ಇಲ್ಲಿಗೆ ಸಮೀಪದ ಶಾದ್‌ನಗರ ಪೊಲೀಸ್ ಠಾಣೆಯಲ್ಲಿ ತನಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ ಎಂದು ದಲಿತ ಮಹಿಳೆಯೊಬ್ಬರು ಆರೋಪಿಸಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ಚಿನ್ನ ಕಳ್ಳತನದ ಆರೋಪದ ಮೇಲೆ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆಸಿದ ನಂತರ, ಆಕೆಯ ಅಪ್ರಾಪ್ತ ಮಗನ ಸಮ್ಮುಖದಲ್ಲಿ ಹಲ್ಲೆ ನಡೆಸಲಾಯಿತು ಎಂದು ಹೇಳಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳೆ, “ತನ್ನ ಪತಿಯನ್ನು ಮೊದಲು ಥಳಿಸಿ ನಂತರ ಬಿಡುಗಡೆ ಮಾಡಲಾಯಿತು. ನಂತರ, ನನ್ನ ಸೀರೆ ತೆಗೆದು ಶಾರ್ಟ್ಸ್ ಧರಿಸುವಂತೆ ಒತ್ತಾಯಿಸಲಾಯಿತು. ನನ್ನ ಮೇಲೆ ಹಲ್ಲೆ ನಡೆಸುವ ಮುನ್ನ ಪೊಲೀಸ್ ಸಿಬ್ಬಂದಿ ಕೈ ಕಾಲುಗಳನ್ನು ಕಟ್ಟಿ ಹಾಕಿದ್ದರು. ಎಷ್ಟೇ ಮನವಿ ಮಾಡಿದರೂ ಅವರು ನನ್ನನ್ನು ಬಿಡಲಿಲ್ಲ” ಎಂದು ಹೇಳಿದ್ದಾರೆ.
ಆರೋಪಗಳಿಗೆ ಪ್ರತಿಕ್ರಿಯಿಸಿದ ಸೈಬರಾಬಾದ್ ಪೊಲೀಸ್ ಕಮಿಷನರ್ ಅವಿನಾಶ್ ಮೊಹಂತಿ, “ಶಾದ್‌ನಗರದ ಡಿಐ (ಡಿಟೆಕ್ಟಿವ್ ಇನ್ಸ್‌ಪೆಕ್ಟರ್) ಅವರನ್ನು ಕಮಿಷನರೇಟ್ ಪ್ರಧಾನ ಕಚೇರಿಗೆ ವರ್ಗಾವಣೆ ಮಾಡಲಾಗಿದೆ, ಅವರ ಮೇಲಿನ ಆರೋಪಗಳ ವಿಚಾರಣೆ ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾದ್‌ನಗರದ ಎಸಿಪಿ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ; ಸುಪ್ರೀಂ ಕೋರ್ಟ್ ‘ಒಳ ಮೀಸಲಾತಿ’ ತೀರ್ಪು; ‘ಎಲ್ಲವನ್ನೂ ಒಪ್ಪುವುದಿಲ್ಲ’ ಎಂದ ಮಾಯಾವತಿ


