ಡೆಟ್ರಾಯಿಟ್ ಉಪನಗರ ರೋಚೆಸ್ಟರ್ ಹಿಲ್ಸ್‌ನಲ್ಲಿರುವ ಸ್ಪ್ಲಾಶ್ ಪ್ಯಾಡ್‌ನಲ್ಲಿ ಬಿಸಿಲಿನ ತಾಪ ತಣಿಸಲು ಹಲವು ಕುಟುಂಬಗಳು ನೀರಿನಲ್ಲಿ ಆಡುತ್ತಿದ್ದಾಗ ಗುಂಡಿನ ಚಕಮಕಿ ಸಂಭವಿಸಿದ್ದು, ಅನೇಕ ಜನರು ಗಾಯಗೊಂಡಿದ್ದಾರೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಓಕ್ಲ್ಯಾಂಡ್ ಕೌಂಟಿ ಶೆರಿಫ್ ಮೈಕ್ ಬೌಚರ್ಡ್ ಮಾತನಾಡಿ, “ನಮ್ಮಲ್ಲಿ 10 ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ; ವಿವಿಧ ರೀತಿಯ ಗಾಯಗಳಿಗೆ ಬಲಿಯಾದವರಂತೆ ತೋರುತ್ತಿದೆ” ಎಂದು ಹೇಳಿದರು.
ಹತ್ತಿರದ ಮನೆಯೊಂದರಲ್ಲಿ ಶಂಕಿತ ವ್ಯಕ್ತಿಯು ಅವಿತುಕೊಂಡಿರುವುದಾಗು ಅವರು ಅನುಮಾನ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿ ಪ್ರಕಾರ ಒಂದು ಬಂದೂಕು ಮತ್ತು ಮೂರು ಖಾಲಿ ಮ್ಯಾಗಜೀನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
“ಪ್ರಾಥಮಿಕವಾಗಿ, ಶಂಕಿತನು 28 ಬಾರಿ ಸಂಭಾವ್ಯವಾಗಿ ಗುಂಡು ಹಾರಿಸಿದಂತೆ ತೋರುತ್ತಿದೆ, ಅನೇಕ ಬಾರಿ ಮರುಲೋಡ್ ಮಾಡಿದ್ದಾನೆ” ಎಂದು ಬೌಚರ್ಡ್ ಹೇಳಿದರು.
ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಇನ್ನೂ ಸಕ್ರಿಯ ಅಪರಾಧ ದೃಶ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರದೇಶಕ್ಕೆ ಬರದಂತೆ ಜನರನ್ನು ಮನವಿ ಮಾಡಿದ್ದಾರೆ.
ಅಧಿಕಾರಿಗಳು ಈವವರೆಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ, ಬಲಿಪಶುಗಳ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ರೋಚೆಸ್ಟರ್ ಹಿಲ್ಸ್ ಆಕ್ಸ್‌ಫರ್ಡ್‌ನ ದಕ್ಷಿಣಕ್ಕೆ 24 ಕಿಲೋಮೀಟರ್ ದೂರದಲ್ಲಿದೆ, ಅಲ್ಲಿ 2021 ರಲ್ಲಿ 15 ವರ್ಷ ವಯಸ್ಸಿನ ನಾಲ್ವರು ಹೈಸ್ಕೂಲ್ ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಂದಿದ್ದರು.
ಇದನ್ನೂ ಓದಿ; ತೆರಿಗೆ ಹೆಚ್ಚಿಸಿದ ಸರ್ಕಾರ: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ


