ಸಾಮಾಜಿಕ ಮಾಧ್ಯಮಗಳಲ್ಲಿ ಹಿಂಸಾತ್ಮಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ದೆಹಲಿಯ ಸ್ವಘೋಷಿತ ಗೋರಕ್ಷಕ ರಾಕಿ ರಾಣಾ ಎಂಬಾತನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಪತ್ರಕರ್ತ ಮೊಹಮ್ಮದ್ ಝುಬೈರ್ ಸೇರಿದಂತೆ ಹಲವರು ರಾಕಿ ರಾಣಾ ಪದೇ ಪದೇ ಹಿಂಸಾತ್ಮಕ ವಿಡಿಯೋಗಳನ್ನು ಹೆಮ್ಮೆಯಿಂದ ಹಂಚಿಕೊಳ್ಳುತ್ತಿದ್ದು, ಪೊಲೀಸರು ಆತನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಎಕ್ಸ್‌ನಲ್ಲಿ ರಾಕಿ ರಾಣಾನ ಕೆಲವೊಂದು ಪೋಸ್ಟ್‌ಗಳನ್ನು ಝುಬೈರ್ ಹಂಚಿಕೊಂಡಿದ್ದಾರೆ. ಒಂದು ಪೋಸ್ಟ್‌ನಲ್ಲಿ ರಾಕಿ ರಾಣಾ ಇಬ್ಬರು ವ್ಯಕ್ತಿಗಳನ್ನು ಹಿಂಸಿಸುವ ದೃಶ್ಯವಿದೆ. “ಆತ ಈ ರೀತಿಯ ಅನೇಕ ವಿಡಿಯೋಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದಾನೆ. ಇನ್ನಷ್ಟು ದುಷ್ಕೃತ್ಯಗಳನ್ನು ಎಸಗಲು ದೇಣಿಗೆ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ರಾಜಾರೋಷವಾಗಿ ಕೇಳುತ್ತಿದ್ದಾನೆ” ಎಂದು ಝುಬೈರ್ ಬರೆದುಕೊಂಡಿದ್ದಾರೆ.
Cow vigilante Rocky Rana from Delhi regularly shares violent videos of him attacking people who he alleges are Cow Transporters.
He shared this video on Facebook of him beating two men. There are many such videos on his Facebook profile. He regularly asked his followers on… pic.twitter.com/M7Caf5y0JB— Mohammed Zubair (@zoo_bear) September 2, 2024
“ಸ್ವಘೋಷಿತ ಗೋರಕ್ಷಕ ರಾಕಿ ರಾಣಾ ಗೋಸಾಗಟದ ಆರೋಪದ ಮೇಲೆ ಜನರ ಮೇಲೆ ದಾಳಿ ಮಾಡುತ್ತಾನೆ. ಬಳಿಕ, ಅದನ್ನು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾನೆ. ಆತನ ವಿರುದ್ಧ ಹಲವು ಪ್ರಕರಣಗಳಿವೆ. ಆದರೆ ಆತ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದ್ದಾನೆ. ಏಕೆಂದರೆ, ಪೊಲೀಸರು ಬಂಧಿಸುವುದಿಲ್ಲ ಎಂದು ಆತನಿಗೆ ಗೊತ್ತಿದೆ. ಒಂದು ವೇಳೆ ಬಂಧಿಸಿದರೂ, ಅದೇ ದುಷ್ಕೃತ್ಯ ಮುಂದುವರಿಸಲು ಆತ ಶೀಘ್ರದಲ್ಲೇ ಹೊರ ಬರುತ್ತಾನೆ ಎಂದು ಝುಬೈರ್ ತಿಳಿಸಿದ್ದಾರೆ.
ಝುಬೈರ್ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದು, ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವರು, ಸರ್ಕಾರವೇ ಇಂತವರಿಗೆ ಪ್ರೋತ್ಸಾಹ ನೀಡುತ್ತಿದೆ. ರಾಣನಂತವರು ಈ ರೀತಿಯ ದುಷ್ಕೃತ್ಯಗಳನ್ನು ನಡೆಸಿ ಮುನ್ನೆಲೆಗೆ ಬರುತ್ತಾರೆ. ಬಳಿಕ ಸರ್ಕಾರವೇ ಅವರಿಗೆ ರಕ್ಷಣೆ ಒದಗಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಹರ್ಯಾಣ: ದನ ಕಳ್ಳ ಸಾಗಣೆದಾರನೆಂದು ಭಾವಿಸಿ 12ನೇ ತರಗತಿ ವಿದ್ಯಾರ್ಥಿಯನ್ನು ಹತ್ಯೆಗೈದ ಗೋರಕ್ಷಕರು


