Homeಮುಖಪುಟಹಿಂದೂ ಧರ್ಮ ಶಾಸ್ತ್ರ, ಗ್ರಂಥಗಳ ದುರುಪಯೋಗ ತಡೆಗೆ ಸಿಪಿಐನಿಂದ ಸಂಗೋಷ್ಠಿ ಆಯೋಜನೆ

ಹಿಂದೂ ಧರ್ಮ ಶಾಸ್ತ್ರ, ಗ್ರಂಥಗಳ ದುರುಪಯೋಗ ತಡೆಗೆ ಸಿಪಿಐನಿಂದ ಸಂಗೋಷ್ಠಿ ಆಯೋಜನೆ

- Advertisement -
- Advertisement -

ಹಿಂದೂ ಧರ್ಮದ ಶಾಸ್ತ್ರ ಮತ್ತು ಗ್ರಂಥಗಳ ದುರುಪಯೋಗ ತಡೆಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ( ಸಿಪಿಐ) ಸಂಗೋಷ್ಠಿ ಆಯೋಜಿಸಿದೆ. ಮೂರು ದಿನಗಳ ಸಂಗೋಷ್ಠಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವೇದ ಮತ್ತು ಉಪನಿಷತ್ತು ವಿಷಯವನ್ನು ಆಧರಿಸಿ ಸಂಗೋಷ್ಠಿ ನಡೆಯಲಿದೆ.

ಸಿಪಿಐ ಮಹಾಸಚಿವ ಡಿ.ರಾಜಾ ಮಾತನಾಡಿ, ಅಕ್ಟೋಬರ್ 25ರಿಂದ ಮೂರು ದಿನಗಳವರೆಗೆ ವೇದ, ಉಪನಿಷತ್ತುಗಳ ಮೇಲೆ ಸಂಗೋಷ್ಠಿಗಳು ನಡೆಯಲಿವೆ. ಕೆಲ ರಾಜಕೀಯ ನಾಯಕರು ಮತ್ತು ಪಕ್ಷಗಳು ಸಾಂಪ್ರದಾಯಿಕ ಲಾಭ ಪಡೆಯಲು, ಹಿಂದೂ ಧರ್ಮ ಶಾಸ್ತ್ರ ಮತ್ತು ಗ್ರಂಥಗಳ ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ಸಂಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮೂರು ದಿನ ನಡೆಯಲಿರುವ ಸಂಗೋಷ್ಠಿಗೆ ಭಾರತೀಯಂ-2019 ಎಂದು ಹೆಸರಿಡಲಾಗಿದೆ. ಕೇರಳದ ಕಣ್ಣೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎನ್.ಇ ಬಲರಾಮ್ ಸ್ಮೃತಿಯ ತತ್ವಾವಧಾನದಲ್ಲಿ ವೇದ, ಉಪನಿಷತ್ತು, ಸಂಸ್ಕೃತಿ, ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ಗೋಷ್ಠಿಗಳು ನಡೆಯಲಿವೆ. ಅನೇಕ ವಿದ್ವಾಂಸರು, ಗಣ್ಯರು ಹಲವು ವಿಚಾರಗಳ ಮೇಲೆ ವಿಷಯ ಮಂಡಿಸಲಿದ್ದಾರೆ. ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಗೋಷ್ಠಿಯ ಉದ್ಘಾಟನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಪುರಾಣವನ್ನು ಇತಿಹಾಸವನ್ನಾಗಿಸಲು, ಮನುವಾದಿಗಳು ಪ್ರಯತ್ನಿಸುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಸಿ.ಪಿ.ಐ.ನ ಈ ಕ್ರಮ ಸ್ವಾಗತಾರ್ಹ.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...