತಂತ್ರವನ್ನು ಹೊಂದಿದೆ” ಎಂದರು.

ಇದನ್ನೂ ಓದಿ; ‘ನನ್ನ ಹೆಸರು ಅರವಿಂದ್ ಕೇಜ್ರಿವಾಲ್; ನಾನು ಭಯೋತ್ಪಾದಕನಲ್ಲ..; ಸಂಜಯ್ ಸಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ: ಇಂದು ಭಾರತದಲ್ಲಿ ಶೋಕಾಚರಣೆ

0
ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರಿಗೆ ಗೌರವಾರ್ಥವಾಗಿ ಮಂಗಳವಾರ ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ. ಭಾರತದಾದ್ಯಂತ ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ...