ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ‘ಜೈ ಹಿಂದೂರಾಷ್ಟ್ರ’ ಎಂದು ಉತ್ತರ ಪ್ರದೇಶದ ಬರೇಲಿಯ ಬಿಜೆಪಿ ಸಂಸದ ಛತ್ರಪಾಲ್ ಗಂಗ್ವಾರ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಗಂಗ್ವಾರ್ ಹೇಳಿಕೆಯನ್ನು ಪ್ರತಿಪಕ್ಷ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತು ಅಖಿಲೇಶ್ ಯಾದವ್ ವಿರೋಧಿಸಿದ್ದು, ‘ಇದು ಸಂವಿಧಾನದ ತತ್ವಗಳಿಗೆ ವಿರುದ್ದವಾಗಿದೆ’ ಎಂದಿದ್ದಾರೆ.
Delhi: BJP leader Chhatrapal Singh Gangwar takes oath as a Member of Parliament during the 18th Lok Sabha session pic.twitter.com/uK3RQNQjKV
— IANS (@ians_india) June 25, 2024
ಗಂಗ್ವಾರ್‌ಗೂ ಮುನ್ನ ಪ್ರಮಾಣ ವಚನ ಸ್ವೀಕರಿಸಿದ ಗಾಝಿಯಾಬಾದ್ ಸಂಸದ ಅತುಲ್ ಗರ್ಗ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಆರ್‌ಎಸ್) ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್‌ಗೆ ಜೈಕಾರ ಕೂಗಿದ್ದಾರೆ.
ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು, ‘ಜೈ ಪ್ಯಾಲೆಸ್ತೀನ್’ ಎಂದಿದ್ದಾರೆ. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಮಾಣ ಸ್ವೀಕರಿಸಿದ ಪ್ರಮುಖರು
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಇಂದು ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಕನೌಝ್ ಕ್ಷೇತ್ರದಿಂದ ಈ ಬಾರಿ ಸಂಸತ್‌ನ ಕೆಳಮನೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಖಿಲೇಶ್ ಅವರು ಕೂಡ ಪ್ರಮಾಣ ವಚನ ಸ್ವೀಕಾರದ ವೇಳೆ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದಿದ್ದರು.

ಅಖಿಲೇಶ್ ಯಾದವ್ ಜೊತೆ ಅವರ ಪತ್ನಿ ಮೈನ್‌ಪುರಿ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಡಿಂಪಲ್ ಯಾದವ್ ಕೂಡ ಪ್ರಮಾಣ ವಚನ ಸ್ವೀಕರಿಸಿದರು.

ಮುಝಾಫರ್ ನಗರದಿಂದ ಸಂಸದ ಮಹೇಂದ್ರ ಮಲಿಕ್, ಕೈರಾನಾದ ಇಕ್ರಾ ಚೌಧರಿ, ಫಿರೋಝಾಬಾದ್‌ನ ಅಕ್ಷಯ್ ಯಾದವ್, ಬದೌನ್‌ನ ಆದಿತ್ಯ ಯಾದವ್ ಸೇರಿದಂತೆ ಹಲವರು ಇಂದು ಪ್ರಮಾಣವಚನ ಸ್ವೀಕರಿಸಿದರು.
ಉತ್ತರ ಪ್ರದೇಶದ ನಗೀನಾದಿಂದ ಚುನಾಯಿತರಾದ ಆಝಾದ್ ಸಮಾಜ ಪಕ್ಷದ (ಕಾನ್ಶಿರಾಮ್) ನಾಯಕ ಚಂದ್ರಶೇಖರ್ ಅವರು ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಇಂದು ಗಮನ ಸೆಳೆಯಿತು.
ಇದನ್ನೂ ಓದಿ : ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್


