ಮಧ್ಯ ಪ್ರದೇಶದ ಪನ್ನಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಹಿಂದೂ ಮಹಿಳೆಗೆ ರಕ್ತದಾನ ಮಾಡಲು ಮುಸ್ಲಿಂ ವ್ಯಕ್ತಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.
“ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪವನ್ ಸೋಂಕರ್ ಎಂಬ ವ್ಯಕ್ತಿ ತನ್ನ ತಾಯಿಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ತೆರಳಿದ್ದ. ವೈದ್ಯರು ತುರ್ತಾಗಿ ರಕ್ತದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಸೋಂಕರ್ ತನ್ನ ಮುಸ್ಲಿಂ ಸ್ನೇಹಿತನನ್ನು ರಕ್ತ ನೀಡಲು ಆಸ್ಪತ್ರೆಗೆ ಕರೆತಂದಿದ್ದ. ಆದರೆ, ವೈದ್ಯರು ಮುಸ್ಲಿಂ ವ್ಯಕ್ತಿಯ ರಕ್ತ ಹಿಂದೂ ಮಹಿಳೆಗೆ ನೀಡುವುದಿಲ್ಲ ಎಂಬುವುದಾಗಿ ಹೇಳಿದ್ದಾರೆ” ಎಂದು siasat.com ವರದಿ ಮಾಡಿದೆ.
ಈ ಆರೋಪಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವೊಂದನ್ನು ಪತ್ರಕರ್ತನೆಂದು ಗುರುತಿಸಿಕೊಂಡಿರುವ ವಕ್ವಾರ್ ಹಸನ್ (@WaqarHasan1231) ಎಂಬ ಬಳಕೆದಾರ ಸೆಪ್ಟೆಂಬರ್ 8,2024ರಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ವೈದ್ಯ ಎನ್ನಲಾದ ವ್ಯಕ್ತಿ “ಮುಸ್ಲಿಂ ವ್ಯಕ್ತಿಯ ರಕ್ತ ಹಿಂದೂ ರೋಗಿಗೆ ನೀಡಲು ಸಾಧ್ಯವಿಲ್ಲ, ಮುಂದೆ ಸಮಸ್ಯೆಯಾಗುತ್ತದೆ” ಎಂದು” ಹೇಳುತ್ತಿರುವುದು ಇದೆ.
In MP's Panna, a doctor refused to transfuse blood of Muslim to a Hindu woman at govt hospital. Last month,the mother of a man Pawan Sonkar was in need of blood. he brought his Muslim friend to transfuse the blood but the doctor said that he can't transfuse Muslim blood to Hindu pic.twitter.com/ApvPv9fK3O
— Waquar Hasan (@WaqarHasan1231) September 8, 2024
ಈ ವಿಡಿಯೋ ಬಗ್ಗೆ ಖಚಿತ ಮಾಹಿತಿ ತಿಳಿದು ಬರಬೇಕಿದೆ.
ಇದನ್ನೂ ಓದಿ : ಭಾರತದಲ್ಲಿ ಸಮಾನತೆ ಸಾರ್ವತ್ರಿಕವಾದಾಗ ಮೀಸಲಾತಿ ರದ್ದುಗೊಳಿಸುವ ಬಗ್ಗೆ ಯೋಚಿಸುತ್ತೇವೆ: ರಾಹುಲ್ ಗಾಂಧಿ


