ಒಡಿಶಾದ ಝಾರ್ಸುಗುಡಾ ಜಿಲ್ಲೆಯಲ್ಲಿ ಜಗಳದ ವೇಳೆ ಗಂಡಿಗೆ ಹೊಡೆದಿದ್ದಕ್ಕಾಗಿ ಮಹಿಳೆಯೊಬ್ಬರಿಗೆ ಸ್ಥಳೀಯ ಮುಖಂಡರ ಪಂಚಾಯಿತಿ ಆದೇಶ ನೀಡಿದ ನಂತರ, ಮಹಿಳೆಯೊಬ್ಬರ ತಲೆ ಬೋಳಿಸಿ ಗ್ರಾಮದಿಂದ ಬಹಿಷ್ಕರಿಸಲಾಗಿದೆ. ನಂತರ, ಆಕೆಯ ಮೇಲೆ ದಬ್ಬಾಳಿಕೆ ಮಾಡಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಲೈಕೆರಾ ಪೊಲೀಸ್ ಠಾಣೆ ವ್ಯಾಪ್ತಿಯ ರೌತ್ಬಹಾಲ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಹಿಳೆಯ ಪತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಮಹಿಳೆಯು ಆಗಸ್ಟ್ 9 ರಂದು ತನ್ನ ಪತಿಯೊಂದಿಗೆ ಯಾವುದೋ ವಿಷಯಕ್ಕೆ ಜಗಳವಾಡಿದ್ದಳು, ಈ ಸಂದರ್ಭದಲ್ಲಿ ಆಕೆ ಆತನಿಗೆ ಹೊಡೆದಿದ್ದಳು.
ನಂತರ, ಆಕೆಯ ಪತಿ ಘಟನೆಯ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದ್ದು, ‘ವಿಚಾರಣೆಗಾಗಿ ಗ್ರಾಮಸ್ಥರ ಪಂಚಾಯಿತಿ ಕರೆಯಲಾಯಿತು. ಊರಿನ ಮುಖಂಡರು ಮಹಿಳೆಯನ್ನು ಬಹಿಷ್ಕರಿಸಲು ಮತ್ತು ಗಲಭೆ ಮಾಡುವಂತೆ ಆದೇಶಿಸಿದೆ ಎಂದು ಆರೋಪಿಸಲಾಗಿದೆ. ಮಹಿಳೆಗೆ 5,000 ರೂಪಾಯಿ ದಂಡ ವಿಧಿಸಿ, ಜನರಿಗೆ ಮಾಂಸದ ಊಟ ಹಾಖಿಸುವಂತೆ ಸೂಚಿಸಿದೆ.
ಆಕೆಯನ್ನು ಥಳಿಸಿ ಬಹಿಷ್ಕರಿಸಿದ ನಂತರ, ಮಹಿಳೆ ಮತ್ತು ಆಕೆಯ ಮಗ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.
“ತನಿಖೆಯ ಸಮಯದಲ್ಲಿ, ಮಹಿಳೆಯ ಪತಿ ಮತ್ತು ಗ್ರಾಮದ ಇತರ ಮೂವರು ಹಿರಿಯ ವ್ಯಕ್ತಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ನಾವು ಅವರನ್ನು ಬಂಧಿಸಿದ್ದೇವೆ” ಎಂದು ಲೈಕೆರಾ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ದಿಲ್ಲಿಪ್ ಕುಮಾರ್ ಬೆಹೆರಾ ಹೇಳಿದ್ದಾರೆ.
ಇದನ್ನೂ ಓದಿ; ಅತ್ಯಾಚಾರ ಪ್ರಕರಣಗಳಲ್ಲಿ ದೂರುದಾರರು ಮತ್ತು ಆರೋಪಿಗಳು ನ್ಯಾಯಾಲಯದ ಹೊರಗೆ ರಾಜಿಯಾಗುವಂತಿಲ್ಲ : ಕೇರಳ ಹೈಕೋರ್ಟ್


