18ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿರುವ ಓಂ ಬಿರ್ಲಾ ಅವರನ್ನು ಅಭಿನಂದಿಸಿರುವ ರಾಹುಲ್ ಗಾಂಧಿ, “ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ಮಾಡಿಕೊಡಬೇಕು ಮತ್ತು ಭಾರತದ ಸಂವಿಧಾನವನ್ನು ರಕ್ಷಿಸುವ ಕರ್ತವ್ಯವನ್ನು ನಿರ್ವಹಿಸಬೇಕು” ಎಂದು ಒತ್ತಾಯಿಸಿದರು.
ರಾಹುಲ್ ಗಾಂಧಿಯ ಆಶಯಗಳನ್ನೇ ಪುನರುಚ್ಚರಿಸಿದ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷ ಸಮಾಜವಾದಿಯ ಮುಖ್ಯಸ್ಥ ಅಖಿಲೇಶ್ ಯಾದವ್ ” ತಾವು ಪ್ರತಿಕ್ಷಗಳ ಧ್ವನಿಯನ್ನು ಹತ್ತಿಕ್ಕಿವುದಿಲ್ಲ ಎಂಬ ನಿರೀಕ್ಷೆಯಿದೆ” ಎಂದಿದ್ದಾರೆ.
“ಪ್ರತಿ ಪಕ್ಷಗಳು ನೀವು ನಿಮ್ಮ ಕೆಲಸವನ್ನು ಸಮರ್ಥವಾಗಿ ಮುಂದುವರಿಸಬೇಕು ಮತ್ತು ಸದನ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಬಯಸುತ್ತದೆ. ಸಹಕಾರ, ನಂಬಿಕೆಯ ಆಧಾರದ ಮೇಲೆ ಸದನ ನಡೆಯುವುದು ಬಹಳ ಮುಖ್ಯ” ಎಂದು ರಾಹುಲ್ ಹೇಳಿದರು.
#WATCH | Leader of Opposition, Rahul Gandhi says "I am confident that you will allow us to represent our voice, allow us to speak, allow us to represent the voice of the people of India. The question is not how efficiently the House is run. The question is how much of India's… pic.twitter.com/ZrusMlJ4uM
— ANI (@ANI) June 26, 2024
“ಸದನವು ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ. ನೀವು ಆ ಧ್ವನಿಯ ಅಂತಿಮ ತೀರ್ಪುಗಾರರು. ಸಹಜವಾಗಿ, ಸರ್ಕಾರಕ್ಕೆ ಅಧಿಕಾರವಿದೆ. ಆದರೆ, ವಿರೋಧ ಪಕ್ಷವೂ ಭಾರತದ ಧ್ವನಿಯನ್ನು ಪ್ರತಿನಿಧಿಸುತ್ತದೆ. ವಿರೋಧ ಪಕ್ಷದ ಧ್ವನಿಯನ್ನು ಈ ಸದನದಲ್ಲಿ ಪ್ರತಿನಿಧಿಸಲು ಅನುಮತಿಸುವುದು ಬಹಳ ಮುಖ್ಯ. ಸದನ ಎಷ್ಟು ಸಮರ್ಥವಾಗಿ ನಡೆಯುತ್ತದೆ ಎಂಬುವುದು ಪ್ರಶ್ನೆಯಲ್ಲ. ಈ ಸದನದಲ್ಲಿ ಭಾರತದ ಧ್ವನಿಯನ್ನು ಕೇಳಲು ಎಷ್ಟು ಅನುಮತಿಸಲಾಗಿದೆ ಎಂಬುವುದು ಮುಖ್ಯ” ಎಂದರು.
ರಾಹುಲ್ ಗಾಂಧಿಯ ಬಳಿಕ ಸದನವನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್ “ವಿರೋಧ ಪಕ್ಷದ ಧ್ವನಿಯನ್ನು ನೀವು ಹತ್ತಿಕ್ಕುವುದಿಲ್ಲ, ಇನ್ನು ಮುಂದೆ ಯಾವುದೇ ಉಚ್ಚಾಟನೆಗಳು ಇರುವುದಿಲ್ಲ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಹೇಳಿದರು.
“ನೀವು ತಾರತಮ್ಯವಿಲ್ಲದೆ ಮುಂದುವರಿಯುತ್ತೀರಿ ಮತ್ತು ಸ್ಪೀಕರ್ ಆಗಿ, ನೀವು ಪ್ರತಿ ಪಕ್ಷಕ್ಕೂ ಸಮಾನ ಅವಕಾಶ ಮತ್ತು ಗೌರವವನ್ನು ನೀಡುತ್ತೀರಿ ಎಂದು ನಾವು ನಂಬುತ್ತೇವೆ. ನಿಷ್ಪಕ್ಷಪಾತವು ಈ ದೊಡ್ಡ ಹುದ್ದೆಯ ದೊಡ್ಡ ಜವಾಬ್ದಾರಿಯಾಗಿದೆ. ಇಲ್ಲಿ ಕುಳಿತಿರುವ ನೀವು ಪ್ರಜಾಪ್ರಭುತ್ವದ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು” ಎಂದು ಅಖಿಲೇಶ್ ಹೇಳಿದರು.
ಲೋಕ ಸಭೆಯ ಸ್ಪೀಕರ್ ಆಗಿ ಬಿಜೆಪಿ ಅಭ್ಯರ್ಥಿ ಓಂ ಬಿರ್ಲಾ ಬುಧವಾರ (ಜೂನ್ 26) ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಸಂಖ್ಯಾಬಲ ಆಡಳಿತರೂಢ ಸಮ್ಮಿಶ್ರ ಸರ್ಕಾರದ ಪರವಾಗಿ ಇರುವುದರಿಂದ ಎನ್‌ಡಿಎ ಅಭ್ಯರ್ಥಿ ಸ್ಪೀಕರ್ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ : ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ


