HomeಮುಖಪುಟJIO ಗೆ ಬೈ ಬೈ, ಓಲ್ಡ್‌ ಇಸ್‌ ಗೋಲ್ಡ್ BSNLಗೆ ಜೈ : ಐಡಿಯಾ ವೋಡಾಪೋನ್‌...

JIO ಗೆ ಬೈ ಬೈ, ಓಲ್ಡ್‌ ಇಸ್‌ ಗೋಲ್ಡ್ BSNLಗೆ ಜೈ : ಐಡಿಯಾ ವೋಡಾಪೋನ್‌ ಮೌಲ್ಯ ಹೆಚ್ಚಳ..

- Advertisement -
- Advertisement -

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಉಚಿತ ಸೇವೆಗಳನ್ನು ನೀಡುವ ಮೂಲಕ ಅತ್ಯಂತ ವೇಗದಲ್ಲಿ ಛಾಪು ಮೂಡಿಸಿದ್ದ ಸಂಸ್ಥೆ ಜಿಯೋ. ಈಗ ಇದೇ ಜಿಯೋ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಜಿಯೋ ಹೊರತುಪಡಿಸಿ ಬೇರೆ ಸಂಸ್ಥೆಯ ನೆಟ್‌ವರ್ಕ್‌ಗಳಿಗೆ ಕರೆ ಮಾಡಿದರೆ ಒಂದು ನಿಮಿಷಕ್ಕೆ 6 ಪೈಸೆ ಚಾರ್ಜ್ ಮಾಡುವುದಾಗಿ ಹೇಳಿದೆ. ದೇಶದಾದ್ಯಂತ ಲಕ್ಷಾನುಲಕ್ಷ ಗ್ರಾಹಕರನ್ನು ಹೊಂದಿರುವ ಜಿಯೋ, ಮೊದಲೆಲ್ಲಾ ಉಚಿತ ಸೇವೆ ನೀಡಿ, ಈಗ ಚಾರ್ಜ್ ಮಾಡುತ್ತಿರುವುದು ಅಪಹಾಸ್ಯಕ್ಕೆ ಗುರಿಯಾಗಿದೆ.

ಮುಖೇಶ್ ಅಂಬಾನಿ ಸಾರಥ್ಯದಲ್ಲಿ ಉಚಿತ ಕರೆಗಳು, ಮೆಸೇಜ್, ಫ್ರೀ ಇಂಟರ್ನೆಟ್ ಸೇವೆ ನೀಡಿ ಬಹುಬೇಗ ಖ್ಯಾತಿಗೆ ಒಳಗಾಗಿದ್ದ ಜಿಯೋ, ಈಗ ಚಾರ್ಜ್ ಮಾಡುತ್ತಿರುವ ಕ್ರಮಕ್ಕೆ ಖಂಡನೆ ವ್ಯಕ್ತವಾಗಿದ್ದು, ನಗೆಪಾಟಲಿಗೀಡಾಗಿದ್ದು, ಗ್ರಾಹಕರು ಬೈ ಬೈ JIO ಓಲ್ಡ್‌ ಇಸ್‌ ಗೋಲ್ಡ್ BSNLಗೆ ಜೈ ಎಂದಿದ್ದಾರೆ.

ಜಿಯೋ ಕ್ರಮದ ಬಗ್ಗೆ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ. ಅತಿದೊಡ್ಡ ಲಾಲಿಪಾಪ್ ಗೆ ಬೇಡಿಕೆ ಹೆಚ್ಚು, ಲಾಲಿಪಾಪ್ ಎಷ್ಟು ದೊಡ್ಡದಿದ್ದರೇನು..? ಆದರೆ ಕೊನೆ ಗಳಿಗೆಯಲ್ಲಿ ಏನೂ ಇರುವುದಿಲ್ಲ. ಈ ಸಂದರ್ಭ ಪ್ರಸ್ತುತ ಆಡಳಿತದಲ್ಲಿರುವ ಮೋದಿ ಸರ್ಕಾರಕ್ಕೆ ಹೆಚ್ಚು ಅನ್ವಯಿಸುತ್ತದೆ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

ಬಿಲಿಯನೇರ್ ಮುಖೇಶ್ ಅಂಬಾನಿ ಅವರ ನಿಯಂತ್ರಣದಲ್ಲಿರುವ ಜಿಯೋ ಶುಲ್ಕ ವಿಧಿಸುತ್ತಿದ್ದಂತೆ ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಷೇರುಗಳು ಮೌಲ್ಯ ಜಿಗಿತಕಂಡಿದೆ.
ವೊಡಾಫೋನ್ ಐಡಿಯಾ ಶೇಕಡಾ 18 ರಷ್ಟು ಜಿಗಿದಿದ್ದು, ಆಗಸ್ಟ್ ನಂತರದ ಅತಿದೊಡ್ಡ ಲಾಭವನ್ನು ಗಳಿಸಿದೆ. ಭಾರ್ತಿ ಏರ್‌ಟೆಲ್‌ ಮುಂಬೈನಲ್ಲಿ ಬೆಳಿಗ್ಗೆ 10:48 ಕ್ಕೆ ಶೇ 4.8 ರಷ್ಟು ಏರಿಕೆಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...