ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ಅವರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದೆ.
ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯದವರನ್ನು ಮತ್ತು ಮಹಿಳೆಯನ್ನು ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ವಿಶೇಷವಾಗಿದೆ.
ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯವರಾದ ಆಯೇಷಾ ಖಾನಂ ಅವರು ದಿ ಏಷಿಯನ್ ಏಜ್, ಸ್ಟಾರ್ ನ್ಯೂಸ್, ಆಜ್ ತಕ್, ದೂರದರ್ಶನದ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಆಯೇಷಾ ಖಾನಂ ಅವರಿಗೆ ಹಾಗೂ ಎಲ್ಲಾ ನೂತನ ಸದಸ್ಯರುಗಳಿಗೆ ಅಭಿನಂದನೆಗಳು.
ತಮ್ಮ ಮುಂದಾಳತ್ವದಲ್ಲಿ ಪತ್ರಕರ್ತರಲ್ಲಿ ವೃತ್ತಿಪರತೆ ಮತ್ತು ವೃತ್ತಿ ಕೌಶಲದ ಸುಧಾರಣೆಗೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾಧ್ಯಮ ಅಕಾಡೆಮಿ ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸಲಿ ಎಂದು ಈ… pic.twitter.com/R7adxvWnL6
— CM of Karnataka (@CMofKarnataka) July 10, 2024
ಆಯೇಷಾ ಖಾನಂ ಅವರು ದೂರದರ್ಶನದ ದಕ್ಷಿಣ ಭಾರತದ ಮುಖ್ಯ ವರದಿಗಾರರಾಗಿದ್ದರು. ಜು.9ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು 26 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸಿದ್ದು, ಶ್ರೀಲಂಕಾ ಸಂಘರ್ಷ, 11 ರಾಜ್ಯಗಳ ಚುನಾವಣೆ ಹಾಗೂ 5 ಸಾರ್ವತ್ರಿಕ ಲೋಕಸಭಾ ಚುನಾವಣೆಗಳಲ್ಲಿ ಪರಿಣಾಮಕಾರಿ ವರದಿಗಾರಿಕೆ ಮಾಡಿ ಖ್ಯಾತಿ ಗಳಿಸಿದ್ದಾರೆ.
ಅಕಾಡೆಮಿಯ ಸದಸ್ಯರಾಗಿ ಹಿರಿತ ಪತ್ರಕರ್ತ ಚಿತ್ರದುರ್ಗದ ಅಹೋಬಳಪತಿ, ಬೆಂಗಳೂರಿನ ಪತ್ರಿಕಾ ಛಾಯಾಗ್ರಾಹಕ ಕೆ.ವೆಂಕಟೇಶ್ ಮತ್ತು ಕೊಪ್ಪಳದ ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಅವರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ : ಕಾಲೇಜು ಶಿಕ್ಷಣ ಇಲಾಖೆ ಪುಸ್ತಕ ಖರೀದಿ ಪಟ್ಟಿಯಲ್ಲಿ ‘ಸಪ್ನ’ ಮೇಲುಗೈ; ಸಣ್ಣ ಪ್ರಕಾಶಕರಿಗೆ ಅನ್ಯಾಯ


