ಮಧ್ಯಪ್ರದೇಶದ ಛತ್ತರ್‌ಪುರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕಲ್ಲು ತೂರಾಟ ಮತ್ತು ಗಲಭೆ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮನೆಯನ್ನು ಬುಲ್ಡೋಜರ್ ಬಳಸಿ ಕೆಡವಿದ್ದನ್ನು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ವಿರೋಧಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, “ಒಬ್ಬರ ಮನೆಯನ್ನು ಕೆಡವಿ ಅವರ ಕುಟುಂಬವನ್ನು ನಿರಾಶ್ರಿತರನ್ನಾಗಿ ಮಾಡುವುದು ಅಮಾನವೀಯ ಮತ್ತು ಅನ್ಯಾಯ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪದೇ ಪದೇ ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದು ತೀವ್ರ ಕಳವಳಕಾರಿಯಾಗಿದೆ. ಕಾನೂನಿನ ಆಳ್ವಿಕೆಯ ಸಮಾಜದಲ್ಲಿ ಇಂತಹ ಕ್ರಮಗಳಿಗೆ ಸ್ಥಾನವಿಲ್ಲ” ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Demolishing someone's home and rendering their family homeless is both inhumane and unjust. The repeated targeting of minorities in BJP-ruled states is deeply troubling. Such actions have no place in a society governed by the Rule of Law.
The Congress Party strongly condemns the…
— Mallikarjun Kharge (@kharge) August 24, 2024
“ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಸಂವಿಧಾನವನ್ನು ನಿರ್ಲಕ್ಷಿಸುತ್ತಿರುವುದನ್ನು ಕಾಂಗ್ರೆಸ್ ಪಕ್ಷವು ಬಲವಾಗಿ ಖಂಡಿಸುತ್ತದೆ, ನಾಗರಿಕರಲ್ಲಿ ಭಯವನ್ನು ಹುಟ್ಟುಹಾಕಲು ಬುಲ್ಡೋಜಿಂಗ್ ತಂತ್ರವನ್ನು ಬಳಸುತ್ತದೆ. ಅರಾಜಕತೆಯು ನೈಸರ್ಗಿಕ ನ್ಯಾಯವನ್ನು ಬದಲಿಸಲು ಸಾಧ್ಯವಿಲ್ಲ, ಅಪರಾಧಗಳನ್ನು ನ್ಯಾಯಾಲಯಗಳಲ್ಲಿ ನಿರ್ಣಯಿಸಬೇಕು, ರಾಜ್ಯ ಪ್ರಾಯೋಜಿತ ಬಲವಂತದ ಮೂಲಕ ಅಲ್ಲ” ಎಂದಿದ್ದಾರೆ.
ನ್ಯಾಯಾಲಯ ಮಾತ್ರ ಅವನ ಶಿಕ್ಷೆಯನ್ನು ನಿರ್ಧರಿಸುತ್ತದೆ: ಪ್ರಿಯಾಂಕಾ
“ಯಾರಾದರೂ ಅಪರಾಧದ ಆರೋಪಿಯಾಗಿದ್ದರೆ, ನ್ಯಾಯಾಲಯ ಮಾತ್ರ ಅವನ ಅಪರಾಧ ಮತ್ತು ಶಿಕ್ಷೆಯನ್ನು ನಿರ್ಧರಿಸುತ್ತದೆ. ಆದರೆ, ಆರೋಪ ಬಂದ ತಕ್ಷಣ ಆರೋಪಿಯ ಕುಟುಂಬವನ್ನು ಶಿಕ್ಷಿಸುವುದು, ಅವರ ತಲೆಯ ಮೇಲಿರುವ ಸೂರು ತೆಗೆಯುವುದು, ಕಾನೂನು ಪಾಲಿಸದಿರುವುದು, ನ್ಯಾಯಾಲಯವನ್ನು ಧಿಕ್ಕರಿಸುವುದು, ಆರೋಪ ಬಂದ ತಕ್ಷಣ ಆರೋಪಿಯ ಮನೆ ಕೆಡವುವುದು ನ್ಯಾಯವಲ್ಲ; ಇದು ಅನಾಗರಿಕತೆ ಮತ್ತು ಅನ್ಯಾಯದ ಪರಮಾವಧಿ” ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶ ಹೊರಹಾಕಿದ್ದಾರೆ.
“ಕಾನೂನು ರೂಪಿಸುವವರು, ಕಾನೂನು ಪಾಲಕರು ಮತ್ತು ಕಾನೂನು ಉಲ್ಲಂಘಿಸುವವರ ನಡುವೆ ವ್ಯತ್ಯಾಸವಿರಬೇಕು. ಸರ್ಕಾರಗಳು ಅಪರಾಧಿಗಳಂತೆ ವರ್ತಿಸುವಂತಿಲ್ಲ. ಕಾನೂನು, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮಾನವೀಯತೆಯನ್ನು ಪಾಲಿಸುವುದು ಸುಸಂಸ್ಕೃತ ಸಮಾಜದಲ್ಲಿ ಆಡಳಿತದ ಕನಿಷ್ಠ ಸ್ಥಿತಿಯಾಗಿದೆ. ತನ್ನ ಕರ್ತವ್ಯವನ್ನು ಪೂರೈಸಲು ಸಾಧ್ಯವಾಗದವನು ಸಮಾಜಕ್ಕೆ ಅಥವಾ ದೇಶಕ್ಕೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ಬುಲ್ಡೋಜರ್ ನ್ಯಾಯವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ, ಅದು ನಿಲ್ಲಬೇಕು” ಎಂದು ಹೇಳಿದ್ದಾರೆ.
अगर कोई किसी अपराध का आरोपी है तो उसका अपराध और उसकी सजा सिर्फ अदालत तय कर सकती है। लेकिन आरोप लगते ही आरोपी के परिवार को सजा देना, उनके सिर से छत छीन लेना, कानून का पालन न करना, अदालत की अवहेलना करना, आरोप लगते ही आरोपी का घर ढहा देना- यह न्याय नहीं है। यह बर्बरता और अन्याय की…
— Priyanka Gandhi Vadra (@priyankagandhi) August 24, 2024
ಘಟನೆ ಹಿನ್ನಲೆ:
ಕಳೆದ ಬುಧವಾರ (ಗುರುವಾರ, 22 ಆಗಸ್ಟ್) ಮಧ್ಯಾಹ್ನ ಛತ್ತರ್‌ಪುರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕಲ್ಲು ತೂರಾಟ ಮತ್ತು ಗಲಭೆ ಸೃಷ್ಟಿಸಿದ ಆರೋಪಿಗಳ ವಿರುದ್ಧ ಮಧ್ಯಪ್ರದೇಶ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಕಳೆದ ವಾರ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಮಹಾರಾಷ್ಟ್ರದ ರಾಮಗಿರಿ ಮಹಾರಾಜ್ ವಿರುದ್ಧ ಮುಸ್ಲಿಮರು ಪ್ರತಿಭಟಿಸಿದ್ದಾರೆ ಎನ್ನಲಾಗಿದೆ.
ಸಿಎಂ ಮೋಹನ್ ಯಾದವ್ ಆದೇಶ ಹೊರಡಿಸಿದ ಬಳಿಕ ಗಲಾಟೆಯಲ್ಲಿ ತೊಡಗಿದ್ದ 150 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್‌ನಲ್ಲಿ 50 ಹೆಸರಿಸಲಾಗಿದೆ ಮತ್ತು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ಇತರ 100 ಜನರು ಇಬ್ಬರು ಅಧಿಕಾರಿಗಳನ್ನು ಗಾಯಗೊಳಿಸಿದ್ದಾರೆ. ಇದಾದ ನಂತರ, ರಾಜ್ಯದ ಮುಖ್ಯಮಂತ್ರಿ ಡಾ ಮೋಹನ್ ಯಾದವ್ ಪ್ರತಿಕ್ರಿಯಿಸಿ, ಈ ಘಟನೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು. ವರದಿಯ ಪ್ರಕಾರ, ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿಗಳ ಮನೆಗಳನ್ನು ರಾಜ್ಯ ಆಡಳಿತವು ಕೆಡವಲು ಪ್ರಾರಂಭಿಸಿತು.
ಸ್ಥಳೀಯ ವರದಿಗಳ ಪ್ರಕಾರ, ಸ್ಥಳದಲ್ಲಿದ್ದ ಭಾರೀ ಪೊಲೀಸ್ ಪಡೆ ಮತ್ತು ಆಡಳಿತ ತಂಡದ ನಡುವೆ ಬುಲ್ಡೋಜರ್ ಕಾರ್ಯಾಚರಣೆ ನಡೆಯುತ್ತಿದೆ. ಛತ್ತರ್‌ಪುರ ನಗರದ ಮಸ್ತಾನ್ ಸಾಹಬ್ ಕಾಲೋನಿಯಲ್ಲಿರುವ ಆರೋಪಿ ಹಾಜಿ ಶಹಜಾದ್ ಅಲಿ ಅವರ ಮನೆಯನ್ನು ಬುಲ್ಡೋಜರ್ ಸಹಾಯದಿಂದ ಕೆಡವಲಾಯಿತು.
ಇದನ್ನೂ ಓದಿ; ಅಸ್ಸಾಂ: ಸಾಮೂಹಿಕ ಅತ್ಯಾಚಾರ ಆರೋಪಿ ಅಂತ್ಯಕ್ರಿಯೆಗೆ ಅವಕಾಶ ನಿರಾಕರಿಸಿದ ಗ್ರಾಮಸ್ಥರು


