ಮದುವೆ ಆಮಿಷ ನೀಡಿ 77 ಮಹಿಳೆಯರನ್ನು ಬಲೆಗೆ ಬೀಳಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ದೂಚಿ ವಂಚಿಸಿದ್ದ 43 ವರ್ಷದ ದರೋಡೆಕೋರನನ್ನು ಒರಿಸ್ಸಾ ಅಪರಾಧ ವಿಭಾಗದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆರೋಪಿಯು ಕಳೆದ 10 ವರ್ಷಗಳಲ್ಲಿ ಸುಮಾರು 7 ರಾಜ್ಯಗಳ ಮಹಿಳೆಯರ ವಿರುದ್ಧ ಈ ಕೃತ್ಯ ಎಸಗಿದ್ದಾಗಿ ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆರೋಪಿಯನ್ನು ಅಂಗುಲ್‌ನ ಚೆಂಡಿಪಾಡಾ ಮೂಲದ ಬಿರಂಚಿ ನಾರಾಯಣನಾಥ್ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಿದ ಸಿಐಡಿ-ಸಿಬಿಯ ಸೈಬರ್ ಕ್ರೈಂ ಘಟಕವು ಆತನಿಂದ ವಶಪಡಿಸಿದ ಮೂರು ಮೊಬೈಲ್ ಫೋನ್‌ಗಳಿಂದ ವಾಟ್ಸಾಪ್ ಚಾಟ್‌ಗಳ ಜೊತೆಗೆ ಮಹಿಳೆಯರ 300 ಕ್ಕೂ ಹೆಚ್ಚು ನಿಕಟ ಫೋಟೋಗಳನ್ನು ಕಂಡುಕೊಂಡಿದೆ.
ಆರೋಪಿಯಿಂದ ವಂಚನೆಗೊಳಗಾದವರ ನಿಖರ ಸಂಖ್ಯೆಯನ್ನು ಸಿಬಿ ಖಚಿತಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. 2013ರಿಂದಲೂ ಈತ ಇಂತಹ ವಂಚನೆ ಮಾಡುತ್ತಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಯು ಒರಿಸ್ಸಾ ಮಾತ್ರವಲ್ಲದೆ ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ ಮತ್ತು ನವದೆಹಲಿಯಾದ್ಯಂತ ಮಹಿಳೆಯರಿಗೆ ವಂಚನೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಒರಿಸ್ಸಾದಲ್ಲಿ, ಬೈದ್ಯನಾಥಪುರ, ಜರ್ಪದ, ಬಾಲಸೋರ್ ಸದರ್, ಛೇಂಡ್, ಧೆಂಕನಲ್ ಟೌನ್, ನಯಾಪಲ್ಲಿ, ಬಲಿಪಟ್ನಾ ಮತ್ತು ಅಂಗುಲ್ ಟೌನ್ ಪೊಲೀಸ್ ಠಾಣೆಗಳಲ್ಲಿ ಮಹಿಳೆಯರನ್ನು ಮದುವೆಯಾಗಿ ಸುಲಿಗೆ ಮಾಡಿದ್ದಕ್ಕಾಗಿ ಈತನ ವಿರುದ್ಧ ಈ ಹಿಂದೆ ಕನಿಷ್ಠ ಒಂಬತ್ತು ಪ್ರಕರಣಗಳು ದಾಖಲಾಗಿದ್ದವು ವರದಿ ಹೇಳಿವೆ.
ಇದನ್ನೂಓದಿ: “ನಾವೂ ತಲ್ವಾರ್ ಹಿಡಿಯುತ್ತೇವೆ”: ಪ್ರಚೋದನಕಾರಿ ಹೇಳಿಕೆ ಕೊಟ್ಟ ಪ್ರತಾಪ್ ಸಿಂಹ
ಆರೋಪಿಯು ಕನಿಷ್ಠ ಮೂರು ಬಾರಿ ಜೈಲಿಗೆ ಹೋಗಿ ಬಂದರೂ ತನ್ನ ವಂಚನೆಯನ್ನು ಮುಂದುವರೆಸಿದ್ದನು. ಆತನ ತಾನು ರೈಲ್ವೆ, ಆದಾಯ ತೆರಿಗೆ ಇಲಾಖೆ, ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಮತ್ತು ನರಶಸ್ತ್ರಚಿಕಿತ್ಸಕನ ಉದ್ಯೋಗಿ ಎಂದು ಬಿಂಬಿಸಿ ಮಹಿಳೆಯರಿಗೆ ವಂಚಿಸಿದ್ದನು. ಜೊತೆಗೆ ತಾನು ರಾಜ್ಯಶಾಸ್ತ್ರ, ಇಂಗ್ಲಿಷ್ ಹಾಗೂ ಕಾನೂನಿನಲ್ಲಿ ಎಂಎ ಪದವಿ ಪಡೆದಿರುವುದಾಗಿ ಹೇಳಿಕೊಂಡಿದ್ದಾನೆ.
ನಾಲ್ಕು ಭಾಷೆಗಳಲ್ಲಿ ಸ್ಪಷ್ಟ ಮತ್ತು ನಿರರ್ಗಳವಾಗಿ ಮಾತನಾಡುವ ಆರೋಪಿ, ದೇವಾಲಯಗಳಲ್ಲಿ ಹಲವು ಮಹಿಳೆಯರಿಗೆ ತಾಳಿ ಕಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವೈವಾಹಿಕ ಸೈಟ್‌ಗಳಲ್ಲಿ, ಆರೋಪಿ ನಾರಾಯಣನಾಥ್ ಹೆಚ್ಚಾಗಿ ಮಧ್ಯವಯಸ್ಸಿನ ಮಹಿಳೆಯರು ಪ್ರತ್ಯೇಕಗೊಂಡ ಅಥವಾ ವಿಚ್ಛೇದನ ಮತ್ತು ವಿಧವೆಯರನ್ನು ಗುರಿಯಾಗಿಸಿಕೊಂಡಿದ್ದನು. ತನ್ನ ಮೂಲ ಹೆಸರನ್ನು ಮರೆಮಾಚಿ, ಪ್ರವಾಕರ್ ಶ್ರೀವಾಸ್ತವ್ ಮತ್ತು ಮಾನಸ್ ರಾತ್ ಅವರಂತಹ ನಕಲಿ ಗುರುತುಗಳನ್ನು ಬಳಸುತ್ತಿದ್ದನು.
ಮಹಿಳೆಯರನ್ನು ಮದುವೆಯಾದ ನಂತರ ಅವರ ಮನೆಗಳಲ್ಲಿಯೇ ಇರುತ್ತಿದ್ದ ಆರೋಪಿ, ಅವರಲ್ಲಿ ಯಾರನ್ನೂ ತನ್ನ ಮನೆಗೆ ಕರೆದುಕೊಂಡು ಹೋಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂಓದಿ:‘ಶ್ರೀ ವಿಜಯ ಪುರಂ’ | ಅಂಡಮಾನ್ ನಿಕೋಬರ್ ರಾಜಧಾನಿ ‘ಪೋರ್ಟ್ ಬ್ಲೇರ್’ ಮರುನಾಮಕರಣ
2022 ರಲ್ಲಿ ರಸ್ತೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡು ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದ ಕಟಕ್‌ನ ಮಹಿಳೆಯನ್ನು ಆರೋಪಿ ಸಂಪರ್ಕಿಸಿದ್ದನು ಎಂದು ಸಿಬಿ ದಾಖಲಿಸಿದ ಪ್ರಕರಣದಲ್ಲಿ ಹೇಳಿದೆ. ಸಂತ್ರಸ್ತೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರವಾಕರ್ ಶ್ರೀವಾಸ್ತವ್ ಎಂಬ ನಕಲಿ ಹೆಸರಿನಲ್ಲಿದ್ದ ಆರೋಪಿಯ ಸಂಪರ್ಕಕ್ಕೆ ಬಂದಿದ್ದರು. ಆಗ ಆರೋಪಿ ತಾನು ವಿಶಾಖಪಟ್ಟಣಂನಲ್ಲಿ ರೈಲ್ವೇಯಲ್ಲಿ ಪ್ರಯಾಣ ಟಿಕೆಟ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದನು.
ವಂಚನೆಯಿಂದ ಮಹಿಳೆಯನ್ನು ಮದುವೆಯಾದ ನಂತರ, ನಾರಾಯಣನಾಥ್ ಸುಮಾರು ಐದು ತಿಂಗಳ ಕಾಲ ಮಹಿಳೆಯ ಮನೆಯಲ್ಲಿದ್ದುಕೊಂಡು ಅವರಿಗೆ ಶೋಷಣೆ ಮಾಡಿದ್ದಾನೆ ಎಂದು ಸಿಬಿ ಮೂಲಗಳು ತಿಳಿಸಿವೆ. ತನ್ನ ದುರ್ವರ್ತನೆ ವೇಳೆ ಆರೋಪಿ ಮಹಿಳೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಆಕೆಯಿಂದ 5 ಲಕ್ಷ ರೂಪಾಯಿ ಹಾಗೂ 32 ಗ್ರಾಂ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಾರಾಯಣನಾಥ್ ತನ್ನ ಖಾಸಗಿ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಮಹಿಳೆ ದೌರ್ಜನ್ಯವನ್ನು ಸಹಿಸಿಕೊಂಡಿದ್ದರು. ಆದರೆ, ಆರೋಪಿ ಬೇರೆ ಮಹಿಳೆಯರೊಂದಿಗೆ ಸಂಪರ್ಕದಲ್ಲಿ ಇರುವುದು ತಿಳಿದಾಗ ಮಹಿಳೆ ಸಿಬಿಗೆ ದೂರು ನೀಡಿದ್ದರು.
ವಿಡಿಯೊನೋಡಿ: ಒಕ್ಕೂಟ ವ್ಯವಸ್ಥೆ ಮಣ್ಣು ಮುಕ್ಕಿದೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ ಮಾತುಗಳು


