ಲೋಕಸಭೆ ಚುನಾವಣೆಯ ಮತ ಎಣಿಕೆಗೆ ಎರಡು ದಿನಗಳು ಬಾಕಿಯಿರುವಾಗ (ಜೂನ್ 1) ಛತ್ತೀಸ್‌ಗಢದ ಬಿಲಾಸ್‌ಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರ ಸಿಂಗ್ ಯಾದವ್ ಅವರು ಚುನಾವಣಾ ಆಯೋಗದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಚುನಾವಣಾ ಆಯೋಗ ಬಿಜೆಪಿ ಅಭ್ಯರ್ಥಿ ಪರ ಪಕ್ಷಪಾತ ಮಾಡುತ್ತಿದೆ. ಅಣಕು ಮತದಾನದ ವೇಳೆ ತಿಳಿಸಿದ್ದ ಇವಿಎಂ ಸಂಖ್ಯೆಗಳಿಗೂ, ನಮೂನೆ 17ಸಿಯಲ್ಲಿ ನಮೋದಿಸಿರುವ ಸಂಖ್ಯೆಗಳಿಗೂ ವ್ಯತ್ಯಾಸವಿದೆ. ಅನೇಕ ಮತಯಂತ್ರಗಳ ಸಂಖ್ಯೆ ವಿಭಿನ್ನವಾಗಿವೆ. ಕೆಲವೆಡೆ ಮತದಾನ ಮಾಹಿತಿ ಒದಗಿಸುತ್ತಿಲ್ಲ” ಎಂದು ಹೇಳಿದ್ದಾರೆ.
BIG EXPOSE 🚨
Shocking claim over EVM rigging by Congress candidate from Bilaspur, Devendra Yadav ⚡
He accused ECI of changing 611 EVMs midway as its numbers in mock poll & Form-17C are different.
Apparently he had raised this issue on 28th May, but no action taken yet.
He… pic.twitter.com/GEA6tTyA3E
— Ankit Mayank (@mr_mayank) June 2, 2024
“ಚುನಾವಣಾ ಆಯೋಗಕ್ಕೆ ಲಿಖಿತ ದೂರು ನೀಡಿದ್ದೆ. ಆದರೆ, ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಆಯೋಗದ ಪಕ್ಷಪಾತವನ್ನು ತೋರಿಸುತ್ತದೆ. ಲೋಕಸಭೆ ಚುನಾವಣೆ ಫಲಿತಾಂಶ ಏನೇ ಬಂದರೂ, ನಾನು ಬಿಲಾಸ್‌ಪುರ ಬಿಟ್ಟು ಹೋಗುವುದಿಲ್ಲ. ನಾನು ಇಲ್ಲಿನ ಜನರ ಪರ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇನೆ” ಎಂದು ದೇವೇಂದ್ರ ಯಾದವ್ ತಿಳಿಸಿದ್ದಾರೆ. ಚುನಾವಣಾ ಆಯೋಗ ನನ್ನ ಮನವಿ ಪತ್ರಕ್ಕೆ ಪ್ರತಿಕ್ರಿಯೆ ನೀಡದಿದ್ದರೆ ನ್ಯಾಯಾಲಯದ ಮೆಟ್ಟಿಲೇರುತ್ತೇನೆ ಎಂದಿದ್ದಾರೆ.
611 ಮತಗಟ್ಟೆಗಳಲ್ಲಿ ಅಕ್ರಮ ನಡೆದಿರುವ ಆರೋಪ
“ಬಿಲಾಸ್‌ಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 2,251 ಮತಗಟ್ಟೆಗಳ ಪೈಕಿ 611 ಮತಗಟ್ಟೆಗಳಲ್ಲಿ ಇವಿಎಂ ಅಕ್ರಮ ನಡೆದಿದೆ. ಈ ಬಗ್ಗೆ ಎರಡು ದಿನಗಳಲ್ಲಿ ಸ್ಪಷ್ಟೀಕರಣ ನೀಡುವಂತೆ ಕೋರಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಆಯೋಗದಿಂದ ಯಾವುದೇ ಉತ್ತರ ಬಂದಿಲ್ಲ. ಚುನಾವಣಾ ಆಯೋಗ ಮಾಹಿತಿ ಮರೆಮಾಚಲು ಪ್ರಯತ್ನಿಸುತ್ತಿದೆ” ಎಂದು ದೇವೇಂದ್ರ ಯಾದವ್ ಆರೋಪಿಸಿದ್ದಾರೆ.
ಇದನ್ನೂ ಓದಿ : ಇಂದಿನಿಂದ ಹೆದ್ದಾರಿಗಳ ಟೋಲ್ ಶುಲ್ಕ ಶೇ.5ರಷ್ಟು ಏರಿಕೆ


