ನಾಲ್ವರು ವ್ಯಕ್ತಿಗಳು ಮಹಿಳೆಯೊಬ್ಬರ ಕೈ, ಕಾಲು ಹಿಡಿದಿರುವುದು ಮತ್ತು ಇನ್ನಿಬ್ಬರು ವ್ಯಕ್ತಿಗಳು ದೊಣ್ಣೆಯಿಂದ ಆಕೆಗೆ ಕ್ರೂರವಾಗಿ ಥಳಿಸುತ್ತಿರುವ ವಿಡಿಯೋವೊಂದು ನಿನ್ನೆಯಿಂದ (ಜುಲೈ 9) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಂತ ಮಜುಂದಾರ್ “ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕನ ಆಪ್ತ ಜಯಂತ್ ಸಿಂಗ್ ಮತ್ತು ಆತನ ಸಹಚರರು ಬಾಲಕಿಗೆ ಥಳಿಸಿದ್ದಾರೆ ಎಂದು ಆರೋಪಿಸಿದ್ದು, ಉತ್ತರ 24 ಪರಗಣ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
Absolutely appalled by the emerging video from Taltala Club, Kamarhati, showing Jayanta Singh, a close associate of TMC MLA Madan Mitra, brutally attacking a girl. This heinous act under a government that claims to champion women's rights is a disgrace to humanity. pic.twitter.com/BggErT3iyw
— Dr. Sukanta Majumdar (@DrSukantaBJP) July 8, 2024
“ಟಿಎಂಸಿ ಶಾಸಕ ಮದನ್ ಮಿತ್ರಾ ಅವರ ಆಪ್ತ ಜಯಂತ್ ಸಿಂಗ್ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಕಮರ್ಹಟಿಯ ತಲ್ತಾಲಾ ಕ್ಲಬ್‌ನಿಂದ ಹೊರ ಹೊಮ್ಮಿರುವ ಈ ವಿಡಿಯೋ ನೋಡಿ ಸಂಪೂರ್ಣವಾಗಿ ದಿಗ್ಭ್ರಮೆಗೊಂಡಿದ್ದೇನೆ. ಮಹಿಳಾ ಹಕ್ಕುಗಳನ್ನು ಪ್ರತಿಪಾದಿಸುತ್ತೇವೆ ಎಂದು ಹೇಳಿಕೊಳ್ಳುವ ಸರ್ಕಾರದ ಅಡಿಯಲ್ಲಿ ಈ ಹೇಯ ಕೃತ್ಯವು ಮಾನವೀಯತೆಗೆ ಅವಮಾನವಾಗಿದೆ” ಎಂದು ಸುಕಂತ ಮಜುಂದಾರ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ತಲೆ ಮೇಲೆ ಬಿಳಿ ಬಣ್ಣದ ಬಟ್ಟೆ ಸುತ್ತಿಕೊಂಡಿರುವ ವ್ಯಕ್ತಿ ಜಯಂತ್ ಸಿಂಗ್ ಆಗಿದ್ದು, ಆತ ಮಹಿಳೆಯ ಕಾಲು ಹಿಡಿದುಕೊಂಡಿದ್ದಾನೆ. ಆತನ ಸಹಚರರಲ್ಲಿ ಮೂವರು ಮಹಿಳೆಯ ಕೈ ಕಾಲು ಹಿಡಿದುಕೊಂಡಿದ್ದು, ಇನ್ನಿಬ್ಬರು ಥಳಿಸಿದ್ದಾರೆ. ಈ ಘಟನೆ ಮಾರ್ಚ್ 2021ರಲ್ಲಿ ನಡೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಹೇಳಿದೆ.
“ನಾವು ವಿಡಿಯೋವನ್ನು ಪರಿಶೀಲಿಸುತ್ತಿದ್ದು, ಹಲ್ಲೆಗೊಳಗಾದ ವ್ಯಕ್ತಿಯನ್ನು ಮತ್ತು ತಪ್ಪಿತಸ್ಥರನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದೇವೆ. ಹಲ್ಲೆಗೊಳಗಾದ ವ್ಯಕ್ತಿ ಪುರುಷನೋ ಮಹಿಳೆಯೋ ಎಂದು ನೋಡುತ್ತಿದ್ದೇವೆ. ಈ ವಿಡಿಯೋ 2021ರಲ್ಲಿ ಓರ್ವ ಪುರುಷ ಮತ್ತು ಮಹಿಳೆ ಕಳ್ಳರು ಎಂಬ ಶಂಕೆಯ ಮೇಲೆ ಕ್ಲಬ್ ಬಳಿ ಸಿಕ್ಕಿಬಿದ್ದ ಘಟನೆಯದ್ದಾಗಿರಹುದು. ಅದೇ ಘಟನೆಯದ್ದಾ? ಎಂದು ನಾವು ಪರಿಶೀಲಿಸುತ್ತಿದ್ದೇವೆ” ಎಂದು ಬ್ಯಾರಕ್‌ಪುರದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ವೈರಲ್ ವಿಡಿಯೋ ಜೊತೆಗೆ ಮತ್ತೊಂದು ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ “ಪಶ್ಚಿಮ ಬಂಗಾಳದ ಚೋಪ್ರಾದಲ್ಲಿ ಮೆಹರುನ್ನಿಸಾಗೆ ಥಳಿಸಿರುವುದು ಮಮತಾ ಬ್ಯಾನರ್ಜಿಯ ಪುರುಷರು ತ್ವರಿತ ನ್ಯಾಯವನ್ನು ವಿತರಿಸುವ ಪ್ರತ್ಯೇಕ ಉದಾಹರಣೆಯಲ್ಲ. ಟಿಎಂಸಿ ಶಾಸಕ ಮದನ್ ಮಿತ್ರ ಅವರ ಸಹವರ್ತಿ ಜಯಂತ ಸಿಂಗ್ ಮತ್ತು ಅವರ ಗ್ಯಾಂಗ್, ವಾಡಿಕೆಯಂತೆ ಮಹಿಳೆಯರಿಗೆ ಸಾರ್ವಜನಿಕವಾಗಿ ಥಳಿಸಿದೆ. ದಮ್ ದಮ್‌ನ ಕಮರ್ಹಟಿ ಮುನ್ಸಿಪಾಲಿಟಿಯ ಭಾಗವಾಗಿರುವ ಅರಿದಹಾದಲ್ಲಿ ಅವರು ಇತ್ತೀಚೆಗೆ ಮಹಿಳೆ ಮತ್ತು ಆಕೆಯ ಮಗಳನ್ನು ಹತ್ಯೆ ಮಾಡಿದ್ದಾರೆ. ಇದು ಅವರ ಕನಿಷ್ಠ ಅಪರಾಧವಾಗಿದೆ” ಎಂದಿದ್ದಾರೆ.
Flogging of Meherun Nesha in West Bengal’s Chopra was not an isolated instance of Mamata Banerjee’s men dispensing instant justice…
Jayanta Singh, an associate of TMC MLA Madan Mitra, and his gang, routinely whip women in public. They recently lynched a woman and her daughter… pic.twitter.com/e4dmETrWru
— Amit Malviya (@amitmalviya) July 8, 2024
“ಅದೇ ಟಿಎಂಸಿ ಪುರುಷರ ಮತ್ತೊಂದು ಭಯಾನಕ ವೀಡಿಯೊ (13 ಸೆಕೆಂಡ್). ಕಮರ್ಹಟಿ ವಿಧಾನಸಭಾ ಕ್ಷೇತ್ರದ ತಲ್ತಾಲಾ ಕ್ಲಬ್‌ನ ತಮ್ಮ ‘ಇನ್ಸಾಫ್ ಸಭಾ’ದಲ್ಲಿ ಅಸಹಾಯಕ ಹುಡುಗಿಗೆ ಕ್ರೂರವಾಗಿ ಥಳಿಸಿರುವುದು. ಇದು ಆರು ತಿಂಗಳ ಹಿಂದೆ ನಡೆದ ಘಟನೆ. ದೂರದ ಪ್ರದೇಶವಲ್ಲದ ದಮ್ ಡಮ್‌ನಲ್ಲಿ ಇದು ಸಂಭವಿಸಿದೆ. ಅಂದರೆ ಗ್ರೇಟರ್ ಕೋಲ್ಕತ್ತಾ ಪ್ರದೇಶದ ಭಾಗದಲ್ಲಿ ” ಎಂದು ಬರೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವೈರಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ವಕ್ತಾರ ರಿಜು ದತ್ತಾ, “ಇದು ಮಾರ್ಚ್ 2021ರ ಹಳೆಯ ವಿಡಿಯೋ ಆಗಿದೆ. ಜಯಂತ್ ಸಿಂಗ್ ಮತ್ತು ಆತನ ಸಹಚರರು ಆರೋಪಿಗಳಾಗಿದ್ದಾರೆ. ವಿಡಿಯೋದಲ್ಲಿರುವ ಇಬ್ಬರು ವ್ಯಕ್ತಿಗಳು ಪ್ರಸ್ತುತ ಜೈಲಿನಲ್ಲಿದ್ದಾರೆ. ವಿಡಿಯೋದಲ್ಲಿ ಹಲ್ಲೆಗೊಳಗಾದ ವ್ಯಕ್ತಿ ಪುರುಷ ಆಗಿರಬಹುದು. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ. ಬಿಜೆಪಿಯು ಬಂಗಾಳದಲ್ಲಿ ತಿರಸ್ಕೃತಗೊಂಡ ನಂತರ, ಟಿಎಂಸಿಯನ್ನು ಗುರಿಯಾಗಿಸಲು ಮತ್ತು ರಾಜ್ಯವನ್ನು ದೂಷಿಸಲು ಎಲ್ಲಾ ರೀತಿಯ ವಿಡಿಯೋಗಳನ್ನು ಬಳಸುತ್ತಿದೆ ಎಂಬುದು ಸ್ಪಷ್ಟವಾಗಿದೆ” ಎಂದಿದ್ದಾರೆ.
This is an old video of March 2021. The accused is Jayant Singh and his associates.
Two persons seen in the video are currently in jail.
The victim person seen in this video may be a male person. This is being verified.
Quite obvious that BJP, after being rejected in… pic.twitter.com/PCYk9mBo5W
— 𝐑𝐢𝐣𝐮 𝐃𝐮𝐭𝐭𝐚 (@DrRijuDutta_TMC) July 8, 2024
ಟಿಎಂಸಿ ನಾಯಕಿ ಸಾಗರಿಕ ಘೋಷ್ ಕೂಡ ಬಿಜೆಪಿ ಪೋಸ್ಟ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದು, ಅಪರಾಧಗಳ ಮೇಲೆ ಶೂನ್ಯ ಸಹಿಷ್ಣು ಎಂಬ ಬಂಗಾಳ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ವಿಡಿಯೋದಲ್ಲಿ ಕಾಣುತ್ತಿರುವ ಅಪರಾಧ ಕೃತ್ಯವೆಸಗಿದ ಎಲ್ಲರ ಮೇಲೂ ಕ್ರಮ ಕೈಗೊಳ್ಳಲಾಗಿದೆ ಮತ್ತು ಕ್ರೈಮ ಕೈಗೊಳ್ಳಲಾಗುತ್ತದೆ. ಟಿಎಂಸಿಯನ್ನು ಗುರಿಯಾಗಿಸಲು ಮತ್ತು ಬಂಗಾಳವನ್ನು ಅವಮಾನಿಸಲು ಸೋತಿರುವ ಬಿಜೆಪಿ ಯಾವುದೇ ಹಳೆಯ ವಿಡಿಯೋವನ್ನು ಬಳಸಿಕೊಳ್ಳಬಹುದು. ಬಂಗಾಳ ಪೊಲೀಸ್ ತಪ್ಪು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಮುಂದುವರಿಸಲಿದೆ” ಎಂದು ಬರೆದುಕೊಂಡಿದ್ದಾರೆ.
The Bengal government is clear : ZERO tolerance on crimes. All those seen in videos committing criminal acts have been booked and will continue to be booked. Defeated @BJP4India can circulate as many old videos as it wants to defame Bengal and target @AITCofficial , @WBPolice… https://t.co/2Q6uGTVt6L
— Sagarika Ghose (@sagarikaghose) July 9, 2024
ಇದನ್ನೂ ಓದಿ : ಹತ್ರಾಸ್ ಕಾಲ್ತುಳಿತ ಪ್ರಕರಣ| ಸ್ವಯಂಘೋಷಿತ ದೇವಮಾನವ ‘ಭೋಲೆ ಬಾಬಾ’ಗೆ ಕ್ಲೀನ್ ಚಿಟ್ ಕೊಟ್ಟ ಎಸ್‌ಐಟಿ: ವರದಿ


