Homeಕರ್ನಾಟಕ'ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಬಿಜೆಪಿ ದೇಶಕ್ಕೆ ಹಾನಿಕರ..'; ಸುಧಾಕರ್ 'ಎಣ್ಣೆ ಪಾರ್ಟಿ'ಗೆ ಕಾಂಗ್ರೆಸ್ ಲೇವಡಿ

‘ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಬಿಜೆಪಿ ದೇಶಕ್ಕೆ ಹಾನಿಕರ..’; ಸುಧಾಕರ್ ‘ಎಣ್ಣೆ ಪಾರ್ಟಿ’ಗೆ ಕಾಂಗ್ರೆಸ್ ಲೇವಡಿ

- Advertisement -
- Advertisement -

ನೂತನ ಬಿಜೆಪಿ ಸಂಸದ ಡಾ. ಕೆ.ಸುಧಾಕರ್ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಸಂಭ್ರಮಕ್ಕೆ ಭಾನುವಾರ (ಜು.07)ದಂದು ನೆಲಮಂಗದಲ್ಲಿ ‘ಬಿಜೆಪಿ-ಜೆಡಿಎಸ್’ ಬೆಂಬಲಿಗರಿಗೆ ಏರ್ಪಡಿಸಿದ್ದ ‘ಎಣ್ಣೆ ಪಾರ್ಟಿ’ ಕುರಿತು ಕಾಂಗ್ರೆಸ್ ಲೇವಡಿ ಮಾಡಿದೆ. ‘ಸಾರ್ವಜನಿಕರಿಗೆ ಎಚ್ಚರಿಕೆ! ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಬಿಜೆಪಿ ದೇಶಕ್ಕೆ ಹಾನಿಕರ’ ಎಂದು ಕಾಲೆಳೆದಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್, “ಊಟನೂ ನಮ್ದು ಎಣ್ಣೆನೂ ನಮ್ದು ಎನ್ನುವ ಬಿಜೆಪಿ ಪಕ್ಷ
‘ಬಾರ್ ಜನತಾ ಪಾರ್ಟಿ’ ಎಂದು ಹೆಸರು ಬದಲಿಸಿಕೊಳ್ಳುವುದು ಸೂಕ್ತ! ಜನಸಾಮಾನ್ಯರನ್ನು ಮದ್ಯದ ದಾಸರಾಗಲು ಪ್ರೋತ್ಸಾಹಿಸುವ ಬಿಜೆಪಿಯಿಂದ ಜನರ ಉದ್ದಾರವನ್ನು ಬಯಸುವುದು ಮೂರ್ಖತನವಾಗುತ್ತದೆ. ಧರ್ಮ, ಸಂಸ್ಕೃತಿಗಳ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವ ಬಿಜೆಪಿಯ ಅಸಲಿ ಸಂಸ್ಕೃತಿ ಮಹಿಳಾ ಪೀಡನೆ, ಹೆಂಡದ ಸೇವನೆ! ಸಂಸದ ಸುಧಾಕರ್ ಅವರು ಜನರಿಗೆ ಮದ್ಯದ ಬಾಟಲಿಗಳನ್ನು ಹಂಚುವ ಮೂಲಕ ಬಿಜೆಪಿಯ ನೈಜ ಸಂಸ್ಕೃತಿಯನ್ನು ಬಯಲು ಮಾಡಿದ್ದಾರೆ. ಸಾರ್ವಜನಿಕರಿಗೆ ಎಚ್ಚರಿಕೆ, ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಬಿಜೆಪಿ ದೇಶಕ್ಕೆ ಹಾನಿಕರ” ಎಂದು ಹೇಳಿದೆ.

ಸಂಸ್ಕಾರಿ ಪಕ್ಷದ ಬೆಂಬಲಿಗರಿಗೆ ಸಂಸ್ಕಾರಿ ಮದ್ಯ ವಿತರಣೆ

ದೇಶದ ಖ್ಯಾತ ಫ್ಯಾಕ್ಟ್‌-ಚೆಕ್ಕರ್, ‘ಆಲ್ಟ್‌ ನ್ಯೂಸ್’ ಸಂಸ್ಥಾಪಕ ಮಹಮದ್ ಝುಬೇರ್ ಅವರು ಮದ್ಯ ಹಂಚುವ ವಿಡಿಯೊಗಳನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ‘ಸಂಸ್ಕಾರಿ ಪಕ್ಷದ ಬೆಂಬಲಿಗರಿಗೆ ಸಂಸ್ಕಾರಿ ಮದ್ಯ ವಿತರಣೆ’ ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ಸಂಸದ ಸುಧಾಕರ್ ಅವರನ್ನು ಟ್ಯಾಗ್‌ ಮಾಡಿ ಪೋಸ್ಟ್‌ ಮಾಡಿರುವ ಅವರು, “ಸಂಸ್ಕಾರಿ ಪಕ್ಷದ ಬೆಂಬಲಿಗರಿಗೆ ಸಂಸ್ಕಾರಿ ಮದ್ಯ ವಿತರಣೆ. ಯಾವುದೇ ಸಂಸ್ಕಾರಿ ನ್ಯೂಸ್ ಏಜೆನ್ಸಿ ಅಥವಾ ನ್ಯೂಸ್ ಚಾನೆಲ್ ಈ ಬಗ್ಗೆ ವರದಿ ಮಾಡುವುದಿಲ್ಲ. ಬೆಂಬಲಿಗರಿಗೆ ಮದ್ಯ ಹಂಚುತ್ತಿರುವ ಬಿಜೆಪಿ ಸಂಘಟಕರು. ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರದಿಂದ ಬಿಜೆಪಿ ಸಂಸದರಾಗಿ ಚುನಾವಣೆಯಲ್ಲಿ ಗೆದ್ದ ಕರ್ನಾಟಕದ ಮಾಜಿ ಆರೋಗ್ಯ ಸಚಿವರಿಂದ ನೆಲಮಂಗಲದಲ್ಲಿ ನಡೆದ ಕೃತಜ್ಞತಾ ಸಮಾರಂಭದಲ್ಲಿ ಜನರಿಗೆ ಹಂಚಲು ಬಿಜೆಪಿ ಕಾರ್ಯಕ್ರಮಕ್ಕೆ ತಂದಿದ್ದ ಟ್ರಕ್ ಮದ್ಯ, 650 ಬಿಯರ್ ಬಾಕ್ಸ್ ಹಾಗೂ 450 ಮದ್ಯದ ಬಾಕ್ಸ್ ಇತ್ತು” ಎಂದು ಹೇಳಿದ್ದಾರೆ.

“ಸಾಮಾನ್ಯ ವ್ಯಕ್ತಿ ಮತ್ತು ರಾಜಕಾರಣಿಗಳಿಗೆ ವಿಭಿನ್ನ ನಿಯಮಗಳು” ಎಂದು ಆಗ್ಲವಾಹಿನಿ ಪತ್ರಕರ್ತೆ ನಬಿಲಾ ಜಮಾಲ್ ಎಕ್ಸ್‌ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

“ಚಿಕ್ಕಬಳ್ಳಾಪುರದಿಂದ ನೂತನವಾಗಿ ಆಯ್ಕೆಯಾದ ಸಂಸದ ಡಾ.ಕೆ.ಸುಧಾಕರ್ ಅವರ ಚುನಾವಣಾ ಗೆಲುವಿನ ನಂತರ ಕರ್ನಾಟಕದಲ್ಲಿ ಮೈದಾನದಲ್ಲಿ ಕುಡಿತದ ಪಾರ್ಟಿ ಆಯೋಜಿಸಲಾಗಿದೆ. ದೊಡ್ಡ ಟ್ರಕ್‌ಗಳಲ್ಲಿ ತಂದ ಬಾಟಲಿಗಳನ್ನು ಸಂಗ್ರಹಿಸಲು ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಪೊಲೀಸರ ಮುಂದೆಯೇ ಹಂಚುತ್ತಿದ್ದಾರೆ. ಬಿಜೆಪಿಯ ಅಧಿಕೃತ ಲೆಟರ್‌ಹೆಡ್ ಸಮಾರಂಭದಲ್ಲಿ ಮದ್ಯಪಾನಕ್ಕೆ ಅನುಮತಿ ಕೋರಿದೆ. ಮದ್ಯವನ್ನು ಪೂರೈಸಲು ಅನುಮತಿ ನೀಡಲಾಗಿಲ್ಲ ಎಂದು ಪೊಲೀಸರು ಹೇಳುತ್ತಾರೆ ಮತ್ತು ಪರಿಣಾಮಗಳ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದರು. ಆದರೆ, ಅಬಕಾರಿ ಡಿಪಿಟಿಯು ಪೊಲೀಸರ ಒಪ್ಪಿಗೆಯಿಲ್ಲದೆ ಅವರಿಗೆ ಅನುಮೋದನೆ ನೀಡಿದೆ ಎಂದು ಆರೋಪಿಸಲಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.

ಸಂಸದ ಸುಧಾಕರ್ ಸ್ಪಷ್ಟನೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಡಾ. ಕೆ.ಸುಧಾಕರ್, “20 ವರ್ಷದ ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ಮದ್ಯ ಹಂಚಿಕೆ ಮಾಡಿಲ್ಲ; ಆ ರಾಜಕೀಯ ನನಗೆ ಅವಶ್ಯಕತೆ ಇಲ್ಲ. ಈ ರೀತಿ ಮದ್ಯ ಹಂಚಿ ರಾಜಕೀಯ ಮಾಡುವುದು ತಪ್ಪು. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ” ಎಂದು ​ ಸ್ಪಷ್ಟನೆ ನೀಡಿದ್ದಾರೆ.

“ತಾಲೂಕಿನ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ನನಗೆ ಅಭಿನಂದಿಸಲು, ನನ್ನನ್ನೂ ಮತ್ತು ಪ್ರತಿಪಕ್ಷದ ನಾಯಕ ಆರ್​. ಅಶೋಕ್​ ಅವರನ್ನು ಕರೆದಿದ್ದರು. ಎಲ್ಲ ಆಯೋಜನೆಯನ್ನು ಅವರೇ ಮಾಡಿದ್ದರು. ನಾವು ಅಲ್ಲಿಗೆ ಹೋಗಿ ಕಾರ್ಯಕ್ರಮ ಮುಗಿಸಿ ಬಂದಿದ್ದೇವೆ. ನಾನು ಬಂದ ನಂತರದ ಅಲ್ಲಿ ನಡೆದ ವಿಚಾರದ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಅದು ಆಯೋಜಿಸಿದವರು ಮಾಡಿದ್ದಾರಾ? ಅಥವಾ ಅಲ್ಲಿಗೆ ಬಂದವರು ಮದ್ಯ ಸೇವಿಸಿದ್ದರಾ ಎಂಬ ಮಾಹಿತಿ ನನಗಿಲ್ಲ. ನಮ್ಮ ಅಥವಾ ಜೆಡಿಎಸ್ ಪಕ್ಷದ ಯಾರಾದರೂ ಕಾರ್ಯಕರ್ತರು ಹೀಗೆ ಮಾಡಿದ್ದರೆ, ಆಯೋಜನೆ ಮಾಡಿದ್ರೆ ಅದು ತಪ್ಪು” ಎಂದಿದ್ದಾರೆ.

ಇದನ್ನೂ ಓದಿ;  ಗೆಲುವಿನ ಸಂಭ್ರಮಾಚರಣೆಯಲ್ಲಿ ಸಾರ್ವಜನಿಕವಾಗಿ ‘ಮದ್ಯ’ ಹಂಚಿಕೆ; ಬಿಜೆಪಿ ಎಂಪಿ ಸುಧಾಕರ್ ವಿರುದ್ಧ ಜಾಲತಾಣದಲ್ಲಿ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...