Homeಮುಖಪುಟಇವಿಎಂ ಸಂಖ್ಯೆಗಳಲ್ಲಿನ ವ್ಯತ್ಯಾಸ: ಚುನಾವಣಾ ಪಾರದರ್ಶಕತೆ ಬಗ್ಗೆ ಹುಟ್ಟು ಹಾಕಿದ ಕಳವಳ

ಇವಿಎಂ ಸಂಖ್ಯೆಗಳಲ್ಲಿನ ವ್ಯತ್ಯಾಸ: ಚುನಾವಣಾ ಪಾರದರ್ಶಕತೆ ಬಗ್ಗೆ ಹುಟ್ಟು ಹಾಕಿದ ಕಳವಳ

- Advertisement -
- Advertisement -

ಭಾರತದ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯು ಮೇ 13ರಂದು 96 ಸ್ಥಾನಗಳಲ್ಲಿ ಮತದಾನದೊಂದಿಗೆ ನಾಲ್ಕನೇ ಹಂತವನ್ನು ಪ್ರವೇಶಿಸಿದೆ. ಭಾರತೀಯ ಚುನಾವಣಾ ಆಯೋಗದ (ಇಸಿಐ) ಒಟ್ಟಾರೆ ನಡವಳಿಕೆ, ಚುನಾವಣೆ ನಿರ್ವಹಣೆ ಬಗ್ಗೆ ಗಂಭೀರ ಕಳವಳಗಳು ವ್ಯಕ್ತವಾಗಿರುವ ಮಧ್ಯೆ ಆರ್‌ಟಿಐ ಕಾರ್ಯಕರ್ತ ಮನರಂಜನ್‌ ಎಸ್‌ ರಾಯ್‌ ಹಲವು ಮಹತ್ವದ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಮೇ.11ರಂದು ನಾಗರಿಕರು ಮತ್ತು ನಾಗರಿಕ ಸಮಾಜ ಸಂಸ್ಥೆಗಳು “ಬೆನ್ನುಹುರಿಯನ್ನು ಬೆಳೆಸಿಕೊಳ್ಳಿ ಅಥವಾ ರಾಜೀನಾಮೆ ನೀಡಿ” ಎಂದು ಚುನಾವಣಾ ಆಯೋಗಕ್ಕೆ ಆಗ್ರಹಿಸಿ ಜಂಟಿ ಅಭಿಯಾನವನ್ನು ನಡೆಸಿದೆ. ಸಾವಿರಾರು ನಾಗರಿಕರು “ಬೆನ್ನುಹುರಿಯನ್ನು ಬೆಳೆಸಿಕೊಳ್ಳಿ ಅಥವಾ ರಾಜೀನಾಮೆ ನೀಡಿ” ಎಂಬ ಘೋಷವಾಕ್ಯದ  ಪೋಸ್ಟ್‌ಕಾರ್ಡ್‌ಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದ್ದಾರೆ. ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಚುನಾವಣಾ ಸಮಯದಲ್ಲಿ ದ್ವೇಷದ ಹೇಳಿಕೆ ನೀಡುವ ಮೂಲಕ ಸಾಮರಸ್ಯ ಹಾಳುಮಾಡುವ ಗುರಿಯನ್ನು ಸ್ಪಷ್ಟವಾಗಿ ಹೊಂದಿದ್ದರೂ ಚುನಾವಣಾ ಆಯೋಗ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಹೇಳಲಾಗಿದೆ.

ಇದಕ್ಕೂ ಒಂದು ದಿನ ಮೊದಲು, ಮೇ.10ರಂದು, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದೆ.  ಮೊದಲ ಎರಡು ಹಂತಗಳಲ್ಲಿ ಮತದಾನವಾದ ಮತಗಳ ಕುರಿತು ಮಾಹಿತಿ ನೀಡುವಲ್ಲಿ ಚುನಾವಣಾ ಆಯೋಗದ ವಿಳಂಬದ ಬಗ್ಗೆ ಕೋರ್ಟ್‌ ಗಮನಕ್ಕೆ ತಂದಿತ್ತು. ಚುನಾವಣಾ ಅಕ್ರಮಗಳಿಂದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಈ ಮನವಿ ಸಲ್ಲಿಸಲಾಗಿದೆ ಎಂದು ಎಡಿಆರ್ ಹೇಳಿತ್ತು.

ಏ.30 ರಂದು ಚುನಾವಣಾ ಆಯೋಗ ಪ್ರಕಟಿಸಿದ 2024ರ ಲೋಕಸಭಾ ಚುನಾವಣೆಯ ಮೊದಲ ಎರಡು ಹಂತಗಳ ಮತದಾರರ ಅಂಕಿ ಅಂಶವನ್ನು, ಮೊದಲ ಹಂತದ ಮತದಾನದ 11 ದಿನಗಳ ನಂತರ ಮತ್ತು ಎರಡನೇ ಹಂತದ ಮತದಾನದ ನಂತರ 4 ದಿನಗಳ ನಂತರ ಪ್ರಕಟಿಸಲಾಗಿದೆ. ECI ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಏಪ್ರಿಲ್ 30, 2024ರಂದು ಪ್ರಕಟಿಸಿದ ಮಾಹಿತಿಯು, ECI ಚುನಾವಣಾ ದಿನ ಘೋಷಿಸಿದ ಆರಂಭಿಕ ಶೇಕಡಾವಾರುಗಳಿಗೆ ಹೋಲಿಸಿದರೆ 5-6%ದಷ್ಟು ಮತದಾನದಲ್ಲಿ ಹೆಚ್ಚಳವನ್ನು ತೋರಿಸುತ್ತದೆ. ಈ ಅಂಕಿ-ಅಂಶಗಳು ತೀವ್ರ ಕಳವಳ ಮತ್ತು ಸಾರ್ವಜನಿಕ ಅನುಮಾನಗಳನ್ನು ಹುಟ್ಟುಹಾಕಿದೆ.

ಐದು ಪ್ರಮುಖ ಪತ್ರಕರ್ತರ ಸಂಘಟನೆಗಳಾದ ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್, ವಿದೇಶಿ ವರದಿಗಾರರ ಕ್ಲಬ್, ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್ ಮತ್ತು ಪ್ರೆಸ್ ಅಸೋಸಿಯೇಷನ್ ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದು 3 ಹಂತಗಳ ಮತಗಳ ಸಂಪೂರ್ಣಅಂಕಿ-ಅಂಶಗಳನ್ನು ಬಿಡುಗಡೆ ಮಾಡಿಲ್ಲ ಎಂದು ಹೇಳಿ ಆಘಾತ ಮತ್ತು ಆಶ್ಚರ್ಯವನ್ನು ವ್ಯಕ್ತಪಡಿಸಿತ್ತು.

ಈ ಬೆಳವಣಿಗೆಗಳು ಚುನಾವಣೆಯ ನ್ಯಾಯಸಮ್ಮತತೆಯ ಬಗ್ಗೆ ಜನರ ಮನಸ್ಸಿನಲ್ಲಿ ಆತಂಕಕ್ಕೆ ಕಾರಣವಾಗಿವೆ ಎಂದು ಪತ್ರದಲ್ಲಿ ಹೇಳಲಾಗಿದೆ. 2019ರವರೆಗೆ ಅಂದರೆ ಕಳೆದ ಸಾರ್ವತ್ರಿಕ ಚುನಾವಣೆಯವರೆಗೆ, ಪ್ರತಿ ಹಂತದಲ್ಲಿ ಮತದಾನದ ನಂತರ ಪತ್ರಿಕಾಗೋಷ್ಠಿ ನಡೆಸುವುದು ಸಾಮಾನ್ಯವಾಗಿತ್ತು. ಮತದಾನದ ದಿನದಂದು ಏನಾಯಿತು ಎಂಬುದನ್ನು ಚುನಾವಣಾ ಆಯೋಗದಿಂದ ತಿಳಿದುಕೊಳ್ಳಲು ನಾಗರಿಕರಿಗೆ ಎಲ್ಲಾ ರೀತಿಯ ಹಕ್ಕಿದೆ. ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ನೀಡಿದರೆ, ಪತ್ರಕರ್ತರ ಅನುಮಾನಗಳು ಮತ್ತು ಗೊಂದಲಗಳು ನಿವಾರಣೆಯಾಗುತ್ತದೆ. ಚುನಾವಣಾ ಆಯೋಗವು ಪ್ರತಿ ಹಂತದ ಮತದಾನದ ನಂತರ ಪತ್ರಿಕಾಗೋಷ್ಠಿಯನ್ನು ನಡೆಸಬೇಕು ಮತ್ತು ಮುಂದಿನ ಮತದಾನದ ದಿನಾಂಕದೊಳಗೆ ಸಂಪೂರ್ಣ ಮತಗಳ ಸಂಖ್ಯೆ ಮತ್ತು ಮತದಾನದ ಅಂತಿಮ ಶೇಕಡಾವಾರು ಸೇರಿದಂತೆ ಸಂಪೂರ್ಣ ಸಮೀಕ್ಷೆಯ ಮಾಹಿತಿಯನ್ನು ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿತ್ತು.

ಚುನಾವಣಾ ಆಯೋಗದ ನಡವಳಿಕೆಯ ಬಗ್ಗೆ ಈ ಗಂಭೀರ ಅನುಮಾನಗಳು ಮತ್ತು ಆತಂಕಗಳು ಹಲವಾರು ಸಾರ್ವಜನಿಕ ವೇದಿಕೆಗಳಲ್ಲಿ ವ್ಯಕ್ತವಾಗುತ್ತಿವೆ.

ಎಐಡಿಎಂ ಜೊತೆ ಮಾತನಾಡಿದ ರಾಯ್, 2024ರ ಚುನಾವಣೆಗೆ ಸಂಬಂಧಿಸಿದಂತೆ ಸಂಸ್ಥೆಯು ಹೊರಡಿಸಿದ ಪತ್ರಿಕಾ ಪ್ರಕಟಣೆಯು ಸಹ ಹೊಂದಾಣಿಕೆಯಿಲ್ಲದೆ ಮತ್ತು ಅಸಂಗತತೆಯಿಂದ ತುಂಬಿದೆ. 2019 ಮತ್ತು 2024ರ ಲೋಕಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ECI ಪತ್ರಿಕಾ ಪ್ರಕಟಣೆಗಳ ಸರಳ ಹೋಲಿಕೆಯು ಹಲವಾರು ಅಸಂಗತತೆಯನ್ನು ಹೊರತರುತ್ತದೆ ಎಂದು ರಾಯ್ ಗಮನಸೆಳೆದಿದ್ದಾರೆ.

2019 ಮತ್ತು 2024ರ ನಡುವೆ 7.2 ಕೋಟಿ ಮತದಾರರ ಹೆಚ್ಚಳ ಕಂಡುಬಂದಿದೆ ಎಂದು ECI ಪತ್ರಿಕಾ ಪ್ರಕಟಣೆಗಳು ತೋರಿಸುತ್ತವೆ. ಈ ಏರಿಕೆಯು 2024ರ ಚುನಾವಣೆಗೆ ಮತಗಟ್ಟೆಗಳ ಸೇರ್ಪಡೆಗೆ ಕಾರಣವಾಗಿದೆ ಎಂದು ತೋರುತ್ತದೆ. ದೇಶಾದ್ಯಂತ ಒಟ್ಟು 15,000 ಮತಗಟ್ಟೆಗಳನ್ನು ಸೇರಿಸಲಾಗಿದ್ದು, ವಾಸ್ತವಿಕ ಮತದಾನ ಕೇಂದ್ರಗಳ ಸಂಖ್ಯೆಯನ್ನು 10.35 ಲಕ್ಷದಿಂದ 10.50 ಲಕ್ಷಕ್ಕೆ ಏರಿಸಲಾಗಿದೆ. ವಿಚಿತ್ರವೆಂದರೆ, ಈ ಮತಗಟ್ಟೆಗಳಲ್ಲಿ ನಿಯೋಜಿಸಲಾದ ಇವಿಎಂಗಳ ಸಂಖ್ಯೆಯಲ್ಲಿ ಯಾವುದೇ ಪ್ರಮಾಣಾನುಗುಣವಾಗಿ ಹೆಚ್ಚಳವಾಗಿಲ್ಲ.

ಇವಿಎಂಗಳ ಬಳಕೆಯ ಕುರಿತು 2019ರ ಪತ್ರಿಕಾ ಪ್ರಕಟಣೆಯಲ್ಲಿ, ಚುನಾವಣಾ ಆಯೋಗವು ಇವಿಎಂನ್ನು ರೂಪಿಸುವ ವಿವಿಧ ಘಟಕಗಳ ವಿವರಗಳನ್ನು ನೀಡಿದೆ. ಒಟ್ಟು 57.05 ಲಕ್ಷ ಯಂತ್ರಗಳನ್ನು ಈ ಕೆಳಗಿನ ವಿಘಟನೆಯೊಂದಿಗೆ ಪಟ್ಟಿ ಮಾಡಿದೆ. ಬ್ಯಾಲೆಟ್ ಯೂನಿಟ್(BU) – 23.3 ಲಕ್ಷ, ಕಂಟ್ರೋಲ್‌ ಯುನಿಟ್‌ (CU) – 16.35 ಲಕ್ಷ ಮತ್ತು ವಿವಿಪ್ಯಾಟ್‌ -17.4 ಲಕ್ಷ ಎಂದು ತಿಳಿಸಿದೆ. ಇವಿಎಂ ಎಂದರೆ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯೂನಿಟ್ ಮತ್ತು ವಿವಿಪಿಎಟಿ ಘಟಕ ಎಂದು ಸ್ಪಷ್ಟವಾಗಿ ಹೇಳುತ್ತದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ಈ ವ್ಯಾಖ್ಯಾನವನ್ನು ಪುನರುಚ್ಚರಿಸಿದೆ.

ಈ ವ್ಯಾಖ್ಯಾನದ ಪ್ರಕಾರ, 2019ರ ಚುನಾವಣೆಯಲ್ಲಿ ನಿಯೋಜಿಸಲಾದ ಒಟ್ಟು ಇವಿಎಂಗಳ ಸಂಖ್ಯೆ 57.05 ಲಕ್ಷ. ಆದರೆ, ಇಸಿಐನ ಪತ್ರಿಕಾ ಪ್ರಕಟಣೆಯು 2024ರ ಚುನಾವಣೆಯಲ್ಲಿ 55 ಲಕ್ಷ ಇವಿಎಂಗಳನ್ನು ಬಳಸಲಾಗುತ್ತಿದೆ ಎಂದು ಹೇಳುತ್ತದೆ. 2019 ಮತ್ತು 2024ರ ಇವಿಎಂ ಅಂಕಿಅಂಶಗಳ ನಡುವಿನ ಈ ವ್ಯತ್ಯಾಸದ ಆಧಾರದ ಮೇಲೆ, ಅವರು ಕೆಲವು ಸರಳ ಪ್ರಶ್ನೆಗಳನ್ನು ಕೇಳುವುದಾಗಿ ರಾಯ್ AIDEM ಗೆ ಹೇಳಿದ್ದಾರೆ. 2019ಕ್ಕೆ ಹೋಲಿಸಿದರೆ 7.2ಕೋಟಿ ಮತದಾರರು ಮತ್ತು 15,000 ಮತಗಟ್ಟೆಗಳು ಈ ಬಾರಿ ಹೆಚ್ಚಳವಾಗಿದೆ. ಇದಕ್ಕೆ ಹೊರತಾಗಿಯೂ ಈ ಬಾರಿ ಚುನಾವಣೆಗಳಿಗೆ ECI ಸರಿಸುಮಾರು 2.05 ಲಕ್ಷ EVMಗಳನ್ನು ಕಡಿಮೆ ನಿಗದಿಪಡಿಸಿದೆ. ಇದರ ಹಿಂದಿನ ಮರ್ಮವೇನು? ಇವಿಎಂಗಳು ಮೊದಲಿಗಿಂತ ಇದ್ದಕ್ಕಿದ್ದಂತೆ ಸ್ಮಾರ್ಟ್ ಆಗಿವೆಯೇ? ಚುನಾವಣಾ ಆಯೋಗ ಇದಕ್ಕೆ ಯಾವುದೇ ವಿವರಣೆಯನ್ನು ನೀಡುತ್ತಿದ್ದರೆ, ಅದು ಸಾರ್ವಜನಿಕ ಡೊಮೇನ್‌ನಲ್ಲಿರಬೇಕು. ಆ ರೀತಿಯ ಪಾರದರ್ಶಕತೆಯನ್ನು ಈ ಸಾಂವಿಧಾನಿಕ ಸಂಸ್ಥೆಯಿಂದ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ರಾಯ್ ಅವರು ಆರ್‌ಟಿಐ ಅರ್ಜಿಯ ಮೂಲಕ ಪಡೆದ ಮತ್ತು ಚುನಾವಣಾ ಆಯೋಗದಿಂದ ಪಡೆದ ಮಾಹಿತಿಯಲ್ಲಿ ಇವಿಎಂಗಳ ಸಂಖ್ಯೆಯ ಕುರಿತ ಅಂಕಿಅಂಶಗಳು ಅನುಮಾನಗಳನ್ನು ಹುಟ್ಟುಹಾಕಿವೆ . RTI ಮೂಲಕ ರಾಯ್ ಅವರು ಪಡೆದ ದಾಖಲೆಗಳ ಪ್ರಕಾರ, ಒಟ್ಟು 10,42,000 ಇವಿಎಂಗಳನ್ನು ಪೂರೈಸಲು ಜೂನ್ 21,2021 ರಂದು ECIL ಮತ್ತು BEL  ಚುನಾವಣಾ ಆಯೋಗ ಆದೇಶವನ್ನು ನೀಡಿತ್ತು. BELನಿಂದ 4,87,000 ಬ್ಯಾಲೆಟ್ ಯೂನಿಟ್ ಮತ್ತು ECIL ನಿಂದ 5,55,000 ಪೂರೈಸಲು ಬ್ಯಾಲೆಟ್ ಯೂನಿಟ್ ಪೂರೈಸಲು ಸೂಚಿಸಿತ್ತು. BELನಿಂದ 4,08,500 ಕಂಟ್ರೋಲ್‌ ಯುನಿಟ್‌ ಮತ್ತು  ECIL ನಿಂದ 2,88,500 ಸೇರಿದಂತೆ ಒಟ್ಟು 6,97,000 ಕಂಟ್ರೋಲ್‌ ಯುನಿಟ್‌ ಪೂರೈಸಲು ಸೂಚಿಸಿತ್ತು. BELನಿಂದ 3,24,000 ವಿವಿಪ್ಯಾಟ್‌ ಮತ್ತು  ECIL ನಿಂದ 3,22,000 ವಿವಿಪ್ಯಾಟ್‌ ಪೂರೈಸಲು ಚುನಾವಣಾ ಆಯೋಗವು ಸೂಚಿಸಿತ್ತು. ಅಧಿಸೂಚನೆಯ ಪ್ರಕಾರ ಆದೇಶವನ್ನು ಮಾರ್ಚ್ 2023ರಲ್ಲಿ ಪೂರ್ಣಗೊಳಿಸಬೇಕಿತ್ತು. ಅಂದರೆ ಇದು ಸ್ಪಷ್ಟವಾಗಿ, 2024ರ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟು ಆದೇಶಿಸಿರುವುದು ಸ್ಪಷ್ಟವಾಗುತ್ತದೆ.

2022-2023ರಲ್ಲಿ ECIಗೆ ಪೂರೈಸಿದ ಒಟ್ಟು ಬ್ಯಾಲೆಟ್ ಯೂನಿಟ್ ಸಂಖ್ಯೆ 4,18,590, ಹೆಚ್ಚು ವಿಚಿತ್ರವೆಂದರೆ, ಕಂಟ್ರೋಲ್‌ ಯುನಿಟ್‌ಗಾಗಿ ECIL ಹೊಂದಿದ್ದ ಆದೇಶವು 2,88,500 ಯುನಿಟ್‌ಗಳಿಗೆ ಆಗಿತ್ತು, ಆದರೆ ರಾಯ್‌ಗೆ RTI ಪ್ರತಿಕ್ರಿಯೆಯಲ್ಲಿ ಕಂಪನಿಯು 3,31,319 ಯುನಿಟ್‌ಗಳನ್ನು ಪೂರೈಸಿದೆ ಎಂದು ಹೇಳಿದೆ. ಅದು 42,819 ಯುನಿಟ್‌ಗಳ ಹೆಚ್ಚುವರಿ ವಿತರಣೆಯಾಗಿದೆ ಎಂಬುವುದನ್ನು ಸೂಚಿಸುತ್ತದೆ.

RTI ಮಾಹಿತಿ ಪ್ರಕಾರ, BELನಿಂದ ಪಡೆದ RTI ಉತ್ತರದಲ್ಲಿ Mk V (Mk 5) ಹೆಸರಿನ EVMಗಳ ಮಾದರಿಯ ಉಲ್ಲೇಖಗಳಿವೆ. ವಾಸ್ತವವಾಗಿ, 2021 ಜೂನ್ ಆದೇಶದ ಪ್ರಕಾರ BEL 2022-23 ರಲ್ಲಿ ECI ಗೆ ಸರಬರಾಜು ಮಾಡಿದ ಎಲ್ಲಾ ಬ್ಯಾಲೆಟ್ ಯೂನಿಟ್‌ಗಳು ಮತ್ತು ಕಂಟ್ರೋಲ್‌ ಯುನಿಟ್‌ಗಳು ಈ ಮಾದರಿಗೆ ಸೇರಿವೆ. ಈ ಪೂರೈಕೆಯು 4,87,000 BU ಮತ್ತು 4,08,500 CU ಆಗಿದೆ. ಈ ಮಾದರಿಯ ತಾಂತ್ರಿಕ ವಿವರಗಳು ಅನುಭವಿ ಇವಿಎಂ ವೀಕ್ಷಕರಿಗೂ ತಿಳಿದಿಲ್ಲ ಮತ್ತು ECI ವಿವರಣಾತ್ಮಕ ಟಿಪ್ಪಣಿಯ ಮೂಲಕ ಮಾದರಿಯ ಗುಣಲಕ್ಷಣಗಳನ್ನು ಸಾರ್ವಜನಿಕರಿಗೆ ವಿವರಿಸುವ ಅಗತ್ಯವಿದೆ ಎಂದು ರಾಯ್ AIDEMಗೆ ತಿಳಿಸಿದ್ದಾರೆ. ಪ್ರಸ್ತುತ ಭಾರತದಲ್ಲಿ ಬಳಸುತ್ತಿರುವ ಇವಿಎಂಗಳು ಎಂ3 ಮತ್ತು ಎಂ2ಎಂ3 ಮಾದರಿಗಳಿಗೆ ಸೇರಿವೆ. ಹಿಂದೆ, M2 ಮಾದರಿಯ EVM ಗಳನ್ನು ಸಹ ಬಳಸಲಾಗುತ್ತಿತ್ತು.

ನಿರ್ದಿಷ್ಟವಾಗಿ ಇವಿಎಂಗಳ ಬಳಕೆಗೆ ಸಂಬಂಧಿಸಿದಂತೆ, ರಾಯ್ ಅವರು 2018ರ ಹಿಂದೆಯೇ ನ್ಯಾಯಾಂಗ ಸೇರಿದಂತೆ ಸಾರ್ವಜನಿಕ ವೇದಿಕೆಗಳಲ್ಲಿ ಅಸಮಂಜಸತೆ ಮತ್ತು ದೋಷಗಳನ್ನು ಗಮನಕ್ಕೆ ತಂದಿದ್ದಾರೆ. ಅವರು ಮಾರ್ಚ್ 2018ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. 2019ರ ಲೋಕಸಭಾ ಚುನಾವಣೆಯ ಮೊದಲು PILನ್ನು ಸಲ್ಲಿಸಲಾಯಿತು ಮತ್ತು ನಂತರ ಸುಮಾರು 20 ವಿಚಾರಣೆಗಳು ಮತ್ತು ಅನೇಕ ಮುಂದೂಡಿಕೆಗಳಿಗೆ ಸಾಕ್ಷಿಯಾಗಿದೆ. ಆರು ವರ್ಷಗಳ ಸುದೀರ್ಘ ಕಾಯುವಿಕೆ ಮುಂದುವರಿದಾಗಲೂ ರಾಯ್ ಹೊಸ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಇದು ಪ್ರಸ್ತುತ ECI ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

ಇದನ್ನು ಓದಿ: ಪ್ರತಿ ಹಂತದ ಮತದಾನದ ನಂತರ ಪತ್ರಿಕಾಗೋಷ್ಠಿ ನಡೆಸಿ: ಚುನಾವಣಾ ಆಯೋಗಕ್ಕೆ ಪತ್ರ ಬರೆದ ಪತ್ರಿಕಾ ಸಂಸ್ಥೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...