ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಜಾಗತಿಕ ಲಿಂಗತ್ವ ಸಮಾನತೆ ಸೂಚ್ಯಂಕದಲ್ಲಿ ಭಾರತ ಎರಡು ಸ್ಥಾನ ಕುಸಿದಿದ್ದು 129ನೇ ಸ್ಥಾನಕ್ಕೆ ತಲುಪಿದೆ. ಐಸ್‌ಲ್ಯಾಂಡ್ ಅಗ್ರಸ್ಥಾನ ಕಾಯ್ದುಕೊಂಡಿದೆ.
ವಿಶ್ವ ಆರ್ಥಿಕ ವೇದಿಕೆ ಬುಧವಾರ ಬಿಡುಗಡೆ ಮಾಡಿರುವ ಲಿಂಗತ್ವ ಅಂತರ ಸೂಚ್ಯಂಕ ವರದಿಯಲ್ಲಿ ಫಿನ್‌ಲ್ಯಾಂಡ್ ಎರಡನೇ ಸ್ಥಾನ ಪಡೆದುಕೊಂಡಿದ್ದು, ನಾರ್ವೆ, ನ್ಯೂಜಿಲೆಂಡ್ ಮತ್ತು ಸ್ವೀಡನ್ ಕ್ರಮವಾಗಿ ಮೂರರಿಂದ ಐದನೇ ಸ್ಥಾನದಲ್ಲಿವೆ. ಬ್ರಿಟನ್ 14ನೇ ಸ್ಥಾನ ಮತ್ತು ಅಮೆರಿಕ 43ನೇ ಸ್ಥಾನ ಪಡೆದುಕೊಂಡಿವೆ.
ದಕ್ಷಿಣ ಏಷ್ಯಾದಲ್ಲಿ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಮತ್ತು ಭೂತಾನ್ ನಂತರ ಭಾರತವು ಐದನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನವು ಕೊನೆಯ ಸ್ಥಾನದಲ್ಲಿದೆ.
The latest @wef Global Gender Gap Report was published today.
It includes data on women's representation in AI engineering, which has doubled since 2016. However, the report warns that women remain significantly underrepresented in STEM fields.
Read more about efforts to… pic.twitter.com/foUYKalnoB
— World Economic Forum (@wef) June 12, 2024
ಜಾಗತಿಕವಾಗಿ, ಸುಡಾನ್ 146 ದೇಶಗಳ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ಮೂರು ಸ್ಥಾನಗಳನ್ನು ಕಳೆದುಕೊಂಡು 145ನೇ ಸ್ಥಾನ ಪಡೆದುಕೊಂಡಿದೆ.
ಬಾಂಗ್ಲಾದೇಶ, ಸುಡಾನ್, ಇರಾನ್, ಪಾಕಿಸ್ತಾನ ಮತ್ತು ಮೊರಾಕೊ ಜೊತೆಗೆ ಕಡಿಮೆ ಮಟ್ಟದ ಆರ್ಥಿಕ ಸಮಾನತೆಯನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಸೇರಿದೆ. ಈ ಎಲ್ಲಾ ದೇಶಗಳು ಅಂದಾಜು ಗಳಿಸಿದ ಆದಾಯದಲ್ಲಿ 30 ಪ್ರತಿಶತಕ್ಕಿಂತ ಕಡಿಮೆ ಲಿಂಗ ಸಮಾನತೆಯನ್ನು ದಾಖಲಿಸಿದೆ.
ಮಾಧ್ಯಮಿಕ ಶಿಕ್ಷಣದಲ್ಲಿ ದಾಖಲಾತಿಗೆ ಸಂಬಂಧಿಸಿದಂತೆ ಭಾರತವು ಅತ್ಯುತ್ತಮ ಲಿಂಗ ಸಮಾನತೆಯನ್ನು ತೋರಿಸಿದೆ. ಮಹಿಳೆಯರ ರಾಜಕೀಯ ಸಬಲೀಕರಣದಲ್ಲೂ ಉತ್ತಮ ಅಂಕ ಗಳಿಸಿದ್ದು, ಜಾಗತಿಕವಾಗಿ 65ನೇ ಸ್ಥಾನದಲ್ಲಿದೆ.
ಕಳೆದ 50 ವರ್ಷಗಳಲ್ಲಿ ಮಹಿಳೆಯರು ಮತ್ತು ಪುರುಷರು ರಾಷ್ಟ್ರದ ಮುಖ್ಯಸ್ಥರಾಗಿರುವ ಸಮಾನತೆಗೆ ಸಂಬಂಧಿಸಿದಂತೆ ಭಾರತವು 10 ನೇ ಸ್ಥಾನದಲ್ಲಿದೆ.
140 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಲಿಂಗತ್ವ ಅಸಮಾನತೆ ಅಳಿಸಿ ಹಾಕುವಲ್ಲಿ ಒಟ್ಟಾರೆ ಶೇ.64.1ರಷ್ಟು ಪ್ರಗತಿ ಸಾಧಿಸಿದೆ.
ಜಾಗತಿಕ ಲಿಂಗತ್ವ ಅಂತರವು ಶೇ. 68.5ರಷ್ಟು ಇದ್ದು, ಇದೇ ವೇಗದಲ್ಲಿ ಸಾಗಿದರೆ ಪೂರ್ಣ ಪ್ರಮಾಣದಲ್ಲಿ ಲಿಂಗತ್ವ ಸಮಾನತೆ ಸಾಧಿಸಲು ಇನ್ನೂ 134 ವರ್ಷಗಳು ಬೇಕಾಗಬಹುದು.
ಇದನ್ನೂ ಓದಿ : ರೈತರ ಹತ್ಯೆ ಹೊಣೆಗಾರರಿಗೆ ಕೃಷಿ ಸಚಿವಾಲಯದ ಹೊಣೆ: ರೈತ ಸಂಘಟನೆಗಳಿಂದ ಪ್ರತಿಭಟನೆ


