Homeಅಂತರಾಷ್ಟ್ರೀಯಲಕ್ಷಾಂತರ ರೈತರನ್ನು ಒಮ್ಮೆಗೆ ಸಾವಿಗೆ ದೂಡುವ ಈ ಆರ್‌.ಸಿ.ಇ.ಪಿ ಒಪ್ಪಂದ ನಮಗೆ ಬೇಕೆ?

ಲಕ್ಷಾಂತರ ರೈತರನ್ನು ಒಮ್ಮೆಗೆ ಸಾವಿಗೆ ದೂಡುವ ಈ ಆರ್‌.ಸಿ.ಇ.ಪಿ ಒಪ್ಪಂದ ನಮಗೆ ಬೇಕೆ?

ಆರ್‌.ಸಿ.ಇ.ಪಿ ಒಪ್ಪಂದ ವಿರೋಧಿಸಿ ರೈತ ಚಳವಳಿಗಳಿಂದ ಅಕ್ಟೊಬರ್ 24 ರಂದು ಕರೆ ನೀಡಿರುವ ಭಾರತದಾದ್ಯಂತ ಪ್ರತಿಭಟನೆಗೆ ನಾವೇಕೆ ಭಾಗವಹಿಸಬೇಕು?

- Advertisement -
- Advertisement -

ಅದು 2015-16 ರ ಕಾಲ. ನರೇಂದ್ರ ಮೋದಿಯವರು ಸುಗ್ರಿವಾಜ್ಞೆಯ ಮೂಲಕ ಭೂಸ್ವಾಧೀನ ಕಾಯ್ದೆಯನ್ನು ತರಲು ಹೊರಟು ರೈತರ ಪ್ರತಿರೋಧಕ್ಕೆ ಮಣಿದು ಅವಮಾನಿತರಾಗಿದ್ದರು. ಅವರ ವಿದೇಶಿ ಪ್ರವಾಸಿಗಳು ಶುರುವಾಗಿದ್ದ ಕಾಲವಾದ್ದರಿಂದ ಹೋದ ದೇಶಗಳಿಗೆಲ್ಲಾ ಒಂದೊಂದು ಕೊಡುಗೆ ನೀಡಿಬರುತ್ತಿದ್ದರು. ಚೀನಾಕ್ಕೆ ಹೋದ ಪ್ರಧಾನಿಗಳು ಅವರನ್ನು ಖುಷಿಪಡಿಸಲು ರೇಷ್ಮೆ ಮೇಲಿನ ಆಮದು ಸುಂಕವನ್ನು ಏಕಾಏಕಿ 30% ನಿಂದ 15%ಗೆ ಇಳಿಸಿಬಿಟ್ಟರು. ಚೀನಾದಿಂದ ಭಾರೀ ಪ್ರಮಾಣದಲ್ಲಿ ರೇಷ್ಮೆ ಆಮದಾದುದ್ದರಿಂದ ಇಲ್ಲಿ ರೇಷ್ಮೆ ಬೆಲೆ ಸಂಪೂರ್ಣ ಕುಸಿಯಿತು. ಯಾವ ಮಟ್ಟಕ್ಕೆಂದರೆ 300 ರೂ ಇದ್ದ ಕೆ.ಜಿ ರೇಷ್ಮೆ 120 ರೂಗಳಿಗೆ ಕುಸಿಯಿತು. ರೇಷ್ಮೆ ಬೆಳೆಗಾರರು ಸಾಲು ಸಾಲಾಗಿ ಆತ್ಮಹತ್ಯೆಗೆ ಶರಣಾದರು.

ಅದೇ ಪರಿಸ್ಥಿತಿ ಕಬ್ಬು ಬೆಳೆದ ರೈತರಿಗೂ ಬಂದಿತು. ಏಕೆಂದರೆ ಸಕ್ಕರೆಯ ಮೇಲಿನ ಆಮದು ಸುಂಕವನ್ನು ಸರ್ಕಾರ ದೀಢಿರ್‌ ಎಂದು ಕಡಿಮೆ ಮಾಡಿದ್ದರ ಪರಿಣಾಮ ಬ್ರೆಜಿಲ್‌ ಕ್ಯೂಬಾ ದಂತಹ ಸಕ್ಕರೆ ನಾಡುಗಳಿಂದ ನುಗ್ಗಿದ ಆಮದು ಇಲ್ಲಿನ ರೈತರಿಗೆ ಕಬ್ಬಿಗೆ ಸಮರ್ಪಕ ಮತ್ತು ಸಕಾಲದಲ್ಲಿ ಬೆಲೆ ದೊರಕದಂತೆ ಮಾಡಿತ್ತು. ಇದರಿಂದ ಮಂಡ್ಯ ಜಿಲ್ಲೆಯೊಂದರಲ್ಲಿಯೇ ವರ್ಷಕ್ಕೆ ನೂರಕ್ಕೂ ಹೆಚ್ಚು ರೈತರ ಆತ್ಮಹತ್ಯೆಗಳು ಸಂಭವಿಸಿದ್ದವು.

ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ ಮುಂಬರುವ ವರ್ಷಗಳಲ್ಲಿ ಯಾವ ಬೆಳೆ ಬೆಳೆಯುವ ರೈತರೂ ಸಹ ಬದುಕುಳಿಯಲು ಸಾಧ್ಯವಾಗದಂತಹ ಒಪ್ಪಂದವನ್ನು ಭಾರತ ಸರ್ಕಾರ ಮಾಡಿಕೊಳ್ಳುತ್ತಿದೆ. ಅದೇ ರೈತರನ್ನು ಬೀದಿಗೆ ತಳ್ಳಲಿರುವ ಆರ್‌.ಸಿ.ಇ.ಪಿ ಒಪ್ಪಂದವಾಗಿದೆ.

ಭಾರತದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಜಾಗತೀಕರಣದ WTO ಒಪ್ಪಂದದ ಸುಳಿಗೆ ಸಿಲುಕಿ 4 ಲಕ್ಷಕ್ಕೂ ಅಧಿಕ ರೈತರು ತಮ್ಮ ಜೀವತೆತ್ತಿದ್ದಾರೆ. ಸತತ ಬರ ಮತ್ತು ಅನಿರೀಕ್ಷಿತ ಪ್ರವಾಹಗಳಿಂದಾಗಿ ಬೆಳೆ ಕಳೆದುಕೊಂಡು ಕಂಗೆಟ್ಟಿದ್ದಾರೆ. ಇಂತಹ ಕಡುಕಷ್ಟದ ಸಮಯದಲ್ಲಿ ರೈತರ ಗಾಯದ ಮೇಲೆ ಬರೆ ಎಳೆಯಲು ದುಷ್ಟ ಕೇಂದ್ರ ಸರ್ಕಾರ ಆರ್‌.ಸಿ.ಇ.ಪಿ ಒಪ್ಪಂದಕ್ಕೆ ಮುಂದಾಗಿದೆ.

ಏನಿದು ಆರ್‌.ಸಿ.ಇ.ಪಿ ಒಪ್ಪಂದ??

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌.ಸಿ.ಇ.ಪಿ) ಎಂದು ಕರೆಸಿಕೊಳ್ಳುವ ಈ ಒಪ್ಪಂದವನ್ನು ಭಾರತ ಇತರ ನೆರಹೊರೆಯ 15 ದೇಶಗಳೊಂದಿಗೆ ಮಾಡಿಕೊಳ್ಳುತ್ತಿದೆ. ಇದರಲ್ಲಿ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಂತಹ ಬಲಾಢ್ಯ ದೇಶಗಳೂ ಸೇರಿವೆ.

ಒಪ್ಪಂದದನ್ವಯ ನಮ್ಮ ಆಹಾರ ಮತ್ತು ಕೃಷಿ ಕ್ಷೇತ್ರವನ್ನೂ ಒಳಗೊಂಡಂತೆ ಈ ದೇಶಗಳಲ್ಲಿ ಯಾವುದೇ ಆಮದು ಸುಂಕಗಳಿರುವುದಿಲ್ಲ. ಅಂದರೆ ಮುಕ್ತ ವ್ಯಾಪಾರ. ಒಪ್ಪಂದಕ್ಕೆ ಒಳಪಟ್ಟ ಯಾವ ದೇಶಗಳು ಬೇಕಾದರೂ, ಯಾವ ದೇಶದಲ್ಲಾದರೂ ತಮ್ಮ ಸರಕುಗಳನ್ನು ಮುಕ್ತವಾಗಿ ಮಾರಬಹುದು. ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ.

ನಮಗೇನು ತೊಂದರೆ??

ಇದರಿಂದ ಭಾರತಕ್ಕೇನೂ ತೊಂದರೆ ಎಂದು ನೀವು ಕೇಳಬಹುದು. ಮುಂದುವರಿದ ದೇಶಗಳಿಗೆ ಹೋಲಿಸಿದ್ದಲ್ಲಿ ಭಾರತದಲ್ಲಿ ಕೃಷಿ ಮೇಲಿನ ಹೂಡಿಕೆ ಸಾಕಷ್ಟು ಹೆಚ್ಚಿದೆ. ಉದಾಹರಣೆಗೆ ಒಂದು ಟನ್‌ ಕಬ್ಬು ಬೆಳೆಯಲು ಭಾರತದ ರೈತ ಅಂದಾಜು 2000 ಖರ್ಚು ಮಾಡಿದರೆ ಅದು ಮುಂದುವರಿದ ದೇಶಗಳಲ್ಲಿ ಕೇವಲ 1000 ಖರ್ಚು ಮಾಡಿ ಒಂದು ಟನ್ ಕಬ್ಬು ಬೆಳೆಯುತ್ತಾರೆ. ಕಾರಣವೆಂದರೆ ಬೀಜ, ಗೊಬ್ಬರ ಸೇರಿದಂತೆ ಆ ದೇಶಗಳಲ್ಲಿ ರೈತರಿಗೆ ಹೆಚ್ಚಿನ ಸಬ್ಸಿಡಿ ದೊರೆಯುತ್ತಿದೆ. ಆದರೆ ಭಾರತದಲ್ಲಿ ಈ ಸಬ್ಸಿಡಿಯನ್ನು ದಿನೇ ದಿನೇ ಕಡಿಮೆ ಮಾಡುತ್ತಿದ್ದು ಸಂಪೂರ್ಣ ನಿಲ್ಲಿಸಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಭಾರತ ಮಾಡಿಕೊಂಡಿರುವ WTO ಒಪ್ಪಂದದ ಭಾಗವಾಗಿ ಈ ಸಬ್ಸಿಡಿ ಕಡಿತ ನಡೆಯುತ್ತಿದೆ. ರೈತರಿಗೆ ನೀಡುತ್ತಿರುವ ಸಬ್ಸಿಡಿ ನಿಲ್ಲಿಸದಿದ್ದರೆ ನಿಮಗೆ ಸಾಲ ಕೊಡುವುದಿಲ್ಲ ಎಂದು IMF ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಮೇಲೆ ಒತ್ತಡ ತರುತ್ತಿವೆ.

ಹಾಗಾಗಿ ಕಡಿಮೆ ಖರ್ಚಿನಲ್ಲಿ ಕೃಷಿ ಉತ್ಪಾದನೆಗಳನ್ನು ಆ ದೇಶಗಳು ಉತ್ಪಾದಿಸಿ ನಮ್ಮಲ್ಲಿ ಬಂದು ನಮಗಿಂತಲೂ ಕಡಿಮೆ ದರಕ್ಕೆ ಮಾರುವುದರಿದ ಇಲ್ಲಿನ ರೈತರ ಸ್ಥಿತಿ ಹೇಗಾಗುತ್ತದೆ ನೀವೇ ಊಹಿಸಿ? ರೇಷ್ಮೆ ಮತ್ತು ಮತ್ತು ಸಕ್ಕರೆಯ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದಾಗ ರೈತರು ಸತ್ತರಲೇ ಥೇಟ್ ಅದೇ ಸ್ಥಿತಿ ಇನ್ನು ಹೆಚ್ಚಿನ ಮಟ್ಟದಲ್ಲಿ ಸೃಷ್ಟಿಯಾಗುತ್ತದೆ ಅಷ್ಟೇ..

ಇನ್ನು ಬೀಜ ಸ್ವಾವಲಂಬನೆಯೆಂಬುದು ಇಂದು ಮರೀಚಿಕೆಯ ಮಾತಾಗಿದೆ. 20 ವರ್ಷಗಳ ಹಿಂದೆ ಬಿತ್ತನೆಗೆ ಬೀಜಗಳನ್ನು ಖರೀದಿಸಬೇಕಾಗುತ್ತೆಂಬ ಸುಳಿವು ಯಾರಿಗೂ ಇರಲಿಕ್ಕಿಲ್ಲ ಬಿಡಿ. ಆದರೆ ಈಗ ಪ್ರತಿಯೊಂದು ಬೀಜಗಳಿಗೂ ಬಹುರಾಷ್ಟ್ರೀಯ ದರೋಡೆಕೋರ ಕಂಪನಿಗಳನ್ನು ನಂಬಿಕೂರಬೇಕಿದೆ. ಅವರೋ ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯಡಿ ಎಲ್ಲಾ ಬೀಜಗಳಿಗೂ ಪೇಟೆಂಟ್‌ ಮಾಡಿಕೊಂಡಿದ್ದಾರೆ. ಇನ್ನ ನಮ್ಮ ರೈತರು ಅವರೇಳಿದ ರೇಟಿಗೆ ಬೀಜಗಳನ್ನು ಕೊಳ್ಳುವ ದುಸ್ಥಿತಿ ಬರಲಿದೆ. ಬೇಡ ನಾವೇ ಬೀಜಗಳನ್ನು ಉಳಿಸಿ ವಿನಿಮಯ ಮಾಡಿಕೊಳ್ಳಲು ಹೋದರೆ ಅದಕ್ಕೂ ಅಪರಾಧಿಗಳೆಂಬ ಪಟ್ಟ ಕಟ್ಟಲು ಅವರ ಬಳಿ ಕಾನೂನಿನ ಕುಣಿಗೆ ಇದೆ.

ಈ ಒಪ್ಪಂದದನ್ವಯ ನಮ್ಮ ಕೋರ್ಟುಗಳಲ್ಲಿ ವಿದೇಶಿಗರ ಆಟಾಟೋಪಗಳನ್ನು ಪ್ರಶ್ನಿಸಲು ಬರುವುದಿಲ್ಲ. ಖಾಸಗಿ ಮಧ್ಯಸ್ಥಿಕೆ ನ್ಯಾಯಮಂಡಳಿಗಳಲ್ಲಿ ಮಾತ್ರ ಪ್ರಶ್ನಿಸಬಹುದಾದರೆ ಆ ಶಕ್ತಿ ನಮ್ಮ ರೈತರಿಗೆಲ್ಲಿಂದ ಬರಬೇಕು? ಇನ್ನು ನಮ್ಮ ಸರ್ಕಾರಗಳು ಸಬ್ಸಿಡಿ ರೀತಿಯ ಯಾವುದೇ ಸಹಾಯಗಳನ್ನು ಮಾಡಿದರೆ ಅವರ ಮೆಲೆಯೇ ದೂರು ದಾಖಲಾಗುವ ಅಪಾಯವಿದೆ ಎಂದಾದರೆ ಅವರೆಲ್ಲಿ ರೈತರಿಗೆ ಸಹಾಯ ಮಾಡುತ್ತಾರೆ?

ರೈತರು ಬೆಳೆಯುವುದನ್ನು ಒಂದು ದಿನ ನಿಲ್ಲಿಸಿದರೆ ಸಾಕು ದೇಶ ಅಲ್ಲಾಡಿಹೋಗುತ್ತದೆ… ಇದು ನಿಜವೇ?

ಈ ಮಾತನ್ನು ನಾವು ಆಗ್ಗಾಗ್ಗೆ ಕೇಳುತ್ತಿರುತ್ತೇವೆ. ರೈತರಿದ್ದರೆ ಅನ್ನ, ಇಲ್ಲದಿದ್ದರೆ ಯಾವ ಸರ್ಕಾರಗಳು ಏನು ಮಾಡಲಾಗುವುದಿಲ್ಲ, ರೈತರು ಬೆಳೆಯುವುದನ್ನು ನಿಲ್ಲಿಸಿದರೆ ಸರ್ಕಾರಗಳು ಬಗ್ಗಿಬಿಡುತ್ತವೆ ಎಂದು ಹಲವರು ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಆದರೆ ವಾಸ್ತವವೆನೇಂದರೆ ಆ ಪರಿಸ್ಥಿತಿ ಸದ್ಯಕ್ಕಿಲ್ಲ.

ಏಕೆಂದರೆ ಈ ಮೊದಲೇ ಹೇಳಿದಂತೆ ಭಾರತ ಸರ್ಕಾರ ಆಹಾರಕ್ಕಾಗಿ ಇಂದು ದೇಶಿ ರೈತರನ್ನು ನಂಬಿ ಕೂತಿಲ್ಲ. ಒಂದು ವಿದೇಶದಿಂದ ಬೇಕಾದಷ್ಟು ಆಮದು ಮಾಡಿಕೊಳ್ಳುತ್ತದೆ. ಎರಡನೇದಾಗಿ ಅಂಬಾನಿ, ಅದಾನಿ ಥರದ ದೊಡ್ಡ ದೊಡ್ಡ ಉದ್ದಿಮೆಪತಿಗಳು ಕೃಷಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಲಕ್ಷಾಂತರ ಹೆಕರೆ ಭೂಮಿ ಖರೀದಿಸಿರುವ ಅವರು ಮುಂದೆ ಕೈಗಾರಿಕೆ ಮಾದರಿಯಲ್ಲಿ ಲಕ್ಷಾಂತರ ಹೆಕರೆ ಪ್ರದೇಶದಲ್ಲಿ ಯಂತ್ರಚಾಲಿತ ಕೃಷಿ ಮಾಡಲು ಸಿದ್ದವಿದ್ದಾರೆ. ಈ ರೀತಿಯ ದೊಡ್ಡ ಕೃಷಿಯಿಂದ ಅವರ ಉತ್ಪಾದನಾ ವೆಚ್ಚ ನಮ್ಮ ಊಹೆ ಮೀರಿ ಕಡಿಮೆಯಾಗುತ್ತದೆ. ಉತ್ಪಾದಿಸಿದ ವಸ್ತುಗಳನ್ನು ಮಾರಲು ಅವರದೇ ಮಾಲ್‌ಗಳು, ಚಿಲ್ಲರೆ ಮಳಿಗೆಗಳು ಎಲ್ಲೆಂದರೆ ತಲೆಯೆತ್ತಿವೆ. ಕಂಗಾಲಾದ ರೈತರಿಂದ ಜಮೀನು ಕಿತ್ತುಕೊಂಡು ಈ ರೀತಿಯ ದೊಡ್ಡ ಬಂಡವಾಳಿಗರು ಕೃಷಿ ನಡೆಸಿದರೆ ರೈತರೂ ಮುಗಿದಂತೆಯೇ, ಅವರನ್ನು ನಂಬಿರುವ ಚಿಲ್ಲರೆ ಮಾರಟಗಾರರು ಮುಗಿದಂತೆಯೇ ಸರಿ. ತಮ್ಮ ಜಮೀನು ಮಾರಿದ ರೈತರ ಅದೇ ಜಮೀನನಲ್ಲಿ ಕೂಲಿಯಾಳಾಗಿ ಬಿಡಿಗಾಸಿಗೆ ದುಡಿಯುವ ದಿನ ಖಂಡಿತಾ ದೂರವಿಲ್ಲ.

ಐಕ್ಯ ಹೋರಾಟವೊಂದೇ ದಾರಿ..

ಒಟ್ಟಿನಲ್ಲಿ ಬಹುಮುಖ ಹೊಡೆತ ನೀಡುವ, ಈ ದೇಶದ ರೈತರನ್ನು ಒಳಗೊಂಡಂತೆ ಬಡವರನ್ನು ಮತ್ತೆ ಜೀತಕ್ಕೆ ದೂಡುವ ಭಾರೀ ಹುನ್ನಾರವೊಂದು ಮುಂದಿನ ದಿನಗಳಲ್ಲಿ ಕಾದಿದೆ ಎಂಬುದರಲ್ಲಿ ಸಂದೇಹವೇ ಬೇಡ. ಹಾಗಾಗಿ ನಮ್ಮ ಉಳಿವಿಗಾಗಿ ದೊಡ್ಡ ಹೋರಾಟ ನಡೆಯಲೇಬೇಕಿದೆ. ಆದ್ದರಿಂದ ಈ ಆರ್‌.ಸಿ.ಇ.ಪಿ ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧ ಅಕ್ಟೋಬರ್ 24 ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು ಭಾರೀ ಹೋರಾಟಕ್ಕೆ ರೈತ ಚಳವಳಿಗಳು ಮುಂದಾಗಿವೆ.

“ದೇಶದಲ್ಲಿ ಎರಡೇ ರೀತಿಯ ರೈತರಿದ್ದಾರೆ. ಒಂದು ಆತ್ಮಹತ್ಯೆ ಮಾಡಿಕೊಂಡಿರುವ ರೈತರು ಇನ್ನೊಂದು ಆತ್ಮಹತ್ಯೆ ಮಾಡಿಕೊಳ್ಳಲಿರುವ ರೈತರು ಎಂದು ಹಿರಿಯ ಸಾಮಾಜಿಕ ಚಿಂತಕರಾದ ಶಿವಸುಂದರ್‌ರವರು ಹೇಳಿದ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದೆ”. ಇಷ್ಟು ದಿನ ರೈತರು ಬೆಳೆದ ಅನ್ನತಿಂದು ಅವರ ಋಣದಲ್ಲಿರುವ ಸಾಮಾನ್ಯ ನಾಗರೀಕರೆಲ್ಲರೂ ಈ ಹೋರಾಟದಲ್ಲಿ ಭಾಗವಹಿಸುವ ಮೂಲಕ ರೈತರನ್ನು ಸಾಯದಂತೆ ತಡೆಯುವುದು ಅತೀ ಜರೂರಿನ ಕೆಲಸವಾಗಿದೆ. ಕೇವಲ ಒಂದು ದಿನದ ಹೋರಾಟ ಮಾತ್ರವಲ್ಲದೇ ಈ ವಿಚಾರವನ್ನು ನೂರಾರು ಜನರಿಗೆ ತಲುಪಿಸಿ ಎಚ್ಚರಿಸುವ ಹೋರಾಟವನ್ನು ನಿರಂತರವಾಗಿ ಕಾಪಾಡುವ ಹೊಣೆ ನಮ್ಮೆಲ್ಲದರಾಗಿದೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...