Homeಮುಖಪುಟದೇಶದಲ್ಲಿ ಪ್ರವಾಹಕ್ಕೆ 22 ರಾಜ್ಯಗಳು ತತ್ತರ: ಎಲ್ಲೆಲ್ಲಿ ಎಷ್ಟೆಷ್ಟು ಹಾನಿ? ಇಲ್ಲಿದೆ ಫುಲ್ ಡಿಟೈಲ್ಸ್‌

ದೇಶದಲ್ಲಿ ಪ್ರವಾಹಕ್ಕೆ 22 ರಾಜ್ಯಗಳು ತತ್ತರ: ಎಲ್ಲೆಲ್ಲಿ ಎಷ್ಟೆಷ್ಟು ಹಾನಿ? ಇಲ್ಲಿದೆ ಫುಲ್ ಡಿಟೈಲ್ಸ್‌

- Advertisement -
- Advertisement -

ದೇಶದ ಮುಕ್ಕಾಲು ಭಾಗದ ಜನತೆ ಮಳೆ ಮತ್ತು ಪ್ರವಾಹದಿಂದ ನಲುಗಿದ್ದಾರೆ. ವಿವಿಧ ರಾಜ್ಯಗಳಲ್ಲಿ ಉಂಟಾದ ಅತಿವೃಷ್ಟಿ ಮತ್ತು ಪ್ರಾಕೃತಿಕ ವಿಕೋಪ ಜನತೆಯನ್ನು ಹೈರಾಣಾಗಿಸಿದೆ. ಈ ಬಗ್ಗೆ ಈಗ ಕೇಂದ್ರದ ಗೃಹ ಸಚಿವಾಲಯದ ಅಧಿಕಾರಿಗಳು ವರದಿಯೊಂದನ್ನು ಬಿಡುಗಡೆ ಮಾಡಿದ್ದಾರೆ.

ವರದಿ ಪ್ರಕಾರ, ದೇಶದಲ್ಲಿ ಈ ಬಾರಿಯ ಅತಿವೃಷ್ಟಿಯಿಂದಾಗಿ 22 ರಾಜ್ಯಗಳ 25 ಲಕ್ಷಕ್ಕೂ ಹೆಚ್ಚು ಜನತೆ ಸಂತ್ರಸ್ತರಾಗಿದ್ದಾರೆ. ಒಟ್ಟು 21,00 ಜನ ಬಲಿಯಾಗಿದ್ದು, 46 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಿದೆ. ಮಳೆ, ಪ್ರವಾಹ, ಭೂಕುಸಿತದ ಪರಿಣಾಮ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಅಂದರೆ 399 ಮಂದಿ ಅಸುನೀಗಿದ್ದಾರೆ. ಎರಡನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ, ಇಲ್ಲಿ 227ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರವಾಹದಿಂದ ದೇಶದ 357 ಜಿಲ್ಲೆಗಳು ತತ್ತರ

ಮಳೆ, ನೆರೆ, ಭೂಕುಸಿತದ ಪರಿಣಾಮ ದೇಶದ 357 ಜಿಲ್ಲೆಗಳು ತತ್ತರಿಸಿವೆ. 738 ಜನರು ಗಾಯಗೊಂಡಿದ್ದಾರೆ. 20,000ಕ್ಕೂ ಹೆಚ್ಚು ಪಶು-ಪಕ್ಷಿಗಳು ಬಲಿಯಾಗಿವೆ. ಮಳೆ ಮತ್ತು ನೆರೆಯಿಂದ 1.09 ಲಕ್ಷ ಮನೆಗಳು ಸಂಪೂರ್ಣವಾಗಿ ಕುಸಿಯುವ ಹಂತ ತಲುಪಿವೆ. 2.05 ಲಕ್ಷ ಮನೆಗಳಿಗೆ ಹಾನಿಯಾಗಿದೆ. 14.14 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಮಾನ್ಸೂನ್ ನಿಂದಾಗಿ 2,120 ಮಂದಿ ಜೀವ ಕಳೆದುಕೊಂಡಿದ್ದಾರೆ. ಅಲ್ಲದೇ 1994ರ ನಂತರ ಅತಿಹೆಚ್ಚು ಮಳೆಯಾಗಿದ್ದು ಈ ಬಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯವಾರು ಹಾನಿ :

ಮಹಾರಾಷ್ಟ್ರ: ಇಲ್ಲಿನ 22 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಒಟ್ಟು 399 ಮಂದಿ ಬಲಿಯಾಗಿದ್ದಾರೆ. 7.19 ಲಕ್ಷ ಜನತೆ 305 ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳ: ಇಲ್ಲಿನ 22 ಜಿಲ್ಲೆಗಳು ಮಳೆ ಮತ್ತು ಪ್ರವಾಹಕ್ಕೀಡಾಗಿವೆ. ಒಟ್ಟು 227 ಮಂದಿ ಮೃತಪಟ್ಟಿದ್ದು, 37 ಮಂದಿ ಗಾಯಗೊಂಡಿದ್ದು, 4 ಮಂದಿ ನಾಪತ್ತೆಯಾಗಿದ್ದಾರೆ. 43,433 ಸಂತ್ರಸ್ತರು 280 ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಬಿಹಾರ: ಇಲ್ಲಿನ 28 ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿವೆ. 166 ಮಂದಿ ಜೀವ ಕಳೆದುಕೊಂಡಿದ್ದಾರೆ. 1.96 ಲಕ್ಷ ಸಂತ್ರಸ್ತರು 235 ಪುನರ್ವಸತಿ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ.

ಮಧ್ಯಪ್ರದೇಶ: ಇಲ್ಲಿನ 38 ಜಿಲ್ಲೆಗಳು ಪ್ರವಾಹದಿಂದ ನಲುಗಿವೆ. 182 ಮಂದಿ ಬಲಿಯಾಗಿದ್ದಾರೆ. 38 ಮಂದಿ ಗಾಯಗೊಂಡಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆ. 32, 996 ಸಂತ್ರಸ್ತರು 98 ಪುನರ್ವಸತಿ ಕೇಂದ್ರಗಳಲ್ಲಿದ್ದಾರೆ.

ಕೇರಳ: ಇಲ್ಲಿನ 13 ಜಿಲ್ಲೆಗಳು ಮಳೆ, ಪ್ರವಾಹಕ್ಕೆ ತುತ್ತಾಗಿವೆ. 181 ಮಂದಿ ಬಲಿಯಾಗಿದ್ದು, 72 ಮಂದಿ ಗಾಯಗೊಂಡಿದ್ದಾರೆ. 15 ಮಂದಿ ಕಣ್ಮರೆಯಾಗಿದ್ದಾರೆ. 4.46 ಲಕ್ಷ ಸಂತ್ರಸ್ತರು 2,227 ಪುನರ್ವಸತಿ ಕೇಂದ್ರಗಳಲ್ಲಿ ಜೀವನ ನಡೆಸುತ್ತಿದ್ದಾರೆ.

ಕರ್ನಾಟಕ: ಇಲ್ಲಿನ 13 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. 106 ಮಂದಿ ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ. 6 ಮಂದಿ ನಾಪತ್ತೆಯಾಗಿದ್ದಾರೆ. 2.48 ಲಕ್ಷ ಸಂತ್ರಸ್ತರು 3,233 ಪುನರ್ವಸತಿ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ.

ಗುಜರಾತ್: ಇಲ್ಲಿನ 22 ಜಿಲ್ಲೆಗಳು ಅತಿವೃಷ್ಟಿ ಸಂಕಷ್ಟಕ್ಕೀಡಾಗಿವೆ. 169 ಮಂದಿ ಬಲಿಯಾಗಿದ್ದು, 17 ಮಂದಿ ಗಾಯಗೊಂಡಿದ್ದಾರೆ. 17,783 ಸಂತ್ರಸ್ತರು 102 ಮಂದಿ ಪುನರ್ವಸತಿ ಕೇಂದ್ರಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

ಅಸ್ಸಾಂ: ಇಲ್ಲಿನ 32 ಜಿಲ್ಲೆಗಳು ನೆರೆಗೆ ತುತ್ತಾಗಿವೆ. 97 ಮಂದಿ ಬಲಿಯಾಗಿದ್ದಾರೆ. 5.35 ಲಕ್ಷ ಸಂತ್ರಸ್ತರು 1,357 ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...