Homeಮುಖಪುಟಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

- Advertisement -
- Advertisement -

ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಕೃಷ್ಣಕುಮಾರ್ ಇತ್ತೀಚೆಗೆ ಕುಂದರ ಪೊಲೀಸರಿಗೆ ಹಲ್ಲೆ ಕುರಿತು ನೀಡಿರುವ ದೂರಿಗೆ, ರಾಜಕೀಯ ವಿರೋಧಿಗಳು ತಮ್ಮ ಮೇಲೆ ಪ್ರಬಲ ಅಸ್ತ್ರದಿಂದ ದಾಳಿ ನಡೆಸಿದ್ದಾರೆ ಎಂದು ಉಲ್ಲೇಖಿಸಿದ್ದರು.

ಚುನಾವಣಾ ಪ್ರಚಾರದ ವೇಳೆ ಸ್ಥಳೀಯ ಬಿಜೆಪಿ ನಾಯಕ ಸನಲ್ ಪುತನ್ವಿಲಾ ಸ್ಕೂಟರ್ ಕೀಯಿಂದ ಜಿ ಕೃಷ್ಣಕುಮಾರ್ ಕಣ್ಣಿಗೆ ಗಾಯಗೊಳಿಸಿದ್ದಾರೆ. ಸೋಮವಾರ ಆರೋಪಿ ಪುತನ್ವಿಲಾನಿಗೆ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 22 ರಂದು, ಕೃಷ್ಣಕುಮಾರ್ ಎಕ್ಸ್‌ನಲ್ಲಿ  ಪೋಸ್ಟ್ ಮಾಡಿದ್ದು, ಕೇರಳದ ಕೊಲ್ಲಂನ ಕುಂದ್ರಾದಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ನನ್ನ ಕಣ್ಣಿಗೆ (ವಿರೋಧ ಪಕ್ಷಗಳ ಶಂಕಿತ ದಾಳಿ) ಗಾಯವಾಗಿದೆ. ಈ ಸಮಯದಲ್ಲಿ ನಿಮ್ಮ ಪ್ರಾರ್ಥನೆ ಮತ್ತು ಬೆಂಬಲ ನನಗೆ ಎಲ್ಲವೂ ಅರ್ಥವಾಗಿದೆ ಎಂದು ಬರೆದುಕೊಂಡಿದ್ದರು.

ಕೃಷ್ಣಕುಮಾರ್ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗಿದ್ದು, ಅವರ ಕಣ್ಣಿಗೆ ಆದ ಗಾಯಕ್ಕೆ ಬಿಜೆಪಿ ಕಾರ್ಯಕರ್ತನೇ ಕಾರಣ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತನನ್ನು ಐಪಿಸಿಯ ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧದಿಂದ ಗಾಯಗೊಳಿಸುವುದು) ರಡಿಯಲ್ಲಿ ಬಂಧಿಸಲಾಗಿದೆ. ಕೃಷ್ಣಕುಮಾರ್ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಸ್ವಪಕ್ಷದ ಕಾರ್ಯಕರ್ತ ಹಲ್ಲೆ ನಡೆಸಿರುವುದು ತಿಳಿದಿದ್ದರೂ ವಿರೋಧ ಪಕ್ಷದ ಶಂಕಿತ ದಾಳಿ ಬಗ್ಗೆ ದೂರನ್ನು ನೀಡಿದ್ದು ಚುನಾವಣೆ ಹೊಸ್ತಿಲಲ್ಲಿ  ಬಿಜೆಪಿ ಅಭ್ಯರ್ಥಿಯ ಹೊಲಸು ರಾಜಕೀಯವಾಗಿದೆ ಎಂದು ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ.

ಇದನ್ನು ಓದಿ: ‘ಸಾರ್ವಜನಿಕರ ಮೇಲೆ ಸವಾರಿ ಮಾಡಲು ಬಿಡುವುದಿಲ್ಲ..’; ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಸುಪ್ರೀಂ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read