ಜಾರ್ಖಂಡ್‌ನ ಗರ್ಹ್ವಾ ಜಿಲ್ಲೆಯಲ್ಲಿ ಹಸು ಕಳ್ಳಸಾಗಣೆ ಆರೋಪದ ಮೇಲೆ ಮೂವರು ವ್ಯಕ್ತಿಗಳು 60 ವರ್ಷದ ವೃದ್ದನನ್ನು ಮೋಟರ್‌ಸೈಕಲ್‌ಗೆ ಕಟ್ಟಿಹಾಕಿದ ನಂತರ, ವಿವಸ್ತ್ರಗೊಳಿಸಿ ಎಳೆದೊಯ್ದಿರುವ ಅಮಾನವೀಯ ಘಟನೆ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ ಸುಮಾರು 275 ಕಿಮೀ ದೂರದಲ್ಲಿರುವ ಅಮ್ರೋರಾ ಗ್ರಾಮದ ಬಳಿ ಈ ಘಟನೆ ಸಂಭವಿಸಿದ್ದು, ಸುರ್ಸ್ವತಿ ರಾಮ್ ಎಂದು ಗುರುತಿಸಲಾದ ವ್ಯಕ್ತಿ ಶುಕ್ರವಾರ ಮಧ್ಯಾಹ್ನ ತನ್ನ ಜಾನುವಾರುಗಳೊಂದಿಗೆ ಬನ್ಶಿಧರ್ ನಗರ್ ಉಂಟಾರಿಗೆ ತೆರಳುತ್ತಿದ್ದರು ಎನ್ನಲಾಗಿದೆ.
ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬನ್ಶಿಧರ್ ನಗರ ಉಂಟಾರಿ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಸತ್ಯೇಂದ್ರ ನಾರಾಯಣ್ ಸಿಂಗ್ ಹೇಳಿದ್ದಾರೆ.
ಎಫ್‌ಐಆರ್‌ನ ಪ್ರಕಾರ, ರಾಹುಲ್ ದುಬೆ, ರಾಜೇಶ್ ದುಬೆ ಮತ್ತು ಕಾಶಿನಾಥ್ ಭುಯಾನ್ ಎಂದು ಗುರುತಿಸಲಾದ ಮೂವರು ವ್ಯಕ್ತಿಗಳು ಮೋಟಾರ್‌ಸೈಕಲ್‌ನಲ್ಲಿದ್ದರು. ಅವರು ವೃದ್ಧನನ್ನು ತಡೆದು, ಹಸು ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಹಿಂದೆ ನೀಡಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಅವರು ವೃದ್ಧನನ್ನು ವಿವಸ್ತ್ರಗೊಳಿಸಿ ತಮ್ಮ ಮೋಟಾರ್‌ಸೈಕಲ್‌ಗೆ ಕಟ್ಟಿದರು. “ಅವರು ನನ್ನನ್ನು ಸ್ವಲ್ಪ ದೂರದವರೆಗೆ ಎಳೆದೊಯ್ದರು; ನಂತರ, ನನ್ನನ್ನು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ” ಎಂದು ರಾಮ್ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.
ವೃದ್ಧನನ್ನು ಚಿಕಿತ್ಸೆಗಾಗಿ ಬನ್ಶಿಧರ್ ನಗರ ಉಂಟಾರಿ ಉಪವಿಭಾಗೀಯ ಆಸ್ಪತ್ರೆಗೆ ಕರೆತರಲಾಗಿತ್ತು. ಉಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಕಾಶಿನಾಥ್ ಭುಯಾನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ; ಪೂಂಚ್‌ನ ನ್ಯಾಷನಲ್ ಕಾನ್ಫರೆನ್ಸ್ ರ‍್ಯಾಲಿಯಲ್ಲಿ ಚಾಕುವಿನಿಂದ ದಾಳಿ; 3 ಮಂದಿಗೆ ಗಾಯ


