ಎನ್‌ಡಿಎ ಪ್ರಚಾರ ಸಭೆಗೆ 500ರೂ.ಹಣದ ಆಮಿಷ ನೀಡಿ ಕರೆದುಕೊಂಡು ಬಂದು ಹಣ ಕೊಡದೆ ವಂಚನೆ ಮಾಡಲಾಗಿದೆ ಎಂದು ಮಹಿಳೆಯರು ಮಹರಾಷ್ಟ್ರದ ಔರಂಗಾಬಾದ್‌ನಲ್ಲಿ ಆರೋಪಿಸಿದ್ದಾರೆ. ನವನೀತ್‌ರಾಣಾ ಮತ್ತು ಎನ್‌ಡಿಎಯ ಶಿವಸೇನಾ ಅಭ್ಯರ್ಥಿ ಸಂದೀಪನ್ ಭೂಮಾರೆ ಅವರ ರ್ಯಾಲಿಯಲ್ಲಿ ಭಾಗವಹಿಸಲು ಹಣದ ಆಮಿಷ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಹಿಳೆಯರ ಆಕ್ರೋಶದ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೋರ್ವ ಕೇಳುತ್ತಿರುವ ಪ್ರಶ್ನೆಗೆ ಮಹಿಳೆಯರು ಉತ್ತರಿಸುತ್ತಾ, ನಮಗೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಚಾರ ಸಭೆಯಲ್ಲಿ ಭಾಗವಹಿಸಿದರೆ ನಮಗೆ ತಲಾ ರೂ. 500 ನೀಡಲಾಗುವುದು ಎಂದು ಭರವಸೆ ನೀಡಿ ಇಲ್ಲಿಗೆ ಕರೆ ತರಲಾಗಿತ್ತು. ಆದರೆ ಸಭೆ ಮುಗಿದ ನಂತರ ನಮಗೆ ಹಣ ಕೊಡದೆ ವಂಚಿಸಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ವಿಡಿಯೋದಲ್ಲಿ ಪುರುಷರು ಸೇರಿದಂತೆ ನೂರಾರು ಮಂದಿ ಇರುವುದು ಸೆರೆಯಾಗಿದೆ. ಇವರೆಲ್ಲರನ್ನು ಹಣದ ಆಮಿಷ ನೀಡಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಪತ್ರಕರ್ತ ಮುಹಮ್ಮದ್ ಆಕಿಫ್, ಔರಂಗಾಬಾದ್‌ನಲ್ಲಿ ಆಯೋಜಿಸಲಾಗಿದ್ದ ನವನೀತ್ ರಾಣಾ ಹಾಗೂ NDA ಶಿವಸೇನೆಯ ಅಭ್ಯರ್ಥಿ ಸಂದೀಪನ್ ಭೂಮರೆ ಅವರ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದರೆ ತಲಾ 500 ಕೊಡುವುದಾಗಿ ಹೇಳಲಾಗಿತ್ತು. ಆದರೆ ಎಂದಿನಂತೆ ಬಡ ಜನರನ್ನು ಮೂರ್ಖರನ್ನಾಗಿಸಲಾಗಿದೆ, ಅವರಿಗೆ ನಯಾಪೈಸೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಈ ಕುರಿತ ವಿಡಿಯೋವನ್ನು ಪತ್ರಕರ್ತ ಮೊಹಮ್ಮದ್ ಝಬೈರ್ ಕೂಡ ಎಕ್ಸ್‌ನಲ್ಲಿ ಮರು ಹಂಚಿಕೊಂಡಿದ್ದಾರೆ. ಹಣದ ಆಮಿಷ ನೀಡಿ ಜನರನ್ನು ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಬಂದಿರುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ಇದೀಗ ಸ್ವತಃ ಮಹಿಳೆಯರೇ ಆರೋಪ ಮಾಡುತ್ತಿರುವ ಹಿನ್ನೆಲೆ ಚುನಾವಣಾ ಆಯೋಗ ಈ ಬಗ್ಗೆ ಯಾವ ಕ್ರಮವನ್ನು ತೆಗೆದುಕೊಳ್ಳುತ್ತೆ ಎಂದು ಕಾದು ನೋಡಬೇಕಿದೆ.
ಔರಂಗಾಬಾದ್‌ನಲ್ಲಿ 4ನೇ ಹಂತದಲ್ಲಿ ಮೇ.13ರಂದು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ. ನಿನ್ನೆ ಕ್ಷೇತ್ರದಲ್ಲಿ ನಾಲ್ಕನೇ ಹಂತದ ಚುನಾವಣಾ ಪ್ರಚಾರದ ಕೊನೆಯ ದಿನವಾಗಿತ್ತು.
Women claim they were promised Rs 500 for attending #NavneetRana and NDA's #ShivSena candidate Sandipan Bhumare's rallies on the last day of campaigning in #Aurangabad #LokSabhaElections2024
As usual, poor people were fooled and not paid even a single penny pic.twitter.com/IE7zm4y7P6
— Mohammed Akhef TOI (@MohammedAkhef) May 11, 2024
ಇದನ್ನು ಓದಿ: ಮುಸ್ಲಿಂ ಜನಸಂಖ್ಯೆ ತೋರಿಸಲು ಪಾಕಿಸ್ತಾನದ ಧ್ವಜ ಬಳಕೆ: ಸುವರ್ಣ ನ್ಯೂಸ್, ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ದೂರು


