ಆಕಸ್ಮಿಕ ಅಪಘಾತದಲ್ಲಿ ಜಾನುವಾರುಗಳು ಬಲಿಯಾಗಿದ್ದಕ್ಕೆ ಸ್ವಯಂಘೋಷಿತ ಗೋರಕ್ಷರು ಬಸ್ ಚಾಲಕನಿಗೆ ಮಾರಣಾಂತಿಕವಾಗಿ ಥಳಿಸಿರುವ ಘಟನೆ ಜಮ್ಮು ಕಾಶ್ಮೀರದ ಕಥುವಾದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಘಟನೆ ನಡೆದಿದೆ. ಕಥುವಾ ಜಿಲ್ಲೆಯ ಘಾಟಿ ಪ್ರದೇಶದಲ್ಲಿ ಬಸ್ಸೊಂದು ಆಕಸ್ಮಿಕವಾಗಿ ಡಿಕ್ಕಿ ಹೊಡೆದ ಪರಿಣಾಮ ಕರು ಮತ್ತು ಎತ್ತು ಸಾವನ್ನಪ್ಪಿದೆ. ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ವಯಂಘೋಷಿತ ಗೋರಕ್ಷಕ ರವೀಂದರ್ ಸಿಂಗ್ ಮತ್ತು ಆತನ ಸಹಚರರು ಬಸ್ ಚಾಲಕ ರಮೇಶ್ ಕುಮಾರ್ ಎಂಬಾತನಿಗೆ ಕಟ್ಟಿಗೆಯಿಂದ ಥಳಿಸಿದ್ದಾರೆ. ಚಾಲಕನ ತಪ್ಪಾಯಿತು ಬಿಟ್ಟು ಬಿಡಿ ಎಂದು ಬೇಡಿಕೊಂಡರೂ ಕರುಣೆ ತೋರಿಸದ ದುಷ್ಕರ್ಮಿಗಳು, ತೀವ್ರವಾಗಿ ಥಳಿಸಿ ಗಂಭೀರ ಸ್ಥಿತಿಯಲ್ಲಿ ಆತನನ್ನು ಬಿಟ್ಟು ಹೋಗಿದ್ದಾರೆ.
Driver Ramesh Kumar pulled out of the vehicle and was brutally assaulted with sticks by 'Cow Vigilante' for accidentally killing stray Calf. Family members and resident's protests in Kathua demanding immediate arrest of the accused Ranveer Singh. pic.twitter.com/epq0lAbK9c
— Mohammed Zubair (@zoo_bear) July 4, 2024
ಗಾಯಗೊಂಡ ಬಸ್ ಚಾಲಕ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯನ್ನು ಖಂಡಿಸಿ ಕಥುವಾದಲ್ಲಿ ಜನರು ಬೀದಿಗಳಿದು ಪ್ರತಿಭಟನೆ ನಡೆಸಿದ್ದು, ಆರೋಪಿ ರವೀಂದರ್ ಸಿಂಗ್ ಅನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದಾರೆ.
ವಿರೇಂದರ್ ಸಿಂಗ್‌ಗೆ ಕಾನೂನು ಕೈಗೆತ್ತಿಕೊಳ್ಳಲು ಯಾವುದೇ ಅಧಿಕಾರ ಇಲ್ಲ. ಆತ ಅಪಘಾತವೆಸಗಿದ್ದರೆ ಪೊಲೀಸರು ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು. ಹಲ್ಲೆಗೊಳಗಾದ ಬಸ್ ಚಾಲಕ ರಮೇಶ್ ಕುಮಾರ್‌ಗೆ ನ್ಯಾಯ ಒದಗಿಸಬೇಕು. ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಯನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಗೋಸಾಗಾಟದ ಶಂಕೆ ಮೇಲೆ ಹರಿಯಾಣದ ಇಬ್ಬರು ನಿಂಬೆ ವ್ಯಾಪಾರಿಗಳಿಗೆ ರಾಜಾಸ್ಥಾನದ ಚುರು ಜಿಲ್ಲೆಯಲ್ಲಿ 20 ಅಧಿಕ ಜನರು ಥಳಿಸಿದ್ದರು.
ಇದನ್ನೂ ಓದಿ : ಹತ್ರಾಸ್ ಕಾಲ್ತುಳಿತ ಪ್ರಕರಣ: ‘ಸತ್ಸಂಗ’ ಆಯೋಜಿಸಿದ್ದ 6 ಮಂದಿ ಬಂಧನ


