ಕನ್ನಡಿಗರಿಗೆ ಕೊಟ್ಟ ‘ಖಾಲಿ ಚೊಂಬಿ’ಗೆ ಉತ್ತರವಾಗಿ ಕನ್ನಡಿಗರಿಂದ ‘ಖಾಲಿ ಕುರ್ಚಿ’ಯ ಉತ್ತರ ಎಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಖಾಲಿ ಕುರ್ಚಿಗಳಿರುವ ವಿಡಿಯೋವನ್ನು ಹಂಚಿಕೊಂಡು ಕಾಂಗ್ರೆಸ್, ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಿದೆ.
ಲೋಕಸಭೆ ಚುನಾವಣೆ ಹಿನ್ನೆಲೆ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದರು. ಚಿಕ್ಕಬಳ್ಳಾಪುರದ ಅಗಲಗುರ್ಕಿ ಗ್ರಾಮದ ಮೈದಾನದಲ್ಲಿ ಆಯೊಜಿಸಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮೋದಿ ಭಾಗವಹಿಸಿದ್ದರು. ಸಭೆಯಲ್ಲಿ ಪ್ರಧಾನಿ ಮೋದಿ, ಎನ್‌ಡಿಎ ಮೈತ್ರಿ ಜೆಡಿಎಸ್ ಪಕ್ಷದ ನಾಯಕ ಹೆಚ್‌ಡಿ ದೇವೇಗೌಡ ಭಾಗವಹಿಸಿದ್ದರು.
ಸಮಾವೇಶದ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಕನ್ನಡಿಗರಿಗೆ ಕೊಟ್ಟ ‘ಖಾಲಿ ಚೊಂಬಿ’ಗೆ ಉತ್ತರವಾಗಿ ಕನ್ನಡಿಗರಿಂದ ‘ಖಾಲಿ ಕುರ್ಚಿ’ಯ ಉತ್ತರ, ಮೋದಿಯವರೇ, ನಿಮ್ಮ ಖಾಲಿ ಚೊಂಬಿನ ಸುಳ್ಳಿನ ಭಾಷಣವನ್ನು ಕೇಳಲು ಕನ್ನಡಿಗರು ಮೂರ್ಖರಲ್ಲ, ಈ ಖಾಲಿ ಕುರ್ಚಿಗಳೇ ಬಿಜೆಪಿಯನ್ನು ದೇಶದಿಂದ ಜಾಗ ಖಾಲಿ ಮಾಡಿಸುವುದಕ್ಕೆ ಮುನ್ನುಡಿ ಬರೆಯುತ್ತವೆ ಎಂದು ಹೇಳಿಕೊಂಡಿದೆ.
#BJPChombuSarkara ಕನ್ನಡಿಗರಿಗೆ ಕೊಟ್ಟ ಖಾಲಿ ಚೊಂಬಿಗೆ ಉತ್ತರವಾಗಿ ಕನ್ನಡಿಗರಿಂದ ಖಾಲಿ ಕುರ್ಚಿಯ ಉತ್ತರ..!
ಮೋದಿಯವರೇ,
ನಿಮ್ಮ ಖಾಲಿ ಚೊಂಬಿನ ಸುಳ್ಳಿನ ಭಾಷಣವನ್ನು ಕೇಳಲು ಕನ್ನಡಿಗರು ಮೂರ್ಖರಲ್ಲ, ಈ ಖಾಲಿ ಕುರ್ಚಿಗಳೇ ಬಿಜೆಪಿಯನ್ನು ದೇಶದಿಂದ ಜಾಗ ಖಾಲಿ ಮಾಡಿಸುವುದಕ್ಕೆ ಮುನ್ನುಡಿ ಬರೆಯುತ್ತವೆ. pic.twitter.com/lt7Exi45Al— Karnataka Congress (@INCKarnataka) April 20, 2024
ಇದಲ್ಲದೆ ಇನ್ನೊಂದು ಪೋಸ್ಟ್ ಮಾಡಿರುವ ಕಾಂಗ್ರೆಸ್, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬರೋಬ್ಬರಿ 10 ವರ್ಷಗಳ ಕಾಲ ದೇಶವನ್ನಾಳಿದೆ, ಈ ಹತ್ತು ವರ್ಷಗಳಲ್ಲಿ ಒಂದೇ ಒಂದು ಜನೋಪಯೋಗಿ ಕೆಲಸಗಳಾಗಲಿಲ್ಲ, ಕೇವಲ ಮೋದಿಯ ವೈಭವೀಕರಣದ ಪ್ರಪಾಗಂಡಾ ಬಿಟ್ಟರೆ ಯಾವುದೇ ಕೆಲಸಗಳು ಕಾಣಸಿಗುವುದಿಲ್ಲ, ಅವರೇ ನೀಡಿದ್ದ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ಹತ್ತು ವರ್ಷಗಳ ಸುದೀರ್ಘ ಆಡಳಿತ ಸಿಕ್ಕ ನಂತರವೂ ಹೇಳಿಕೊಳ್ಳಲು ಒಂದೇ ಒಂದು ಸಾಧನೆ ಇಲ್ಲದಿರುವುದು ಕೇಂದ್ರ ಸರ್ಕಾರದ ನಿಷ್ಕ್ರಿಯತೆಗೆ ಸಾಕ್ಷಿ. ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್ ತೆಗೆದು ನೋಡಿದರೆ ಕೇವಲ ಸೊನ್ನೆ ಕಾಣುತ್ತದೆಯೇ ಹೊರತು ಸಾಧನೆ ಕಾಣುವುದಿಲ್ಲ ಎಂದು ಹೇಳಿದೆ.
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬರೋಬ್ಬರಿ 10 ವರ್ಷಗಳ ಕಾಲ ದೇಶವನ್ನಾಳಿದೆ, ಈ ಹತ್ತು ವರ್ಷಗಳಲ್ಲಿ ಒಂದೇ ಒಂದು ಜನೋಪಯೋಗಿ ಕೆಲಸಗಳಾಗಲಿಲ್ಲ, ಕೇವಲ ಮೋದಿಯ ವೈಭವೀಕರಣದ ಪ್ರಪಾಗಂಡಾ ಬಿಟ್ಟರೆ ಯಾವುದೇ ಕೆಲಸಗಳು ಕಾಣಸಿಗುವುದಿಲ್ಲ,
ಅವರೇ ನೀಡಿದ್ದ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ.ಹತ್ತು ವರ್ಷಗಳ ಸುದೀರ್ಘ ಆಡಳಿತ ಸಿಕ್ಕ ನಂತರವೂ… pic.twitter.com/epsyJ0dMko
— Karnataka Congress (@INCKarnataka) April 20, 2024
ಮೋದಿ ಸರ್ಕಾರಕ್ಕೆ ಕರ್ನಾಟಕ ಕಟ್ಟುವ ಪ್ರತಿ 100 ತೆರಿಗೆಯಲ್ಲಿ ಕರ್ನಾಟಕಕ್ಕೆ ಮರಳಿ ಸಿಗುವುದು ಕೇವಲ 13 ಈ ಅನ್ಯಾಯ ಎಲ್ಲಿಯವರೆಗೆ? ಮೋದಿ ಸರ್ಕಾರದ ಈ ಮಹಾಮೋಸಕ್ಕೆ ಅಂತ್ಯ ಹಾಡೋಣ.. ಕನ್ನಡಿಗರ ಹಿತ ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕಾಂಗ್ರೆಸ್ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.
ಮೋದಿ ಸರ್ಕಾರಕ್ಕೆ ಕರ್ನಾಟಕ ಕಟ್ಟುವ ಪ್ರತಿ ₹100 ತೆರಿಗೆಯಲ್ಲಿ ಕರ್ನಾಟಕಕ್ಕೆ ಮರಳಿ ಸಿಗುವುದು ಕೇವಲ ₹13
ಈ ಅನ್ಯಾಯ ಎಲ್ಲಿಯವರೆಗೆ ?
ಮೋದಿ ಸರ್ಕಾರದ ಈ ಮಹಾಮೋಸಕ್ಕೆ ಅಂತ್ಯ ಹಾಡೋಣ..ಕನ್ನಡಿಗರ ಹಿತ ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. #ನನ್ನತೆರಿಗೆ_ನನ್ನಹಕ್ಕು pic.twitter.com/MdChY1os4L
— Karnataka Congress (@INCKarnataka) April 21, 2024
ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆಯೆಂದು ಕಾಂಗ್ರೆಸ್, ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ರಾಜ್ಯದಲ್ಲಿ ಖಾಲಿ ಚೊಂಬು ಅಭಿಯಾನವನ್ನು ಪ್ರಾರಂಭಿಸಿತ್ತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ ಖಾಲಿ ಚೊಂಬು, ಬರ ಪರಿಹಾರ ವಿಚಾರದಲ್ಲಿ 18 ಸಾವಿರ ಕೋಟಿ ಚೊಂಬು, 15ನೇ ಹಣಕಾಸು ಆಯೋಗದಿಂದ ನೀಡಬೇಕಿದ್ದ 62 ಸಾವಿರ ಕೋಟಿ ಚೊಂಬು, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ ನೀಡಿದ್ದು ಮಾತ್ರ ಚೊಂಬು, ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಹೇಳಿ ಹಾಕಿದ್ದು ಮಾತ್ರ ಚೊಂಬು, ನಾವು ಕಟ್ಟುವ ಪ್ರತಿ 100ರೂ. ತೆರಿಗೆಯಲ್ಲಿ 13 ರೂ. ಮಾತ್ರ ವಾಪಸ್ ನೀಡುವ ಮೂಲಕ ಚೊಂಬು, ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ರಾಜ್ಯಕ್ಕೆ ನೀಡಿದ್ದು ಚೊಂಬು ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು. ಇದಲ್ಲದೆ ನಿನ್ನೆ ಮೋದಿ ರಾಜ್ಯಕ್ಕೆ ಆಗಮನದ ಹಿನ್ನೆಲೆ ಕಾಂಗ್ರೆಸ್ ನಾಯಕರು ‘ಖಾಲಿ ಚೊಂಬು’ ಹಿಡಿದು ಪ್ರತಿಭಟನೆಯನ್ನು ನಡೆಸಿತ್ತು.
ಇದನ್ನು ಓದಿ: ಕೇಂದ್ರ ಸರಕಾರದ ವಿರುದ್ಧ ‘ಖಾಲಿ ಚೊಂಬು’ ಹಿಡಿದು ಪ್ರತಿಭಟನೆ



All the brothers and sisters of Karnataka should teach the bjp government the same as we did during the state election pls 🙏🙏🙏🙏🙏🙏🇮🇳