Homeಮುಖಪುಟಲೋಕಸಭೆಯ ತೀರ್ಪನ್ನು ಹೆಚ್ಚಿನ ಮುಸ್ಲಿಮರು ಭರವಸೆಯಿಂದ ಏಕೆ ನೋಡುತ್ತಾರೆ?

ಲೋಕಸಭೆಯ ತೀರ್ಪನ್ನು ಹೆಚ್ಚಿನ ಮುಸ್ಲಿಮರು ಭರವಸೆಯಿಂದ ಏಕೆ ನೋಡುತ್ತಾರೆ?

- Advertisement -
- Advertisement -

ನೂತನ ಎನ್‌ಡಿಎ ಸರಕಾರದ ಪ್ರಧಾನಿಯಾಗಿ ಮೋದಿ ಮೂರನೇ ಅವಧಿಗೆ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 2014 ಮತ್ತು 2019ರಲ್ಲಿ ಬಿಜೆಪಿ ಬಹುಮತ ಪಡೆದುಕೊಂಡು ಮೋದಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದಾಗ ಆತಂಕಗೊಂಡಿದ್ದಷ್ಟು ಈ ಬಾರಿ ಮುಸ್ಲಿಂ ಸಮುದಾಯ ಒತ್ತಡದಿಂದಿಲ್ಲ, ಈ ಬಾರಿ ಮುಸ್ಲಿಂ ಸಮುದಾಯವು ಆಶಾಭಾವನೆಯ ಭವಿಷ್ಯದ ನಿರೀಕ್ಷೆಯಲ್ಲಿದೆ.

2014 ಮತ್ತು 2019ರಲ್ಲಿ ಬಿಜೆಪಿ ಸಂಪೂರ್ಣ ಬಹುಮತದ ಸರಕಾರವನ್ನು ಹೊಂದಿತ್ತು, ಎನ್‌ಆರ್‌ಸಿ, ಸಿಎಎ, ತ್ರಿವಳಿ ತಲಾಕ್‌ ನಿಷೇಧ ಸೇರಿದಂತೆ ಮುಸ್ಲಿಂ ವಿರೋಧಿ ನಿಯಮಾವಳಿಗಳು, ಗೋಹತ್ಯೆ ನೆಪದಲ್ಲಿ ಮುಸ್ಲಿಮರ ಟಾರ್ಗೆಟ್‌, ಗುಂಪು ಹತ್ಯೆ, ದೆಹಲಿ ಗಲಭೆ ಸೇರಿದಂತೆ ಘಟನೆಗಳು ಮುಸ್ಲಿಮರಲ್ಲಿ ಅಭದ್ರತೆಯನ್ನು ಸೃಷ್ಟಿಸಿತ್ತು. ಮೀಸಲಾತಿಯಂತಹ ಸಾಂವಿಧಾನಿಕ ಅವಕಾಶಗಳನ್ನು ಮುಸ್ಲಿಮರಿಂದ ಕಸಿದುಕೊಳ್ಳುವ ಬಿಜೆಪಿಯ ಮಾರ್ಗಸೂಚಿಗಳು ಮುಸ್ಲಿಮ್‌ ಸಮುದಾಯದ ಆತಂಕಕ್ಕೆ ಕಾರಣವಾಗಿತ್ತು.

ಮೈಸೂರು ದೊರೆ ಟಿಪ್ಪು ಸುಲ್ತಾನ್ ಅವರ ಪೋಟೋ ಒಳಗೊಂಡಿರುವ ಇನ್ಸ್ಟಾಗ್ರಾಂ ಪೋಸ್ಟ್  ಹಂಚಿಕೊಂಡಿದ್ದಕ್ಕಾಗಿ ಕೊಲ್ಲಾಪುರದಲ್ಲಿ ಅಯಾಜ್ ಶೇಖ್ ಎಂಬಾತನ 17 ವರ್ಷದ ಮಗ ಸೇರಿ ಐವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದರು. ಕಳೆದ ಜೂನ್‌ನಲ್ಲಿ ಅಯಾಜ್ ಶೇಖ್ ತನ್ನ 17 ವರ್ಷದ ಮಗನನ್ನು ರಕ್ಷಣೆ ಮಾಡಬೇಕೆಂದು ವಕೀಲರು, ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಓಡಾಡಿದ್ದರಿಂದ ತನ್ನ ಜೀವನಾಧಾರವಾಗಿದ್ದ ಮರಗೆಲಸಕ್ಕೆ ಕೂಡ ಹೋಗಿಲ್ಲ.

ಟಿಪ್ಪು ಸುಲ್ತಾನ್ ಅವರನ್ನು ಮೊಘಲ್ ದೊರೆ ಔರಂಗಜೇಬ್ ಎಂದು ತಪ್ಪಾಗಿ ಭಾವಿಸಿದ ಹಿಂದುತ್ವ ಗುಂಪುಗಳು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಶೇಖ್ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದೇ ವಿಚಾರಕ್ಕೆ ಜೂನ್ 7, 2023ರಂದು ಕೊಲ್ಹಾಪುರದಲ್ಲಿ ಗಲಭೆಗಳು ಪ್ರಾರಂಭವಾದವು, 80 ವಾಹನಗಳು ಮತ್ತು ಅಪಾರ ಮೌಲ್ಯದ ಆಸ್ತಿ ಪಾಸ್ತಿಗಳು ಹಾನಿಯಾಗಿದ್ದವು.

ಅಯಾಜ್ ಶೇಖ್ ಈ ಬಗ್ಗೆ ಮಾತನಾಡುತ್ತಾ, ತನ್ನ ಮಗನ ಬಿಡುಗಡೆ ಬಳಿಕವೂ ನಾವು ತಿಂಗಳುಗಳವರೆಗೆ ಅವನ ಸುರಕ್ಷತೆಯ ಬಗ್ಗೆ ಭಯಪಟ್ಟಿದ್ದೆವು. ಹೆಚ್ಚಿನ ಗಲಭೆಕೋರರು, ನೆರೆಹೊರೆಯ ನಿವಾಸಿಗಳು. ಈ ರೀತಿ ಹಿಂದೆಂದೂ ಸಂಭವಿಸಿರಲಿಲ್ಲ ಮತ್ತು ಅದು ಮತ್ತೆ ಪುನರಾವರ್ತನೆಯಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಮೇ 7ರಂದು ಮತ ಚಲಾಯಿಸಲು ಹೋದಾಗ, ಶಾಂತಿಯನ್ನು ಖಾತ್ರಿಪಡಿಸುವ ರಾಜಕೀಯ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದೆ. ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ ಕಾಂಗ್ರೆಸ್ ಅಭ್ಯರ್ಥಿ ಛತ್ರಪತಿ ಶಾಹು ಶಾಹಜಿ ಪರ ಮತ ಚಲಾಯಿಸಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಛತ್ರಪತಿ ಶಾಹು ಶಾಹಜಿ ಅವರು 76ನೇ ವಯಸ್ಸಿನಲ್ಲಿ ಸಂವಿಧಾನವನ್ನು ರಕ್ಷಿಸಲು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವ ಆಯ್ಕೆ ಮಾಡಿಕೊಂಡೆ ಎಂದು ಮತದಾರರಿಗೆ ಹೇಳಿದ್ದಾರೆ.

ಜೂನ್ 4ರಂದು ಚುನಾವಣಾ ಫಲಿತಾಂಶ ಹೊರಬಿದ್ದಾಗ, ಆಡಳಿತಾರೂಢ ಬಿಜೆಪಿಗೆ ಬಹುಮತದ ಕೊರತೆ ಎದುರಾಗಿದೆ. 303 ಸ್ಥಾನಗಳನ್ನು ಹೊಂದಿದ್ದ ಬಿಜೆಪಿಯ ಸ್ಥಾನಗಳು ಲೋಸಭೆಯಲ್ಲಿ 240ಕ್ಕೆ ಕುಸಿಯಿತು.ಕಳೆದ 10 ವರ್ಷಗಳಲ್ಲಿ ಧ್ವಂಸ, ದ್ವೇಷಪೂರಿತ ಭಾಷಣ ಮತ್ತು ತಾರತಮ್ಯವನ್ನು ಎದುರಿಸಿದ ಹಲವಾರು ಮುಸ್ಲಿಂ ಮತದಾರರಿಗೆ ಈ ತೀರ್ಪು ಸಮಾಧಾನ ತಂದಿದೆ. ಚುನಾವಣಾ ಪ್ರಚಾರದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು “ಒಳನುಸುಳುಕೋರರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರು” ಎಂದು ಉಲ್ಲೇಖಿಸಿದ್ದರು. ಇದು ಮುಸ್ಲಿಮರಲ್ಲಿ ಭವಿಷ್ಯದ ಬಗ್ಗೆ ಆತಂಕವನ್ನುಂಟು ಮಾಡಿತ್ತು.

ಪಶ್ಚಿಮ ಅಸ್ಸಾಂನ ಧುಬ್ರಿಯ ದೂರದ ಹಳ್ಳಿಯೊಂದರ 40 ವರ್ಷದ ಫಾರ್ಮಸಿಸ್ಟ್ ಸೈದುರ್ ರೆಹಮಾನ್ ಮುಲ್ಲಾ ಮಾತನಾಡುತ್ತಾ, ರಾಜ್ಯದಲ್ಲಿ ಮುಸ್ಲಿಮರನ್ನು ಅಮಾನವೀಯಗೊಳಿಸಿದೆ. ಬಿಜೆಪಿಯು ಮುಸ್ಲಿಮರನ್ನು ಗುರಿಯಾಗಿಸುತ್ತಿದೆ, ಅವರನ್ನು ಅವರ ಮನೆಗಳಿಂದ ಹೊರಹಾಕುತ್ತಿದೆ, ಬಾಲ್ಯವಿವಾಹಕ್ಕಾಗಿ ಅವರನ್ನು ಬಂಧಿಸಿ ಜೈಲಿಗೆ ಹಾಕುತ್ತಿದೆ. ಮದರಸಾಗಳನ್ನು ಮುಚ್ಚಲಾಯಿತು ಮತ್ತು ಮಸೀದಿಗಳನ್ನು ಕೆಡವಲಾಯಿತು. ಆದರೆ ಅಂತಹ ದ್ವೇಷ ಮತ್ತು ಪೂರ್ವಾಗ್ರಹದಿಂದ ದೇಶವನ್ನು ಆಳಲು ಸಾಧ್ಯವಿಲ್ಲ ಎಂದು ಫಲಿತಾಂಶಗಳು ತೋರಿಸುತ್ತವೆ.

ಅಸ್ಸಾಂನಲ್ಲಿ ಸರ್ಕಾರ ಬದಲಾವಣೆಯಾಗದ ಹೊರತು ಬಂಗಾಳಿ ಮೂಲದ ಮುಸ್ಲಿಮರಿಗೆ ನೆಮ್ಮದಿಯಿಲ್ಲ. 2021ರಿಂದ, ಅಸ್ಸಾಂನ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಆಡಳಿತವು ರಾಜ್ಯದಲ್ಲಿ ಮುಸ್ಲಿಮರನ್ನು, ವಿಶೇಷವಾಗಿ ಬಂಗಾಳಿ ಮೂಲದವರನ್ನು ಬಹಿರಂಗವಾಗಿ ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ.

ಉತ್ತರಪ್ರದೇಶದ ಸಹರಾನ್‌ಪುರದಲ್ಲಿ ಮಾತನಾಡಿದ 38 ವರ್ಷದ ಮೊಹಮ್ಮದ್ ಸಲೀಂ, ಈ ತೀರ್ಪು ಮುಸ್ಲಿಮರ ವಿರುದ್ಧದ ತನ್ನ ನಿಲುವನ್ನು ಮೃದುಗೊಳಿಸಲು ಬಿಜೆಪಿಯನ್ನು ಒತ್ತಾಯಿಸುತ್ತದೆ. ಎನ್‌ಡಿಎ ಸರ್ಕಾರ ರಚಿಸಿದರೂ ಪೊಲೀಸರ ದೌರ್ಜನ್ಯ ಕಡಿಮೆಯಾಗಲಿದೆ. ಬಿಜೆಪಿಗೆ ತನ್ನಿಚ್ಛೆಯಂತೆ ನಡೆಯುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಂಸತ್ತಿನಲ್ಲಿ ಮುಸ್ಲಿಮರ ಪ್ರಾತಿನಿಧ್ಯದ ಬಗ್ಗೆ ಸಲೀಂ ಭರವಸೆ ಇಟ್ಟಿದ್ದಾರೆ. ಸಲೀಂ ಮತ ಚಲಾಯಿಸಿದ ಸಹರಾನ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಇಮ್ರಾನ್ ಮಸೂದ್ 64,000 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ.

ಬಾರ್ಪೇಟಾ ಮೂಲದ ಕಾನೂನು ಸಂಶೋಧಕ ಶಹೀದ್ ಅಹ್ಮದ್ ಮಾತನಾಡುತ್ತಾ,  ಪ್ರತಿಪಕ್ಷಗಳ ಉತ್ತಮ ಪ್ರದರ್ಶನವು ಪ್ರಜಾಪ್ರಭುತ್ವದ ಬಗ್ಗೆ ಭರವಸೆ ಮೂಡಿಸಿದೆ ಎಂದು ಹೇಳಿದ್ದಾರೆ. ಚುನಾವಣಾ ಆಯೋಗವು ಆಡಳಿತ ಪಕ್ಷಕ್ಕೆ ಒಲವು ತೋರಲು ಅತ್ಯುತ್ತಮವಾಗಿ ಪ್ರಯತ್ನಿಸಿದರೂ, ಜನರು ವಿರೋಧಿಸಿದ್ದಾರೆ ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ್ದಾರೆ ಎಂದು ಅಹ್ಮದ್ ಹೇಳಿದ್ದಾರೆ.

ಇದನ್ನು ಓದಿ: ಆಂಧ್ರದಲ್ಲಿ ಮುಸ್ಲಿಮರ 4% ಮೀಸಲಾತಿಗೆ ಪಕ್ಷವು ಬದ್ಧವಾಗಿದೆ: ಟಿಡಿಪಿ

 

 

 

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Gouri group is very good news channel nanu tumba ista paduttene real hedtira matte no political heege nija wanna munde idi so good work good job I really respect 👍👏👏

LEAVE A REPLY

Please enter your comment!
Please enter your name here

- Advertisment -

2025 ರ ಏಷ್ಯಾ ಪವರ್ ಇಂಡೆಕ್ಸ್‌: ಮೊದಲೆರಡು ಸ್ಥಾನದಲ್ಲಿ ಅಮೆರಿಕ-ಚೀನಾ, ಭಾರತಕ್ಕೆ ಮೂರನೇ ಶ್ರೇಯಾಂಕ

2025 ರ ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ ಭಾರತ ಮೂರನೇ ಶ್ರೇಯಾಂಕವನ್ನು ಪಡೆದುಕೊಂಡಿದೆ. ಆದರೆ, ಯುನೈಟೆಡ್ ಸ್ಟೇಟ್ಸ್-ಚೀನಾ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನವನ್ನು ಪಡೆದುಕೊಂಡಿವೆ ಎಂದು ಜಾಗತಿಕವಾಗಿ ಪ್ರಸಿದ್ಧವಾದ ಚಿಂತಕರ ಚಾವಡಿ ತನ್ನ...

ಸಾಮೂಹಿಕ ಶರಣಾಗತಿ ಘೋಷಿಸಿದ ಎಂಎಂಸಿ-ವಲಯ ಮಾವೋವಾದಿಗಳು; ಭದ್ರತೆ ಒದಗಿಸುವಂತೆ ಮನವಿ

ಮಹಾರಾಷ್ಟ್ರ-ಮಧ್ಯಪ್ರದೇಶ-ಛತ್ತೀಸ್‌ಗಢ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾವೋವಾದಿಗಳು ಜನವರಿ 1, 2026 ರಂದು ಸಾಮೂಹಿಕವಾಗಿ ಶರಣಾಗಲು ಸಿದ್ಧರಿರುವುದಾಗಿ ಘೋಷಿಸಿದ್ದಾರೆ. ಎಂಎಂಸಿ ವಲಯದ ವಕ್ತಾರ ಅನಂತ್ ಹೆಸರಿನಲ್ಲಿ ಹೊರಡಿಸಲಾದ ಪತ್ರದಲ್ಲಿ, ನಮ್ಮ ಗುಂಪು ವೈಯಕ್ತಿಕ ಶರಣಾಗತಿಗಳ ಬದಲಿಗೆ...

ಸಾವರ್ಕರ್ ಮಾನನಷ್ಟ ಮೊಕದ್ದಮೆ ಪ್ರಕರಣ: ಯೂಟ್ಯೂಬ್‌ನಿಂದ ರಾಹುಲ್ ಗಾಂಧಿ ಭಾಷಣ ಪ್ರದರ್ಶನದ ಮನವಿ ತಿರಸ್ಕರಿಸಿದ ಪುಣೆ ನ್ಯಾಯಾಲಯ

ಲಂಡನ್‌ನಲ್ಲಿ ನಡೆದ ಭಾಷಣದಲ್ಲಿ ಬಲಪಂಥೀಯ ನಾಯಕ ವಿನಾಯಕ ಸಾವರ್ಕರ್ ಅವರನ್ನು ಮಾನನಷ್ಟ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ನಡೆಯುತ್ತಿರುವ ಮಾನನಷ್ಟ ಮೊಕದ್ದಮೆಯ ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ, ಯೂಟ್ಯೂಬ್...

ಆನ್‌ಲೈನ್ ರೈಲು ಬುಕಿಂಗ್‌ಗಳಿಗೆ ಮಾತ್ರ ಅಪಘಾತ ವಿಮೆ ಏಕೆ: ಸುಪ್ರೀಂ ಕೋರ್ಟ್ ಪ್ರಶ್ನೆ

ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸುವ ಪ್ರಯಾಣಿಕರಿಗೆ ಮಾತ್ರ ಅಪಘಾತ ವಿಮಾ ರಕ್ಷಣೆಯನ್ನು ಏಕೆ ಒದಗಿಸಲಾಗುತ್ತಿದೆ? ಆಫ್‌ಲೈನ್ ಟಿಕೆಟ್ ಖರೀದಿಸುವವರಿಗೆ ಏಕೆ ವಿಸ್ತರಿಸುತ್ತಿಲ್ಲ ಎಂಬುದರ ಕುರಿತು ಸುಪ್ರೀಂ ಕೋರ್ಟ್ ಭಾರತೀಯ ರೈಲ್ವೆಯಿಂದ ವಿವರಣೆ ಕೇಳಿದೆ. ರೈಲ್ವೆ ವ್ಯವಸ್ಥೆ...

ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶ ಕುರಿತ ವಿಶ್ವಸಂಸ್ಥೆಯ ವಿಚಾರಣಾ ಆಯೋಗದ ಅಧ್ಯಕ್ಷರಾಗಿ ಎಸ್. ಮುರಳೀಧರ್

ಪೂರ್ವ ಜೆರುಸಲೆಮ್ ಮತ್ತು ಇಸ್ರೇಲ್ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದ ಕುರಿತಾದ ವಿಶ್ವಸಂಸ್ಥೆಯ ಸ್ವತಂತ್ರ ಅಂತರರಾಷ್ಟ್ರೀಯ ವಿಚಾರಣಾ ಆಯೋಗದ ಅಧ್ಯಕ್ಷರನ್ನಾಗಿ ಹಿರಿಯ ವಕೀಲ ಮತ್ತು ಒರಿಸ್ಸಾ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್....

ಲೈಂಗಿಕ ದೌರ್ಜನ್ಯ: ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ದೂರು ದಾಖಲು

ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿ ಗರ್ಭಪಾತ ಮಾಡಿಸಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ ನಂತರ ಕೇರಳ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ...

ಉತ್ತರ ಪ್ರದೇಶ-ಮಹಾರಾಷ್ಟ್ರದಲ್ಲಿ ಜನನ ಪ್ರಮಾಣಪತ್ರಕ್ಕೆ ಆಧಾರ್ ಮಾನ್ಯವಲ್ಲ: ಹೊಸ ಮಾರ್ಗಸೂಚಿ

ಜನನ ಪ್ರಮಾಣಪತ್ರಗಳನ್ನು ನೀಡಲು ಆಧಾರ್ ಕಾರ್ಡ್‌ಗಳನ್ನು ಇನ್ನು ಮುಂದೆ ಮಾನ್ಯ ಪುರಾವೆಯಾಗಿ ಅಥವಾ ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸಲಾಗುವುದಿಲ್ಲ ಎಂದು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಘೋಷಿಸಿವೆ. ಈ ಉದ್ದೇಶಕ್ಕಾಗಿ ಆಧಾರ್ ಬಳಸುವುದನ್ನು...

ಉತ್ತರಾಖಂಡ| 150 ವರ್ಷಗಳ ಜಾತಿ ತಡೆಗೋಡೆ ಮುರಿದು ತಮ್ಮದೇ ಮುಖ್ಯಸ್ಥರ ಆಯ್ಕೆ ಮಾಡಿಕೊಂಡ ದಲಿತರು

ಉತ್ತರಾಖಂಡದ ದೂರದ ಜೌನ್ಸರ್-ಬವಾರ್ ಪ್ರದೇಶದ ಬಿಜ್ನು ಬಿಜ್ನಾಡ್ ಗ್ರಾಮದ ದಲಿತ ಸಮುದಾಯವು ಸುಮಾರು 150 ವರ್ಷಗಳಲ್ಲಿ ಮೊದಲ ಬಾರಿಗೆ ತನ್ನದೇ ಆದ 'ಸೈನಾ' (ಗ್ರಾಮದ ಮುಖ್ಯಸ್ಥ) ಆಯ್ಕೆ ಮಾಡುವ ಮೂಲಕ ಐತಿಹಾಸಿಕ ಹೆಜ್ಜೆ...

ರಿಲಯನ್ಸ್ ಇಂಡಸ್ಟ್ರೀಸ್‌ಗೆ ರೂ. 56.44 ಕೋಟಿ ಸಿಜಿಎಸ್‌ಟಿ ದಂಡ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅಹಮದಾಬಾದ್‌ನ ಸಿಜಿಎಸ್‌ಟಿ ಜಂಟಿ ಆಯುಕ್ತರಿಂದ 56.44 ಕೋಟಿ ರೂ. ದಂಡದ ಆದೇಶವನ್ನು ಸ್ವೀಕರಿಸಿದೆ ಎಂದು ಶುಕ್ರವಾರ ತಿಳಿಸಿದೆ. ನವೆಂಬರ್ 25 ರಂದು ಹೊರಡಿಸಲಾದ ಆದೇಶದಲ್ಲಿ, ಕಂಪನಿಯ ಇನ್‌ಪುಟ್...

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...