ಜೂನ್ 4 ರಂದು ಚುನಾವಣಾ ಫಲಿತಾಂಶದ ಮುನ್ನ ಧ್ಯಾನ ಮಾಡಲು ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡುವ ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲೇವಡಿ ಮಾಡಿದ್ದು, “ಯಾರಾದರೂ ಹೋಗಿ ಧ್ಯಾನ ಮಾಡಬಹುದು… ಆದರೆ, ಧ್ಯಾನ ಮಾಡುವಾಗ ಯಾರಾದರೂ ಕ್ಯಾಮೆರಾ ತೆಗೆದುಕೊಳ್ಳುತ್ತಾರೆಯೇ” ಎಂದು ಅವರು ಪ್ರಶ್ನಿಸಿದ್ದಾರೆ.
“ಚುನಾವಣೆಗೆ 48 ಗಂಟೆಗಳ ಮೊದಲು, ಅವರು ಹೋಗಿ ಎಸಿ ಕೊಠಡಿಯಲ್ಲಿ ಕುಳಿತುಕೊಳ್ಳುತ್ತಾರೆ” ಎಂದು ಅವರು ಆರೋಪಿಸಿದರು.
ಲೋಕಸಭಾ ಚುನಾವಣಾ ಪ್ರಚಾರದ ನಂತರ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರಿಗೆ ಗೌರವಾರ್ಥವಾಗಿ ನಿರ್ಮಿಸಲಾದ ಸ್ಮಾರಕವಾದ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನಿ ಮೋದಿ ಧ್ಯಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಮತಾ ಬ್ಯಾನರ್ಜಿ ಅವರು ಕನ್ಯಾಕುಮಾರಿಗೆ ಭೇಟಿ ನೀಡಲು ಯೋಜಿಸಿದ್ದರು. ಆದರೆ, ನಂತರ ಪ್ರಧಾನಿಯವರ ಯೋಜಿತ ಪ್ರವಾಸದ ಬಗ್ಗೆ ತಿಳಿದುಕೊಂಡರು ಎಂದು ಹೇಳಿದರು.
ಪ್ರಧಾನಿ ಮೋದಿಯವರನ್ನು “ಪರಮಾತ್ಮನು ಒಂದು ಉದ್ದೇಶಕ್ಕಾಗಿ” ಕಳುಹಿಸಿದ್ದಾನೆ ಎಂಬ ಅವರ ಹೇಳಿಕೆಯ ಬಗ್ಗೆ ಮಮತಾ ಗೇಲಿ ಮಾಡಿದರು.
“ಅವರು ದೇವರಾಗಿದ್ದರೆ,ಧ್ಯಾನ ಮಾಡುವುದು ಏಕೆ? ಇತರರು ಅವರಿಗಾಗಿ ಧ್ಯಾನ ಮಾಡುತ್ತಾರೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಧ್ಯಾನವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಿದರೆ ಅದು ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹೇಳಿದ್ದಾರೆ.
ಇದನ್ನೂ ಓದಿ; ‘ಅವರು ಪ್ರಾಯಶ್ಚಿತ್ತಕ್ಕೆ ಹೋದರೆ ಒಳ್ಳೆಯದು..’; ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನಕ್ಕೆ ಸಿಬಲ್ ಲೇವಡಿ


