ಗುಜರಾತ್‌ನ ಏಕತಾ ಪ್ರತಿಮೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಅದರ ಸ್ಥಿರತೆಯ ಬಗ್ಗೆ ಆತಂಕವಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದ ವರದಿಯಾಗಿದೆ. ರಾಜ್ಯದ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ಇರುವ 182 ಮೀಟರ್ ಎತ್ತರದ ಪ್ರತಿಮೆ ಪ್ರವಾಸಿ ಕೇಂದ್ರವಾಗಿದ್ದು ಸಾವಿರಾರು ಜನರು ಅಲ್ಲಿಗೆ ಭೇಟಿ ನೀಡುತ್ತಾರೆ.
“RaGa4India” ಎಂಬ ಹ್ಯಾಂಡಲ್‌ನಿಂದ ಸೆಪ್ಟೆಂಬರ್ 8, 2024 ರಂದು ಮಾಡಿದ ಪೋಸ್ಟ್‌ನಲ್ಲಿ ಏಕತಾ ಪ್ರತಿಮೆ ಬಿರುಕು ಬಿಟ್ಟಿದೆ ಎಂದು ಪ್ರತಿಪಾದಿಸಿ ಪೋಸ್ಟ್ ಹಾಕಲಾಗಿತ್ತು. ಆದರೆ ನಂತರ ಅದನ್ನು ಅಳಿಸಲಾಗಿದೆ. ಪ್ರತಿಮೆಯಲ್ಲಿ ಇರುವ ಬಿರುಕುಗಳಿಂದಾಗಿ ಪ್ರತಿಮೆ ಕುಸಿಯಬಹುದು ಎಂದು ಅದರಲ್ಲಿ ಹೇಳಲಾಗಿತ್ತು. ಜೊತೆಗೆ ಪೋಸ್ಟ್‌ನಲ್ಲಿ ಪ್ರತಿಮೆಯ ನಿರ್ಮಾಣ ಹಂತದ ಹಳೆಯ ಛಾಯಾಚಿತ್ರವನ್ನು ಕೂಡಾ ಹಾಕಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಯೂನಿಟಿ ಏರಿಯಾ ಡೆವಲಪ್‌ಮೆಂಟ್ ಅಂಡ್ ಟೂರಿಸಂ ಗವರ್ನೆನ್ಸ್ ಅಥಾರಿಟಿಯ ಡೆಪ್ಯೂಟಿ ಕಲೆಕ್ಟರ್ ಅಭಿಷೇಕ್ ರಂಜನ್ ಸಿನ್ಹಾ ಅವರು ಭಾರತೀಯ ನ್ಯಾಯ್ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 353 (1) ಅಡಿಯಲ್ಲಿ ಸುಳ್ಳು ಪೋಸ್ಟ್ ಮಾಡಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಇಂತಹ ತಪ್ಪು ಮಾಹಿತಿಯು ಸಾರ್ವಜನಿಕ ಶಾಂತಿಯನ್ನು ಕದಡುವುದು ಮಾತ್ರವಲ್ಲದೆ ಪ್ರಮುಖ ರಾಷ್ಟ್ರೀಯ ಸ್ಮಾರಕಗಳ ಮೇಲಿನ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ ಎಂದು ಅಧಿಕಾರಿಗಳು ಒತ್ತಿಹೇಳಿದ್ದಾರೆ.
ಸರ್ದಾರ್ ವಲ್ಲಭಾಭಾಯ್ ಪಟೇಲ್ ಅವರ ಈ ಏಕತಾ ಪ್ರತಿಮೆಯನ್ನು 2018ರ ಅಕ್ಟೋಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.
ಇದನ್ನೂ ಓದಿ: ಅನರ್ಹತೆ ಬಳಿಕ ಪ್ಯಾರಿಸ್‌ನಲ್ಲಿ ನನಗೆ ಯಾವುದೇ ಬೆಂಬಲ ಸಿಗಲಿಲ್ಲ: ವಿನೇಶಾ ಫೋಗಟ್


