ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಕುರಿತ ಪ್ರಶ್ನೆಗೆ ಸರ್ಕಾರವು ರಾಜ್ಯಸಭೆಯಲ್ಲಿ ನೀಡಿದ ಉತ್ತರವನ್ನು ಉಲ್ಲೇಖಿಸಿ, “ಬಿಜೆಪಿ ನೇತೃತ್ವದ ಕೇಂದ್ರವು ಪಶ್ಚಿಮ ಬಂಗಾಳಕ್ಕೆ 100 ದಿನಗಳ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಾಗಿ ‘ಶೂನ್ಯ ಅನುದಾನ’ ನೀಡಲಾಗಿದೆ ಎಂಬುದನ್ನು ಅಂತಿಮವಾಗಿ ಒಪ್ಪಿಕೊಂಡಿದೆ” ಎಂದು ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಹೇಳಿದ್ದಾರೆ.
2021ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಕೇಂದ್ರವು ಪಶ್ಚಿಮ ಬಂಗಾಳಕ್ಕೆ ಏನು ಪಾವತಿಸಿದೆ ಎಂಬುದನ್ನು ಸಾಬೀತುಪಡಿಸಲು ಟಿಎಂಸಿ ಮತ್ತು ಅದರ ಲೋಕಸಭಾ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಈ ಯೋಜನೆಯ ಬಗ್ಗೆ ಶ್ವೇತಪತ್ರವನ್ನು ಒತ್ತಾಯಿಸುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಓ’ಬ್ರೇನ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಅಂತಿಮವಾಗಿ ಎಂಎನ್‌ಆರ್‌ಇಜಿಎ ನಿಧಿಗಾಗಿ ಬಂಗಾಳಕ್ಕೆ ಶೂನ್ಯ ಅನುದಾನ ನೀಡಲಾಗಿದೆ ಎಂದು ಮೋದಿ ಸರ್ಕಾರವು ಸಂಸತ್ತಿನೊಳಗೆ ಒಪ್ಪಿಕೊಂಡಿದೆ” ಎಂದು ಓ’ಬ್ರೇನ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ, 2023-24ರಲ್ಲಿ 100 ದಿನಗಳ ವೇತನ ಉದ್ಯೋಗವನ್ನು ಪೂರ್ಣಗೊಳಿಸಿದ ಕುಟುಂಬಗಳ ಸಂಖ್ಯೆ “ಶೂನ್ಯ” ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್ ಸಂಸತ್ತಿನ ಮೇಲ್ಮನೆಯಲ್ಲಿ ನೀಡಿದ ಲಿಖಿತ ಉತ್ತರ ನೀಡಿದ್ದಾರೆ.
𝐁𝐫𝐞𝐚𝐤𝐢𝐧𝐠
Finally! Modi Govt admits inside Parliament that BENGAL'S BEEN GIVEN ZERO for MNREGA funds@abhishekaitc @AITCofficial have been demanding a White Paper to prove what BJP govt has paid Bengal since loss in 2021 Elections
Here👇proof from answer in Rajya Sabha pic.twitter.com/E8rExjL4AA
— Derek O'Brien | ডেরেক ও'ব্রায়েন (@derekobrienmp) August 4, 2024
2022-23ರಲ್ಲಿ ರಾಜ್ಯದಲ್ಲಿ 1,618 ಕುಟುಂಬಗಳಿಗೆ ಯೋಜನೆಯಡಿ 100 ದಿನಗಳ ಕೆಲಸ ದೊರೆತಿದ್ದರೆ, 2021-22ರಲ್ಲಿ 4,71,136 ಎಂದು ಉತ್ತರದಲ್ಲಿ ತಿಳಿಸಲಾಗಿದೆ. 2020-21ರ ಮೊದಲ ಕೋವಿಡ್ ವರ್ಷದಲ್ಲಿ ಈ ಸಂಖ್ಯೆ 6,78,633 ಮತ್ತು 2019-20ರಲ್ಲಿ 3,65,683 ಆಗಿತ್ತು ಎಂದು ಉತ್ತರ ಹೇಳಿದೆ.
ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಅನುಸರಿಸದ ಕಾರಣ ಮನರೇಗಾ ಅಡಿಯಲ್ಲಿ ಪಶ್ಚಿಮ ಬಂಗಾಳಕ್ಕೆ ಹಣವನ್ನು ಬಿಡುಗಡೆ ಮಾಡುವುದನ್ನು ಮಾರ್ಚ್ 9, 2022 ರಂದು ನಿಲ್ಲಿಸಲಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಈ ಹಿಂದೆ ಹೇಳಿದ್ದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ, 2005 ರ ಸೆಕ್ಷನ್ 27 ರ ಅಡಿಯಲ್ಲಿ ನಿಬಂಧನೆಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಒಟ್ಟಾರೆಯಾಗಿ, 2023-24ರಲ್ಲಿ ಸುಮಾರು 44,99,343 ಕುಟುಂಬಗಳು ಮನರೇಗಾ ಅಡಿಯಲ್ಲಿ 100 ದಿನಗಳ ಉದ್ಯೋಗವನ್ನು ಪಡೆದಿವೆ.
ಯೋಜನೆಯಡಿಯಲ್ಲಿ ರಚಿಸಲಾದ ಉದ್ಯೋಗದ ಒಟ್ಟು ವ್ಯಕ್ತಿ-ದಿನಗಳ ಕುರಿತು ಮತ್ತೊಂದು ಲಿಖಿತ ಉತ್ತರದಲ್ಲಿ ಪಾಸ್ವಾನ್, 2023-24ರಲ್ಲಿ ಈ ಯೋಜನೆಯಡಿ ಪಶ್ಚಿಮ ಬಂಗಾಳದಲ್ಲಿ 1.65 ಲಕ್ಷ ವ್ಯಕ್ತಿ-ದಿನಗಳ ಉದ್ಯೋಗವನ್ನು ನೀಡಲಾಗಿದೆ ಎಂದು ಹೇಳಿದರು.
2022-23 ರಲ್ಲಿ, 3.78 ಕೋಟಿ ವ್ಯಕ್ತಿ-ದಿನಗಳ ಉದ್ಯೋಗವನ್ನು ಸೃಷ್ಟಿಸಲಾಯಿತು. ಆದರೆಮ 2021-22 ರಲ್ಲಿ ಈ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಸುಮಾರು 36.42 ಕೋಟಿ ವ್ಯಕ್ತಿ-ದಿನಗಳ ಉದ್ಯೋಗವನ್ನು ಸೃಷ್ಟಿಸಲಾಗಿದೆ. ಒಟ್ಟಾರೆಯಾಗಿ, 2023-24 ರಲ್ಲಿ, ದೇಶದಾದ್ಯಂತ ಯೋಜನೆಯಡಿಯಲ್ಲಿ 312.37 ಕೋಟಿ ವ್ಯಕ್ತಿ-ದಿನಗಳ ಉದ್ಯೋಗವನ್ನು ಸೃಷ್ಟಿಸಲಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ; ಗವರ್ನರ್‌ಗಳು ಬೇಡದ ಪಾತ್ರ ನಿರ್ವಹಿಸುತ್ತಾ ಸಕ್ರಿಯ ಪಾತ್ರ ವಹಿಸಬೇಕಾದಾಗ ನಿಷ್ಕ್ರಿಯರಾಗಿದ್ದಾರೆ: ಜಸ್ಟೀಸ್ ಬಿವಿ ನಾಗರತ್ನ


