ಶಿಕ್ಷಣದ ಉದ್ದೇಶಕ್ಕೆ ಪಡೆದ ಸಿಎ ನಿವೇಶನದಲ್ಲಿ ‘ಧಮ್ ಬಿರಿಯಾನಿ’ ಹೋಟೆಲ್ ನಡೆಸುವ ಮೂಲಕ ಅಕ್ರಮ ಎಸಗಿರುವ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಪರಿಷತ್ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಈ ಸಂಬಂಧ ವಿಧಾನಪರಿಷತ್ತಿನ ಕಾಂಗ್ರಸ್ ಪಕ್ಷದ ಹಾಲಿ ಮತ್ತು ಮಾಜಿ ಸದಸ್ಯರ ನಿಯೋಗ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಮಂಗಳವಾರ ಭೇಟಿಯಾಗಿ ದೂರು ಸಲ್ಲಿಸಿ, ಮನವಿ ಮಾಡಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ವಿಧಾನಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು, “ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಅನರ್ಹಗೊಳಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ” ಎಂದು ತಿಳಿಸಿದ್ದಾರೆ.
“ನಾರಾಯಣಸ್ವಾಮಿ ಅವರು ಗೃಹಮಂಡಳಿ ಅಧ್ಯಕ್ಷರಾಗಿದ್ದಾಗ ಶಿಕ್ಷಣದ ಉದ್ದೇಶಕ್ಕೆಂದು ಸಿಎ ಸೈಟ್ ಪಡೆದಿದ್ದರು, ಪ್ರಸಕ್ತ ಆ ಸ್ಥಳದಲ್ಲಿ ಆದರ್ಶ ದಮ್ ಬಿರಿಯಾನಿ ಸೆಂಟರ್ ಇದೆ. ಇದು ದುರ್ದೈವ. ಈ ಸಂಬಂಧ ಲೋಕಾಯುಕ್ತರಿಗೂ ದೂರು ನೀಡಲಾಗುವುದು” ಎಂದು ಹೇಳಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಅನರ್ಹಗೊಳಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.
ನಾರಾಯಣಸ್ವಾಮಿ ಅವರು ಗೃಹಮಂಡಳಿ ಅಧ್ಯಕ್ಷರಾಗಿದ್ದಾಗ ಶಿಕ್ಷಣದ ಉದ್ದೇಶಕ್ಕೆಂದು ಸಿಎ ಸೈಟ್ ಪಡೆದಿದ್ದರು, ಪ್ರಸಕ್ತ ಆ ಸ್ಥಳದಲ್ಲಿ ಆದರ್ಶ ದಮ್ ಬಿರಿಯಾನಿ ಸೆಂಟರ್ ಇದೆ.… pic.twitter.com/mF8B2pGc5F
— Karnataka Congress (@INCKarnataka) September 3, 2024
ಆದರ್ಶ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿರುವ ಛಲವಾದಿ ನಾರಾಯಣಸ್ವಾಮಿ, ಹೊಸಕೋಟೆಯಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಿಎ ನಿವೇಶನ ಪಡೆದಿದ್ದರು. 2006ರಲ್ಲಿ ಅದನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಟೆಲಿ ಕಮ್ಯೂನಿಕೇಶನ್‌ಗೆ ನೋಂದಾಯಿಸಿಕೊಂಡಿದ್ದರು. ಆ ಜಾಗದಲ್ಲಿ ಈಗ ಧಮ್ ಬಿರಿಯಾನಿ ಹೋಟೆಲ್ ಇದೆ ಎಂದು ಸಲೀ ಅಹ್ಮದ್ ಆರೋಪಿಸಿದ್ದಾರೆ.
ಇದನ್ನೂ ಓದಿ : ತಾವಾಡಿದ ಮಾತುಗಳಿಗೆ ಕ್ಷಮೆ ಕೋರಿದ ಅರವಿಂದ್ ಬೆಲ್ಲದ್; ‘ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ’ ಎಂದ ಸಿಎಂ