Homeಮುಖಪುಟನೋಟು ನಿಷೇಧ, ಜಿಎಸ್‌ಟಿ ಜಾರಿ, ಕೋವಿಡ್‌ನಿಂದಾಗಿ ಅನೌಪಚಾರಿಕ ಕ್ಷೇತ್ರಕ್ಕೆ ₹11.3 ಲಕ್ಷ ಕೋಟಿ ನಷ್ಟ: ವರದಿ

ನೋಟು ನಿಷೇಧ, ಜಿಎಸ್‌ಟಿ ಜಾರಿ, ಕೋವಿಡ್‌ನಿಂದಾಗಿ ಅನೌಪಚಾರಿಕ ಕ್ಷೇತ್ರಕ್ಕೆ ₹11.3 ಲಕ್ಷ ಕೋಟಿ ನಷ್ಟ: ವರದಿ

"ಅನೌಪಚಾರಿಕ ಕ್ಷೇತ್ರದಲ್ಲಿಯ 63 ಲಕ್ಷ ಉದ್ಯಮಗಳು ಮುಚ್ಚಲ್ಪಟ್ಟಿವೆ ಮತ್ತು ಸುಮಾರು 1.6 ಕೋಟಿ ಉದ್ಯೋಗಗಳು ನಷ್ಟವಾಗಿವೆ"

- Advertisement -
- Advertisement -

ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳ ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಕೋವಿಡ್ ಸಾಂಕ್ರಾಮಿಕ ಸೇರಿದಂತೆ 2016ರಿಂದ ಸ್ಥೂಲ ಆರ್ಥಿಕ ಆಘಾತಗಳ ಒಟ್ಟು ಪರಿಣಾಮದಿಂದಾಗಿ ವಿಶೇಷವಾಗಿ ಭಾರತದ ಅನೌಪಚಾರಿಕ ಕ್ಷೇತ್ರವು ಜಿಡಿಪಿಯ ಶೇ.4.3 ಅಥವಾ 11.3 ಲಕ್ಷ ಕೋಟಿ ರೂ.ಗಳಷ್ಟು ಆರ್ಥಿಕ ನಷ್ಟವನ್ನು ಅನುಭವಿಸಿದೆ ಎಂದು ಅಂದಾಜಿಲಾಗಿದೆ ಎಂದು ಇಂಡಿಯಾ ರೇಟಿಂಗ್ಸ್ ಆ್ಯಂಡ್ ರೀಸರ್ಚ್ ಮಂಗಳವಾರ ತನ್ನ ವರದಿಯಲ್ಲಿ ಹೇಳಿದೆ

ಇತ್ತೀಚಿನ ಸ್ಥೂಲ ಆರ್ಥಿಕ ಆಘಾತಗಳು ಈ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಉಂಟು ಮಾಡಿವೆ ಎಂದು ಹೇಳಿರುವ ಇಂಡಿಯಾ ರೇಟಿಂಗ್ಸ್‌ನ ಪ್ರಧಾನ ಅರ್ಥಶಾಸ್ತ್ರಜ್ಞ ಸುನಿಲ್ ಕುಮಾರ್ ಸಿನ್ಹಾ ಅವರು, 2015-16 ಮತ್ತು 2022-23ರ ನಡುವೆ ಅನೌಪಚಾರಿಕ ಕ್ಷೇತ್ರದಲ್ಲಿಯ 63 ಲಕ್ಷ ಉದ್ಯಮಗಳು ಮುಚ್ಚಲ್ಪಟ್ಟಿವೆ ಮತ್ತು ಸುಮಾರು 1.6 ಕೋಟಿ ಉದ್ಯೋಗಗಳು ನಷ್ಟವಾಗಿವೆ ಎಂದು ಅಂದಾಜಿಸಿದ್ದಾರೆ. ಈ ಅವಧಿಯಲ್ಲಿ ಆರ್ಥಿಕತೆಯ ಸದೃಢೀಕರಣದಲ್ಲಿ ಏರಿಕೆಯಾಗಿತ್ತು ಮತ್ತು ಇದು ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ಕಾರಣವಾಗಿತ್ತು. ಆರ್ಥಿಕತೆಯ ಸದೃಢೀಕರಣವು ಮುಂದಕ್ಕೊಯ್ಯುವ ದಾರಿಯಾಗಿದ್ದರೆ, ಅಸಂಘಟಿತ ವಲಯದಲ್ಲಿ ಉದ್ಯಮಗಳ ಸಂಖ್ಯೆ ತಗ್ಗಿದ್ದು ಉದ್ಯೋಗಾವಕಾಶ ಸೃಷ್ಟಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

2022-23ರಲ್ಲಿ ಇಂತಹ ಅಸಂಘಟಿತ ಉದ್ಯಮಗಳಿಂದ ಆರ್ಥಿಕತೆಯಲ್ಲಿ ಗ್ರಾಸ್-ವ್ಯಾಲ್ಯೂ ಆ್ಯಡೆಡ್ (ಜಿವಿಎ) ಅಥವಾ ಒಟ್ಟು ಮೌಲ್ಯದ ಪಾಲು ಈಗಲೂ 2015-16ರ ಮಟ್ಟಕ್ಕಿಂತ ಶೇ.1.6ರಷ್ಟು ಕಡಿಮೆಯಿದೆ. ಅಲ್ಲದೆ 2010-11 ಮತ್ತು 2015-16ರ ನಡುವೆ ಶೇ.7.4ರಷ್ಟಿದ್ದ ಅವುಗಳ ಸಂಯೋಜಿತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್)ವು ಆಗಿನಿಂದ ಶೇ.0.2ರಷ್ಟು ಕುಗ್ಗಿದೆ ಎಂದು ಇತ್ತೀಚಿಗೆ ಬಿಡುಗಡೆಗೊಂಡ ಸರ್ಕಾರದ ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆಯನ್ನು ಆಧರಿಸಿ ಇಂಡಿಯಾ ರೇಟಿಂಗ್ಸ್ ಹೇಳಿದೆ.

ಸಮೀಕ್ಷೆಯ ಪ್ರಕಾರ, 2021-22ರಲ್ಲಿ 5.97 ಕೋಟಿಯಿದ್ದ ಕೃಷಿಯೇತರ ವಲಯದ ಸಂಸ್ಥೆಗಳ ಸಂಖ್ಯೆ 2022-23ರಲ್ಲಿ 6.5 ಕೋಟಿಗೆ ಏರಿಕೆಯಾಗಿದೆ. ಉದ್ಯೋಗವು 9.79 ಕೋಟಿ ಕಾರ್ಮಿಕರಿಂದ 10.96 ಕೋಟಿಗೆ ಏರಿದೆ. ಆದಾಗ್ಯೂ, ಇದು ಆರ್ಥಿಕ ಆಘಾತಗಳಿಗಿಂತ ಮೊದಲಿನ 2015-16ರ ಅವಧಿಯಲ್ಲಿದ್ದ 11.13 ಕೋಟಿ ಕಾರ್ಮಿಕರ ಸಂಖ್ಯೆಗಿಂತ ಕಡಿಮೆಯಾಗಿದೆ. 2015-16ರಲ್ಲಿ 3.6 ಕೋಟಿಯಷ್ಟಿದ್ದ ಉತ್ಪಾದನಾ ಉದ್ಯೋಗಗಳ ಸಂಖ್ಯೆ 2022-23ರಲ್ಲಿ 3.06ಕ್ಕೆ ಕುಸಿದಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಉತ್ಪಾದನೆ, ವ್ಯಾಪಾರ ಮತ್ತು ಇತರ ಸೇವೆಗಳ (ಎಂಟಿಒ) ಕ್ಷೇತ್ರದಲ್ಲಿ ಅಸಂಘಟಿತ ಉದ್ಯಮಗಳ ನೈಜ ಜಿವಿಎ 2022-23ರಲ್ಲಿ 9.51 ಲಕ್ಷ ಕೋಟಿ ರೂ.ಗಳಷ್ಟಿದ್ದು, ಇದರಲ್ಲಿ ಭಾರತದ ನೈಜ ಎಂಟಿಒ ಜಿವಿಎ ಪಾಲು 2015-16ರಲ್ಲಿದ್ದ ಶೇ.25.7ರಿಂದ ಶೇ.18.2ಕ್ಕೆ ತೀವ್ರವಾಗಿ ಕುಸಿದಿದೆ ಎಂದು ಇತ್ತೀಚಿನ ದತ್ತಾಂಶಗಳು ಸೂಚಿಸಿವೆ.

ಇತರ ಸೇವೆಗಳು ಮತ್ತು ವ್ಯಾಪಾರದಲ್ಲಿ ಕುಗ್ಗುವಿಕೆಯು ತೀವ್ರವಾಗಿದ್ದು, ಆರ್ಥಿಕ ಆಘಾತಗಳ ಮೊದಲಿನ ಅವಧಿಯಲ್ಲಿ ಶೇ.46.9 ಮತ್ತು ಶೇ.34.3ರಷ್ಟಿದ್ದ ಅಸಂಘಟಿತ ವಲಯದ ಪಾಲು 2022-23ರಲ್ಲಿ ಕ್ರಮವಾಗಿ ಶೇ.32.3 ಮತ್ತು ಶೇ.21.2ಕ್ಕೆ ಕುಸಿದಿದೆ. ಉತ್ಪಾದನಾ ಕ್ಷೇತ್ರದಲ್ಲಿ ಇದೇ ಅವಧಿಯಲ್ಲಿ ಶೇ.12.5ರಿಂದ ಶೇ.10.2ಕ್ಕೆ ಕುಸಿದಿದೆ ಎಂದು ಇಂಡಿಯಾ ರೇಟಿಂಗ್ಸ್ ತನ್ನ ವರದಿಯಲ್ಲಿ ತಿಳಿಸಿದೆ.

2015-16ರ ನಂತರದ ಅವಧಿಯಲ್ಲಿ ಸ್ಥೂಲ ಆರ್ಥಿಕ ಆಘಾತಗಳು ಸಂಭವಿಸಿರದಿದ್ದರೆ ಮತ್ತು ಈ ಉದ್ಯಮಗಳ ಬೆಳವಣಿಗೆಯು 2010-11 ಮತ್ತು 2015-16 ನಡುವಿನ ಮಾದರಿಯನ್ನು ಅನುಸರಿಸಿದ್ದರೆ, ಇಂತಹ ಉದ್ಯಮಗಳ ಒಟ್ಟು ಸಂಖ್ಯೆ 2022-23ರಲ್ಲಿ 7.14 ಲಕ್ಷ ಕೋಟಿಗೆ ತಲುಪುತ್ತಿತ್ತು ಮತ್ತು ಕಾರ್ಮಿಕರ ಸಂಖ್ಯೆ 12.53 ಕೋಟಿಗೆ ಏರಿಕೆಯಾಗುತ್ತಿತ್ತು ಎಂದು ವರದಿ ಹೇಳಿದೆ.

ಅಸಂಘಟಿತ ವಲಯವು ದೇಶದ GVA ಗೆ 44% ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ ಮತ್ತು ಕೃಷಿಯೇತರ ಉದ್ಯಮಗಳಲ್ಲಿ ಉದ್ಯೋಗದಲ್ಲಿರುವ ಸುಮಾರು 75% ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.

2022-23 ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ ಪ್ರಕಾರ, ಅಸಂಘಟಿತ ವಲಯವು ದೇಶದ ಜಿವಿಎಗೆ ಶೇ. 44 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ ಮತ್ತು ಕೃಷಿಯೇತರ ಉದ್ಯಮಗಳಲ್ಲಿ ಉದ್ಯೋಗದಲ್ಲಿರುವ ಸುಮಾರು ಶೇ.75ರಷ್ಟು ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.

2022-23ರಲ್ಲಿ ಅಸಂಘಟಿತ ವಲಯದ ಉದ್ಯಮಗಳ (ಯುಎಸ್‌ಇ) ಗಾತ್ರ 15.4 ಲಕ್ಷ ಕೋಟಿ ರೂಗಳಷ್ಟಿತ್ತು. 2010-11 ಮತ್ತು 2015-16 ರ ನಡುವೆ ದಾಖಲಾದ ಶೇ.12.9% ಸಿಎಜಿಆರ್‌ಗೆ ಹೋಲಿಸಿದರೆ, 2015-16 ಮತ್ತು 2022-23ರ ನಡುವೆ ಶೇ.4.3ರಷ್ಟು ಸಿಎಜಿಆರ್‌ ಬೆಳವಣಿಗೆ ಕಂಡಿದೆ. 2015-16 ರಿಂದ 2022-23 ರ ಅವಧಿಯಲ್ಲಿ ಯುಎಸ್‌ಯ ಬೆಳವಣಿಗೆಯ ವೇಗವು ಶೇ.12.9 ರಷ್ಟಿತ್ತು. 2022-23 ರಲ್ಲಿ ಅವುಗಳ ಗಾತ್ರವು ರೂ. 26.9 ಲಕ್ಷ ಕೋಟಿಗಳಷ್ಟಿತ್ತು ಎಂದು ಇಂಡಿಯಾ ರೇಟಿಂಗ್ಸ್ ವಿವರಿಸಿದೆ.

ಮೋದಿ ಸರ್ಕಾರದ ವಿರುದ್ದ ಖರ್ಗೆ ಕಿಡಿ

ವರದಿ ಉಲ್ಲೇಖಿಸಿ ಮೋದಿ ಸರ್ಕಾರದ ವಿರುದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಿಡಿಕಾರಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಬರೆದಿರುಕೊಂಡಿರುವ ಅವರು “ನೋಟು ಅಮಾನ್ಯೀಕರಣ, ದೋಷಪೂರಿತ ಜಿಎಸ್‌ಟಿ ಮತ್ತು ಯೋಜಿತವಲ್ಲದ ಕೋವಿಡ್ ಲಾಕ್‌ಡೌನ್‌ನ ವಿನಾಶಕಾರಿ ನಿರ್ಧಾರಗಳ ಮೂಲಕ ಪ್ರಧಾನಿ ಮೋದಿ ಭಾರತೀಯ ಆರ್ಥಿಕತೆಯ ಮೇಲೆ ದುರಂತವನ್ನು ಉಂಟುಮಾಡಿದರು. ಇದು ಕುಟುಂಬಗಳನ್ನು ಸಂಕಷ್ಟಕ್ಕೆ ಸಿಲುಕಿಸಿತು ಮತ್ತು ಕೋಟ್ಯಂತರ ಜನರ ಜೀವನವನ್ನು ಹಾಳು ಮಾಡಿದವು. ತಮ್ಮ ಜೀವನೋಪಾಯದ ಮೇಲೆ ಹೊಡೆತ ನೀಡಿದ ಮೋದಿ ಸರ್ಕಾರವನ್ನು ಭಾರತೀಯರು ಎಂದಿಗೂ ಕ್ಷಮಿಸುವುದಿಲ್ಲ ಮತ್ತು ಮರೆಯುವುದಿಲ್ಲ. ಪ್ರಚಾರಕ್ಕಾಗಿ ಕೋಟಿಗಟ್ಟಲೆ ಖರ್ಚು ಮಾಡಿದ ಮೇಲೂ, ನಿರ್ಲಜ್ಜ ಸುಳ್ಳು ಹೇಳಿಕೆಗಳ ಹೊರತಾಗಿಯೂ ಸತ್ಯ ಹೊರ ಬರುತ್ತಿದೆ” ಎಂದಿದ್ದಾರೆ.

ಇದನ್ನೂ ಓದಿ : ಕಾಲೇಜು ಶಿಕ್ಷಣ ಇಲಾಖೆ ಪುಸ್ತಕ ಖರೀದಿ ಪಟ್ಟಿಯಲ್ಲಿ ‘ಸಪ್ನ’ ಮೇಲುಗೈ; ಸಣ್ಣ ಪ್ರಕಾಶಕರಿಗೆ ಅನ್ಯಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಾಮಾಜಿಕ ಮಾಧ್ಯಮದಲ್ಲಿ 200-500 ರೂ.ಗೆ ಮಾರಾಟ: ಆರು ಶಿಕ್ಷಕರು, ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಜಾಹೀರಾತು ಮಾಡಿ ಖಾಸಗಿ ಸಂದೇಶಗಳ ಮೂಲಕ 200 ರಿಂದ...

ಕರೂರ್ ಕಾಲ್ತುಳಿತ : ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್

ಕರೂರ್ ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಸೋಮವಾರ (ಜ.12) ದೆಹಲಿಯ ಕೇಂದ್ರ ತನಿಖಾ ದಳ (ಸಿಬಿಐ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಚಾರ್ಟರ್ಡ್ ವಿಮಾನದಲ್ಲಿ...

ಜೂನ್‌ ಅಂತ್ಯದೊಳಗೆ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ : ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜ.12) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಸುಪ್ರೀಂ ಕೋರ್ಟ್ ನಲ್ಲಿ ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ ಇಡಿ

ನವದೆಹಲಿ: ಐ-ಪಿಎಸಿ ವಿರುದ್ಧದ ಬಹು-ರಾಜ್ಯ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಮತ್ತು ನಾಶಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್...

ಭಾರತಕ್ಕಿಂತ ಯಾವುದೇ ಪಾಲುದಾರ ದೇಶ ಮುಖ್ಯವಲ್ಲ, ವ್ಯಾಪಾರ ಮಾತುಕತೆ ಪುನರಾರಂಭ: ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್

"ವಾಷಿಂಗ್ಟನ್‌ಗೆ ಭಾರತಕ್ಕಿಂತ ಅಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ನೌಕರರು...

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...