ಲೋಕಸಭೆ ಚುನಾವಣೆ ಫಲಿತಾಂಶ ಚಾಲ್ತಿಯಲ್ಲಿದ್ದು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಬೆಳಿಗ್ಗೆ ಬೆಳಗ್ಗೆ 11.30ರ ಹೊತ್ತಿಗೆ 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಹತ್ತು ಸ್ಥಾನಗಳಲ್ಲಿ ಮಾತ್ರ ಮುಂದಿದ್ದು, ಕಾಂಗ್ರೆಸ್ ಒಂದು ಕ್ಷೇತ್ರಕ್ಕೆ ಸಮಾಧಾನಪಟ್ಟುಕೊಂಡಿದೆ.
ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಇದೀಗ ನಡೆಯುತ್ತಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ 22 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 18 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಿದೆ. ಉಳಿದ ಎರಡು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಬಿಜೆಪಿ 2014ರಲ್ಲಿ ಕೇವಲ ಎರಡರಿಂದ 2019ರಲ್ಲಿ 18ಕ್ಕೆ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ.
ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಡೈಮಂಡ್ ಹಾರ್ಬರ್‌ನಲ್ಲಿ ಅನುಕೂಲಕರ ಮುನ್ನಡೆ ಕಾಯ್ದುಕೊಂಡಿದ್ದರೆ, ಬಿಜೆಪಿ ನಾಯಕರಾದ ನಿಸಿತ್ ಪ್ರಮಾಣಿಕ್ ಮತ್ತು ದಿಲೀಪ್ ಘೋಷ್ ಕ್ರಮವಾಗಿ ಕೂಚ್ ಬೆಹಾರ್ ಮತ್ತು ಬರ್ಧಮಾನ್-ದುರ್ಗಾಪುರ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಅಲಿಪುರ್ದಾರ್, ಜಲ್ಪೈಗುರಿ, ಡಾರ್ಜಿಲಿಂಗ್, ಕೃಷ್ಣನಗರ ಮತ್ತು ಅಸನ್ಸೋಲ್‌ನಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಟಿಎಂಸಿಯ ಅನರ್ಹಗೊಂಡ ಸಂಸದ ಮಹುವಾ ಮೊಯಿತ್ರಾ ಅವರು ಕೃಷ್ಣನಗರದಲ್ಲಿ ಬಿಜೆಪಿಯ ಅಮೃತಾ ರಾಯ್‌ಗಿಂತ ಹಿಂದುಳಿದಿದ್ದಾರೆ. ಇದೇ ವೇಳೆ, ಮಲ್ದಹಾ ದಕ್ಷಿಣ, ಜಂಗಿಪುರ ಮತ್ತು ಮಲ್ದಹಾ ದಕ್ಷಿಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಬಹರಂಪುರದಲ್ಲಿ ಟಿಎಂಸಿಯ ಅನಿರೀಕ್ಷಿತ ಆಯ್ಕೆ ಯೂಸುಫ್ ಪಠಾಣ್ ವಿರುದ್ಧ ಮುಂದಿದ್ದಾರೆ.
ದೇಶಾದ್ಯಂತ 400 ಸ್ಥಾನಗಳನ್ನು ಗಳಿಸುವ ಗುರಿಯೊಂದಿಗೆ, ಬಿಜೆಪಿಯು ಬಂಗಾಳದಲ್ಲಿ ದೃಢವಾದ ಪ್ರಚಾರವನ್ನು ಪ್ರಾರಂಭಿಸಿತು. ಭ್ರಷ್ಟಾಚಾರ ಮತ್ತು ಸಂದೇಶಖಾಲಿಯಲ್ಲಿನ ಇತ್ತೀಚಿನ ಘಟನೆಯಂತಹ ವಿಷಯಗಳನ್ನು ಎತ್ತಿ ತೋರಿಸಿದೆ. 2019 ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಭಾವಶಾಲಿ ಪ್ರದರ್ಶನವನ್ನು ಪ್ರದರ್ಶಿಸಿತು. ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಬಂಗಾಳವು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈಗ ಘೋಷಿಸಿದ್ದರು.
ರಾಜ್ಯ ಚುನಾವಣೆಗಳಲ್ಲಿ ನೀರಸ ಪ್ರದರ್ಶನದ ನಂತರ, 294 ಸ್ಥಾನಗಳಲ್ಲಿ 77 ಸ್ಥಾನಗಳನ್ನು ಮಾತ್ರ ಗಳಿಸುವ ಮೂಲಕ, ಬಿಜೆಪಿಯು ತನ್ನ ಬೆಂಬಲದ ನೆಲೆಯನ್ನು ಹೆಚ್ಚಿಸಲು ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಮತ್ತು ಸಂದೇಶಖಾಲಿ ಘಟನೆಯ ಸಂತ್ರಸ್ತೆ ಎನ್ನಲಾದ ರೇಖಾ ಪಾತ್ರರಂತಹ ಅಸಾಂಪ್ರದಾಯಿಕ ಅಭ್ಯರ್ಥಿಗಳ ಮೇಲೆ ತನ್ನ ಭರವಸೆಯನ್ನು ಇಟ್ಟುಕೊಂಡಿದೆ.
ಇದನ್ನೂ ಓದಿ; ಒಡಿಶಾ ವಿಧಾನಸಭೆ ಚುನಾವಣೆ: ಬಿಜೆಪಿಗೆ ಭಾರೀ ಮುನ್ನಡೆ


