ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ದಲಿತ ಅಪ್ರಾಪ್ತ ಬಾಲಕನಿಗೆ ಮೂತ್ರ ಕುಡಿಸುವಂತೆ ಒತ್ತಾಯಿಸಿದ ಮೂವರು ಯುವಕರನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 15 ವರ್ಷ ವಯಸ್ಸಿನ ಸಂತ್ರತ್ರಸ್ತ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೌಂಡ್ ಮಿಕ್ಸರ್ ಮತ್ತು ಆಡಿಯೊ ಸಿಸ್ಟಮ್‌ಗಳನ್ನು ಅಳವಡಿಸುತ್ತಿದ್ದ ಎನ್ನಲಾಗಿದೆ.
ಮಂಗಳವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಮದ್ಯದ ಅಮಲಿನಲ್ಲಿದ್ದ ಕಿಶನ್ ತಿವಾರಿ, ದಿಲೀಪ್ ಮಿಶ್ರಾ ಮತ್ತು ಸತ್ಯಂ ತಿವಾರಿ ಎಂಬುವರು ಆತನನ್ನು ಅಡ್ಡಗಟ್ಟಿದ್ದಾರೆ. ದಿಲೀಪ್ ಮಿಶ್ರಾ ಮದ್ಯದ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡಿ, ಸತ್ಯಂ ಮತ್ತು ಕಿಶನ್ ಹುಡುಗನನ್ನು ಕೆಳಕ್ಕೆ ಬೀಳಿಸಿ ಬಾಟಲಿಯಿಂದ ಬಲವಂತವಾಗಿ ಬಾಲಕನಿಗೆ ಮೂತ್ರ ಕಿಡಿಸಲು ಒತ್ತಾಯಿಸಿದ್ದಾರೆ.
ಆರೋಪಿಗಳು ತಮ್ಮ ಮನೆಯಲ್ಲಿ ಕಾರ್ಯಕ್ರಮಕ್ಕಾಗಿ ಸ್ಥಾಪಿಸಿದ ಆಡಿಯೊ ಸಿಸ್ಟಮ್‌ಗೆ ಹೆಚ್ಚುವರಿ ಶುಲ್ಕ ವಿಧಿಸಿದ್ದ ಬಾಲಕನ ಕುಟುಂಬದ ಮೇಲೆ ಕೋಪಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ಆರೋಪಿಗಳು ಅಪ್ರಾಪ್ತನೊಂದಿಗೆ ಅನುಚಿತವಾಗಿ ವರ್ತಿಸಿ ಥಳಿಸಿದ್ದಾರೆ. ಅವರಲ್ಲಿ ಒಬ್ಬಾತ ಇಡೀ ಘಟನೆಯ ವೀಡಿಯೊವನ್ನು ಚಿತ್ರೀಕರಿಸಿದ್ದಾನೆ” ಎಂದು ಗಿಲೌಲಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಹಿಮಾ ನಾಥ್ ಉಪಾಧ್ಯಾಯ ಹೇಳಿದರು.
ಬಾಲಕ ಮನೆಗೆ ಬಂದು ತನ್ನ ಅಣ್ಣನಿಗೆ ನಡೆದ ಘಟನೆ ಬಗ್ಗೆ ಹೇಳಿದ ಮರುದಿನ, ಆತನ ಪೋಷಕರು ಮತ್ತು ಸಹೋದರ ಪೊಲೀಸರಿಗೆ ದೂರು ನೀಡಿದ್ದರು.
ಪ್ರತ್ಯಕ್ಷದರ್ಶಿಗಳ ಮಾಹಿತಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಆಧರಿಸಿ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯು ಬಾಲಕ ಮತ್ತು ಅವನ ಕುಟುಂಬವು ಗ್ರಾಮದಲ್ಲಿ ಡಿಜೆ ನಡೆಸುತ್ತಿದ್ದರು ಮತ್ತು ಭಾರಿ ಮೊತ್ತವನ್ನು ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಮಾರಂಭವೊಂದರಲ್ಲಿ, ಜನರೇಟರ್‌ನಲ್ಲಿ ಇಂಧನ ಕೊರತೆಯನ್ನು ಉಲ್ಲೇಖಿಸಿ ಸಂತ್ರಸ್ತರ ಡಿಜೆ ನಿಲ್ಲಿಸಿದ್ದನು, ಇದು ಅವರ ನಡುವಿನ ದ್ವೇಷವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ; ಗುಜರಾತ್ : ನಕಲಿ ಟೋಲ್ ಪ್ಲಾಝಾ, ಸರ್ಕಾರಿ ಕಚೇರಿ ಬಳಿಕ ಈಗ ನಕಲಿ ಆಸ್ಪತ್ರೆ ಪತ್ತೆ


