ನರೇಂದ್ರ ಮೋದಿ ನೇತೃತ್ವದ ನೂತನ ಎನ್‌ಡಿಎ ಸರ್ಕಾರ ರಚನೆಯಾಗಿ ಸಚಿವರಿಗೆ ಖಾತೆಗಳ ಹಂಚಿಕೆಯೂ ಆಗಿದೆ.
ಬಿಹಾರದ ಜೆಡಿ (ಯು) ಮತ್ತು ಆಂಧ್ರ ಪ್ರದೇಶದ ಟಿಡಿಪಿ ಪಕ್ಷಗಳ ಪ್ರಮುಖ ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ಎನ್‌ಡಿಎ ಒಕ್ಕೂಟ, ಲೋಕಸಭೆ ಸ್ಪೀಕರ್ ಆಯ್ಕೆಯ ಲೆಕ್ಕಾಚಾರದಲ್ಲಿದೆ.
ಸರ್ಕಾರ ರಚನೆಯಾಗುವ ಮುನ್ನ ಜೆಡಿಯು ಮತ್ತು ಟಿಡಿಪಿ ಸ್ಪೀಕರ್ ಹುದ್ದೆಗ ಪಟ್ಟು ಹಿಡಿದಿದೆ ಎಂದು ವರದಿಯಾಗಿತ್ತು. ಆ ವಿಷಯ ಸದ್ಯಕ್ಕೆ ತನ್ನಗಾಗಿದ್ದು, ಇನ್ನೂ ಅಂತಿಮಗೊಂಡಿಲ್ಲ.
ಆಡಳಿತ ಎನ್‌ಡಿಎ ಒಕ್ಕೂಟದ್ದಾದರೂ, ಅದೇ ಒಕ್ಕೂಟದವರು ಲೋಕಸಭೆ ಸ್ಪೀಕರ್ ಆಗಬೇಕೆಂದಿಲ್ಲ. ಆದರೂ, ಸಾಮಾನ್ಯವಾಗಿ ಸ್ಪೀಕರ್ ಹುದ್ದೆ ಆಡಳಿತ ಪಕ್ಷದ ಕೂಟದವರಿಗೆ ಸಿಗುವುದು ವಾಡಿಕೆ. ಈ ಬಾರಿಯೂ ಈ ಪದ್ದತಿ ಮುಂದುವರಿಯಬಹುದು.
ಈ ನಡುವೆ ಉಪ ಸ್ಪೀಕರ್ ಹುದ್ದೆ ನಮಗೆ ನೀಡಬೇಕು ಎಂಬ ಬೇಡಿಯಕೆಯನ್ನು ಪ್ರತಿಪಕ್ಷಗಳು ಆಡಳಿತ ಕೂಟದ ಮುಂದೆ ಇಟ್ಟಿದೆ ಎಂದು ವರದಿಯಾಗಿದೆ.
ಇಂಡಿಯಾ ಟುಡೇ ವರದಿ ಪ್ರಕಾರ, ಉಪ ಸ್ಪೀಕರ್ ಹುದ್ದೆ ನೀಡದಿದ್ದರೆ ಸ್ಪೀಕರ್ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಪ್ರತಿಪಕ್ಷಗಳು ಎಚ್ಚರಿಕೆ ನೀಡಿವೆ ಎಂದು ತಿಳಿದು ಬಂದಿದೆ.
Big political war over Speaker's post.
Opposition may field candidate for Speaker if Deputy Speaker post not given: Sources
(@Scribe_Rahul)#News #ITVideo @snehamordani pic.twitter.com/poDVbF6lPC— IndiaToday (@IndiaToday) June 15, 2024
ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಸ್ಥಾನಗಳನ್ನು ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಪಡೆದುಕೊಂಡಿದೆ. ಹಾಗಾಗಿ, ಉಪ ಸ್ಪೀಕರ್ ಹುದ್ದೆ ನೀಡುವಂತೆ ಪಟ್ಟು ಹಿಡಿದಿದೆ. ಹೊಸ ಸರ್ಕಾರದ ಮೊದಲ ಸಂಸತ್ ಅಧಿವೇಶನಕ್ಕೂ ಮುನ್ನ ಈ ವಿಚಾರ ಮುನ್ನೆಲೆಗೆ ಬಂದಿದೆ.
ಸ್ಪೀಕರ್ ಹುದ್ದೆಯ ಜೊತೆಗೆ ಇಂಡಿಯಾ ಒಕ್ಕೂಟ ಪ್ರತಿಪಕ್ಷ ನಾಯಕನನ್ನೂ ಆಯ್ಕೆ ಮಾಡಬೇಕಿದೆ. ಕಾಂಗ್ರೆಸ್ ಈಗಾಗಲೇ ರಾಹುಲ್ ಗಾಂಧಿಯನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾಡಲು ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಇಂಡಿಯಾ ಒಕ್ಕೂಟದ ಇತರ ಪಕ್ಷಗಳ ಮೇಲೆ ನಿರ್ಣಯ ನಿಂತಿದೆ. ಬಹುತೇಕ ರಾಹುಲ್ ಗಾಂಧಿಯೇ ಪ್ರತಿಪಕ್ಷ ನಾಯಕರಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಎನ್‌ಡಿಎ ಸರ್ಕಾರದ ಪತನ ಸನ್ನಿಹಿತವಾಗಿದೆ: ಮಲ್ಲಿಕಾರ್ಜುನ ಖರ್ಗೆ


