ಕರ್ನಾಟಕದ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾಗಿರುವ ಅರ್ಜುನ್ ಅವರ ಮನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ನೀಡಿದರು. ಭಾನುವಾರ ಮಧ್ಯಾಹ್ನ 12:30ರ ಸುಮಾರಿಗೆ ಕೋಝಿಕ್ಕೋಡ್‌ನ ಕ್ಯಾಂಡಿಕಲ್‌ನಲ್ಲಿರುವ ಅರ್ಜುನ್ ಅವರ ಮನೆಗೆ ಮುಖ್ಯಮಂತ್ರಿ ಆಗಮಿಸಿದರು. ಮನೆಯಲ್ಲಿ ಸುಮಾರು ಹದಿನೈದು ನಿಮಿಷ ಕಳೆದ ನಂತರ ಅವರು ಹಿಂತಿರುಗಿದರು.
ಆದಷ್ಟು ಬೇಗ ಅರ್ಜುನ್ ಪತ್ತೆಯಾಗಬೇಕು ಎಂದು ಆಗ್ರಹಿಸಿ ಅರ್ಜುನ್ ಕುಟುಂಬ ನೇರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದೆ. ಅರ್ಜುನ್ ಕುಟುಂಬಕ್ಕೆ ಸಾಧ್ಯವಿರುವ ಎಲ್ಲವನ್ನೂ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. ಮುಖ್ಯಮಂತ್ರಿ ಬಂದಿದ್ದು ಸಮಾಧಾನ ಎಂದು ಅರ್ಜುನ್ ಕುಟುಂಬ ಪ್ರತಿಕ್ರಿಯಿಸಿದೆ.
Visited the family of Arjun, who tragically went missing in a landslide at Shirur, Karnataka. Assured them that the Karnataka Govt will be informed of their concerns and that all necessary measures will be taken. We are committed to leaving no stone unturned. pic.twitter.com/2jnMJnAjxK
— Pinarayi Vijayan (@pinarayivijayan) August 4, 2024
“ಕರ್ನಾಟಕದ ಶಿರೂರಿನಲ್ಲಿ ಭೂಕುಸಿತದಲ್ಲಿ ದುರಂತವಾಗಿ ನಾಪತ್ತೆಯಾದ ಅರ್ಜುನ್ ಕುಟುಂಬವನ್ನು ಭೇಟಿ ಮಾಡಿದೆ. ಕುಟುಂಬ ಸದಸ್ಯರ ಕಳಕಳಿಯನ್ನು ಕರ್ನಾಟಕ ಸರ್ಕಾರಕ್ಕೆ ತಿಳಿಸಲಾಗುವುದು ಮತ್ತು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು” ಎಂದು ಪಿಣರಾಯಿ ವಿಜಯನ್ ಭರವಸೆ ನೀಡಿದ್ದಾರೆ.
ಅರ್ಜುನ್‌ನನ್ನು ಹುಡುಕುವ ಕಾರ್ಯಾಚರಣೆ ಮತ್ತೆ ಕಗ್ಗಂಟಾಗಿದೆ. ಮುಳುಗುಗಾರ ಈಶ್ವರ್ ಮಲ್ಪೆ ಅವರಿಗೆ ಗಂಗಾವಳಿ ನದಿಗೆ ತೆರಳಿ ಶೋಧ ನಡೆಸಲು ಅನುಮತಿ ನೀಡಿಲ್ಲ. ಗಂಗಾವಳಿ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ ಎಂಬ ಕಾರಣಕ್ಕೆ ಅನುಮತಿ ನಿರಾಕರಿಸಲಾಗಿದೆ.
ಇದನ್ನೂ ಓದಿ; ರಾಹುಲ್ ಗಾಂಧಿಯನ್ನು ಬಂಧಿಸಿದರೆ ಅದು ಬಿಜೆಪಿಯ ಶವಪೆಟ್ಟಿಗೆಗೆ ಅಂತಿಮ ಮೊಳೆಯಾಗುತ್ತದೆ: ಸಿಂಘ್ವಿ


