ಈಶಾನ್ಯ ಉಕ್ರೇನ್‌ನ ಖಾರ್ಕಿವ್ ಪ್ರದೇಶದಲ್ಲಿ ಭಾನುವಾರ ರಷ್ಯಾ ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ ಕನಿಷ್ಠ 10 ಜನ ಬಲಿಯಾಗಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದು, ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚಿನ ದಿನಗಳಲ್ಲಿ ಖಾರ್ಕಿವ್ ನಗರ ಮತ್ತು ಸುತ್ತಲಿನ ಪ್ರದೇಶದ ಮೇಲೆ ರಷ್ಯಾದ ಕ್ಷಿಪಣಿಗಳು, ಬಾಂಬ್‌ಗಳ ಮೂಲಕ ರಷ್ಯಾದ ಪಡೆಗಳು ಈಶಾನ್ಯ ಪ್ರದೇಶದಲ್ಲಿ ಆಕ್ರಮಣ ಪ್ರಾರಂಭಿಸಿದ ನಿರಂತರ ದಾಳಿಗಳಲ್ಲಿ ಈ ಸಾವುನೋವು ಸಂಭವಿಸಿದೆ.
ಭಾನುವಾರ ನಡೆದ ಮೊದಲ ದಾಳಿಯಲ್ಲಿ ಖಾರ್ಕಿವ್‌ನ ಹೊರಗಿನ ಮನರಂಜನಾ ಪ್ರದೇಶದಲ್ಲಿ ಐವರನ್ನು ಕೊಲ್ಲಲಾಗಿದೆ; 16 ಮಂದಿ ಗಾಯಗೊಂಡಿದ್ದಾರೆ. ಆದರೆ, ಕುಪಿಯಾನ್ಸ್ಕ್ ಜಿಲ್ಲೆಯ ಎರಡು ಹಳ್ಳಿಗಳಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದು, 9 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಷ್ಯಾದ ಪಡೆಗಳು ಸ್ವಯಂ ಚಾಲಿತ ಬಹು ರಾಕೆಟ್ ಲಾಂಚರ್‌ನೊಂದಿಗೆ ಇಲ್ಲಿನ ಎರಡು ಹಳ್ಳಿಗಳ ಮೇಲೆ ಶೆಲ್ ದಾಳಿ ನಡೆಸಿದವು ಎಂದು ಸ್ಥಳೀಯ ಗವರ್ನರ್ ಒಲೆಹ್ ಸಿನಿಹುಬೊವ್ ಹೇಳಿದ್ದಾರೆ. ಖಾರ್ಕಿವ್ ನಗರದಲ್ಲಿ, ಮೇಯರ್ ಇಹೋರ್ ತೆರೆಖೋವ್ ಅವರು ಗಾಯಗೊಂಡವರ ಮತ್ತು ಸಾವಿನ ಸಂಖ್ಯೆಯನ್ನು ನೀಡಿದರು.
“ಖಾರ್ಕಿವ್ ಸಮೀಪದ ಉಪನಗರದಲ್ಲಿ ಮಧ್ಯಾಹ್ನದ ಸುಮಾರಿಗೆ ಸ್ಫೋಟಗಳು ಸಂಭವಿಸಿವೆ. ಎರಡು ರಷ್ಯಾದ ಕ್ಷಿಪಣಿಗಳು ಜನರು ವಿಶ್ರಾಂತಿ ಪಡೆಯುತ್ತಿದ್ದ ಮನರಂಜನಾ ಕೇಂದ್ರವನ್ನು ಹೊಡೆದು, ಐದು ಜನರನ್ನು ಕೊಂದಿದ್ದು, ಹದಿನಾರು ಮಂದಿ ಗಾಯಗೊಂಡರು” ಒಲೆಹ್ ಟೆಲಿಗ್ರಾಮ್ ಸಂದೇಶದಲ್ಲಿ ಹೇಳಿದದ್ದಾರೆ.
15-20 ನಿಮಿಷಗಳ ನಂತರ ಎರಡನೇ “ಡಬಲ್ ಟ್ಯಾಪ್” ದಾಳಿಯ ನಂತರ, ಸ್ಥಳೀಯ ಅಧಿಕಾರಿಗಳು ಪ್ರಬಲವಾದ ಸ್ಫೋಟ ಎಂದು ಘೋಷಿಸಿದ್ದಾರೆ. ಮನರಂಜನಾ ಪ್ರದೇಶವನ್ನು ನಾಶಪಡಿಸಿರುವುದನ್ನು ರಾಯಿಟರ್ಸ್ ವರದಿಗಾರರು ನೋಡಿದರು.
ಒಂದು ಗಂಟೆಯ ಹಿಂದೆ ಹಗಲಿನಲ್ಲಿ ಕಾರ್ಯನಿರತ ಸರೋವರದ ರೆಸ್ಟೊರೆಂಟ್ ಪ್ರದೇಶವಾಗಿದ್ದ ಅವಶೇಷಗಳಡಿಯಲ್ಲಿ ಒಬ್ಬ ವ್ಯಕ್ತಿಯ ಶವ ಬಿದ್ದಿತ್ತು. ಮಹಿಳೆಯೊಬ್ಬರು ಆಘಾತದಿಂದ ತನ್ನ ಕೈಚೀಲವನ್ನು ಅವಶೇಷಗಳಲ್ಲಿ ಹುಡುಕುತ್ತಾ ಇದ್ದರು. ರೆಸಾರ್ಟ್ ಎದುರು ವಾಸಿಸುತ್ತಿದ್ದ 69 ವರ್ಷದ ವಲೆಂಟಿನಾ ಎಂಬ ಮಹಿಳೆ ಸ್ಫೋಟ ಸಂಭವಿಸಿದಾಗ ಮನೆಯಲ್ಲಿದ್ದರು. ಪತಿ ಸ್ಫೋಟದಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳುತ್ತಾ ಅಳುತ್ತಿದ್ದ ಆಕೆಯ ಮುಖದ ಭಾಗದಲ್ಲಿ ರಕ್ತ ಹರಿಯುತ್ತಿ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ; ಪ್ಯಾಲೆಸ್ತೀನ್ ಪರ ಪ್ರತಿಭಟನಾಕಾರರ ಮೇಲೆ ಅಮೆರಿಕ ಪೊಲೀಸರಿಂದ ದೌರ್ಜನ್ಯ


