ನೂತನ ಬಿಜೆಪಿ ಸಂಸದ ಡಾ. ಕೆ.ಸುಧಾಕರ್ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಸಂಭ್ರಮಕ್ಕೆ ಭಾನುವಾರ (ಜು.07)ದಂದು ನೆಲಮಂಗದಲ್ಲಿ ‘ಬಿಜೆಪಿ-ಜೆಡಿಎಸ್’ ಬೆಂಬಲಿಗರಿಗೆ ಔತಣಕೂಟ ಏರ್ಪಡಿಸಿದ್ದರು. ಪಕ್ಷದ ಸಂಘಟಕರು ಈ ಸಂಭ್ರಮಾಚರಣೆಯಲ್ಲಿ ಬಹಿರಂಗವಾಗಿ ‘ಮದ್ಯ’ ಹಂಚುತ್ತಿರುವ ವಿಡಿಯೊಗಳು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಟ್ರಕ್‌ಗಳಲ್ಲಿ ತಂದ ವಿಸ್ಕಿ ಟೆಟ್ರಾ ಪಾಕೆಟ್ ಮತ್ತು ಬೀರ್ ಬಾಟಲಿಗಳನ್ನು ಪಡೆಯಲು ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದು, ಭದ್ರತೆಗೆ ಬೌನ್ಸರ್‌ಗಳನ್ನು ನಿಯೋಜಿಸಲಾಗಿದೆ. ವಿಶೇಷವೆಂದರೆ ಪೊಲೀಸರ ಸಮ್ಮುಖದಲ್ಲಿ ಮದ್ಯ ಹಂಚಿರುವುದು ಜನರ ಕೋಪಕ್ಕೆ ಕಾರಣವಾಗಿದೆ.
Sanskaari Alcohol distribution to Sanskaari party supporters. No Sanskaari News Agency or News Channel will report on this.
BJP Organizers distributing alcohol to supporters. A truckload of alcohol brought in for the BJP event to distribute it to people during a thanksgiving… pic.twitter.com/9tTC1d6wIv— Mohammed Zubair (@zoo_bear) July 8, 2024
ಚಿಕ್ಕಬಳ್ಳಾಪುರ ಸಂಸದ ಕೆ.ಸುಧಾಕರ್ ಪರವಾಗಿ ಕಾರ್ಯಕ್ರಮ ಆಯೋಜಿಸಿರುವ ನೆಲಮಂಗಲ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಅವರು, ನಿರಪೇಕ್ಷಣಾ ಪತ್ರ ಖೋರಿ ಪೊಲೀಸ್ ಇಲಾಖೆಗೆ ಬರೆದ ಪತ್ರದಲ್ಲಿ ‘ಪಾರ್ಟಿಯಲ್ಲಿ ಮದ್ಯ ನೀಡುವುದಾಗಿ’ ಸ್ಪಷ್ಟವಾಗಿ ತಿಳಿಸಿದ್ದಾರೆ.
“ಮಧ್ಯಾಹ್ನ 12.30 ರಿಂದ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ, ಊಟ ಉಪಚಾರ ವ್ಯವಸ್ಥೆ ಮತ್ತು ಮಧ್ಯ ಇರುತ್ತದೆ” ಎಂದು ಜಗದೀಶ್ ಪೊಲೀಸರುಗೆ ಬರೆದಿದ್ದಾರೆ ಎನ್ನಲಾದ ಪತ್ರದ ಪ್ರತಿ ಮಾಧ್ಯಮಗಳಿಗೆ ಲಭ್ಯವಾಗಿದೆ.
ಆದರೆ, ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಸಮಾರಂಭದಲ್ಲಿ ಮದ್ಯ ಸೇವಿಸದಂತೆ ಸಂಘಟಕರಿಗೆ ಸೂಚಿಸಿದ್ದು, ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ಮದ್ಯ ಪೂರೈಕೆ ಮಾಡದಂತೆ ಪೊಲೀಸ್ ಇಲಾಖೆ ನಿರ್ಬಂಧ ವಿಧಿಸಿ ಸಂಘಟಕರಿಗೆ ತಿಳಿಸಿತ್ತು. ಷರತ್ತುಗಳನ್ನು ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಲಾಗಿದೆ. ಆದರೂ ಮದ್ಯ ನೀಡಲು ಅಬಕಾರಿ ಇಲಾಖೆಯಿಂದ ಅನುಮತಿ ಪಡೆದಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎಂಎಸ್ ರಕ್ಷಾ ರಾಮಯ್ಯ ಅವರನ್ನು 1.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಕೆ. ಸುಧಾಕರ್ ಸೋಲಿಸಿದ್ದಾರೆ. ಚಿಕ್ಕಬಳ್ಳಾಪುರವು ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ ಒಂದಾಗಿದೆ; 1977 ರಲ್ಲಿ ಈ ಕ್ಷೇತ್ರವು ಅಸ್ತಿತ್ವಕ್ಕೆ ಬಂದಿತು.
ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಏಪ್ರಿಲ್ 26 ರಂದು ನಡೆದಿದ್ದು, ಶೇ.77 ರಷ್ಟು ಮತದಾನವಾಗಿದೆ. ಜುನ್ 4ರಂದು ಫಲಿತಾಂಶ ಪ್ರಕಟವಾಗಿತ್ತು.
ಇದನ್ನೂ ಓದಿ; ಜಗನ್ನಾಥ ರಥ ಯಾತ್ರೆಯಲ್ಲಿ ಅವಘಡ; ಕಾಲ್ತುಳಿತದಿಂದ ಒರ್ವ ಸಾವು, 15 ಜನರಿಗೆ ಗಾಯ


