Homeಮುಖಪುಟಕನ್ನಡದಲ್ಲಿ ಔ‍ಷಧ ಚೀಟಿ | ಪ್ರಾಧಿಕಾರದ ಪ್ರಸ್ತಾಪ 'ಅಸಂಬದ್ಧ ಮತ್ತು ಅನಗತ್ಯ': ಖ್ಯಾತ ವೈದ್ಯ ಶ್ರೀನಿವಾಸ...

ಕನ್ನಡದಲ್ಲಿ ಔ‍ಷಧ ಚೀಟಿ | ಪ್ರಾಧಿಕಾರದ ಪ್ರಸ್ತಾಪ ‘ಅಸಂಬದ್ಧ ಮತ್ತು ಅನಗತ್ಯ’: ಖ್ಯಾತ ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯ ಅಸಮಾಧಾನ

- Advertisement -
- Advertisement -

ರಾಜ್ಯದ ವೈದ್ಯರುಗಳು ರೋಗಿಗಳಿಗೆ ನೀಡುವ ಔಷಧ ಚೀಟಿಗಳನ್ನು ಕನ್ನಡದಲ್ಲಿ ಬರೆಯಬೇಕು ಎನ್ನುವ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋಷೋತ್ತಮ ಬಿಳಿಮಲೆ ಅವರ ಪ್ರಸ್ತಾಪಕ್ಕೆ ಖ್ಯಾತ ವೈದ್ಯರಾದ ಶ್ರೀನಿವಾಸ ಕಕ್ಕಿಲ್ಲಾಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ‘ಅಸಂಬದ್ಧ’ ಮತ್ತು ‘ಅನಗತ್ಯ’ ಪ್ರಸ್ತಾಪ ಎಂದು ಹೇಳಿದ್ದಾರೆ. ”ವೈದ್ಯರುಗಳಿಗೆ ರೋಗಿಗಳ ಶುಶ್ರೂಷೆ ಮಾಡುವುದು ಆದ್ಯ ಕರ್ತವ್ಯವಾಗಿದೆ, ಕನ್ನಡ ಬೆಳೆಸುವುದಲ್ಲ. ಒಂದು ವೇಳೆ ಕನ್ನಡ ಬೆಳೆಸುವುದು ವೈದ್ಯರುಗಳ ಕೆಲಸ ಎಂದು ಪ್ರಾಧಿಕಾರ ಹೇಳುವುದಾದರೆ, ಪ್ರಾಧಿಕಾರದಲ್ಲಿ ಕನ್ನಡ ಬೆಳೆಸುವ ಮತ್ತು ಉಳಿಸುವ ಯಾವುದೆ ಹೊಸ ಚಿಂತನೆ ಇಲ್ಲ ಎಂದರ್ಥ” ಎಂದು ಅವರು ಹೇಳಿದ್ದಾರೆ. ಕನ್ನಡದಲ್ಲಿ ಔ‍ಷಧ ಚೀಟಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

ಕನ್ನಡ ಪ್ರಾಧಿಕಾರದ ಪ್ರಸ್ತಾಪದ ಬಗ್ಗೆ ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ಡಾಕ್ಟರ್ ಶ್ರೀನಿವಾಸ ಕಕ್ಕಿಲ್ಲಾಯ ಅವರು, ಕನ್ನಡ ಬೆಳೆಸುವುದು ವೈದ್ಯರ ಕೆಲಸವಲ್ಲ ಎಂದು ಹೇಳಿದರು. “ನನಗೆ ಪ್ರೊಫೆಸರ್ ಬಿಳಿಮಲೆ ಮೇಲೆ ತುಂಬಾ ಗೌರವಿದೆ, ಅವರು ಮಾಡಿರುವ ಕೆಲಸಗಳ ಬಗ್ಗೆ ಹೆಮ್ಮೆಯಿದೆ. ಆದರೆ ಅವರ ಇಂತಹ ಸಲಹೆಗಳನ್ನು ನಾನು ಒಪ್ಪಬೇಕೆಂದಿಲ್ಲ. ಒಂದು ವೇಳೆ ಔ‍ಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆದರೆ ಅದು ಭಾರಿ ಗೊಂದಲಕ್ಕೆ ದಾರಿ ಮಾಡಿಕೊಡುತ್ತದೆ. ರೋಗಿಗಳಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ, ಅದಕ್ಕೆ ಹೊಣೆ ಯಾರು” ಎಂದು ಕೇಳಿದರು.

“ಮೊದಲನೆಯದಾಗಿ ಈಗಾಗಲೆ ಲಕ್ಷಾಂತರ ಔಷಧಿ ಬ್ರಾಂಡ್‌ಗಳು ಮಾರುಕಟ್ಟೆಯಲ್ಲಿ ಇವೆ. ಔ‍ಷಧಗಳ ಹೆಸರಿನಲ್ಲಿ ಒಂದು ಅಕ್ಷರ ಬದಲಾದರೂ ಅದು ಬೇರೆಯೆ ಆಗಿಬಿಡುತ್ತದೆ. ಅಲ್ಲದೆ, ಕನ್ನಡದಲ್ಲಿ ಔಷದ ಬರೆದರೆ ಔಷಧ ಅಂಗಡಿಗಳಲ್ಲಿ ಔಷಧ ಕೊಡುವವರು ಕನ್ನಡಿಗರೆ ಆಗಿರುವುದಿಲ್ಲ. ಅದನ್ನು ಓದಲು ತಿಳಿಯದೆ ಮತ್ತೆ ನಮಗೆ ಕರೆ ಮಾಡಿ ಅದರ ಬಗ್ಗೆ ಕೇಳುತ್ತಾರೆ. ನಾವು ರೋಗಿಗಳನ್ನು ಬಿಟ್ಟು ಅವರಿಗೆ ಉತ್ತರಿಸುವುದೆ ಕೆಲಸ ಮಾಡಿಕೊಂಡಿರಲು ಸಾಧ್ಯವಿಲ್ಲ. ಕನ್ನಡ ಕಟ್ಟುವ ಕೆಲಸ ಎಂದರೆ ಇದಲ್ಲ” ಎಂದು ಅವರು ತಿಳಿಸಿದರು.

“ಜಗತ್ತುಈಗ ಕಿರಿದಾಗುತ್ತಿದೆ. ನಾವು ಆಧುನಿಕ ವೈದ್ಯರು ಜಗತ್ತಿನಾದ್ಯಂತ ವೈದ್ಯರು ಬರೆಯುವ ಹಾಗೆ ಔ‍ಷಧಿ ಚೀಟಿಯನ್ನು ಬರೆಯುತ್ತೇವೆ. ಮಂಗಳೂರಿನಲ್ಲಿ ಒಬ್ಬ ವೈದ್ಯ ಬರೆದ ಔ‍ಷಧ ಚೀಟಿ ಜಗತ್ತಿನ ಮತ್ತು ದೇಶದ ಬೇರೆ ವೈದ್ಯರಿಗೂ ಓದುವಂತೆ ಇದ್ದು ರೋಗಿಯ ಶುಶ್ರೂಷೆ ಮಾಡುವಂತೆ ಇರಬೇಕು. ಒಂದು ವೇಳೆ ನಾನು ಕನ್ನಡದಲ್ಲಿ ಔಷಧ ಚೀಟಿ ಬರೆದು ಕೊಟ್ಟ ರೋಗಿಯು ಕೇರಳದಲ್ಲಿ ಅನಾರೋಗ್ಯ ಪೀಡಿತನಾದರೆ, ಆತನಿಗೆ ಕನ್ನಡ ಬಾರದ ಮಲಯಾಳಂ ವೈದ್ಯರು ರೋಗ ನಿರ್ಣಯ ಮಾಡಿ ಹೇಗೆ ಚಿಕಿತ್ಸೆ ನೀಡುತ್ತಾರೆ?. ಔ‍ಷಧ ಚೀಟಿ ಎಂದರೆ ಕೇವಲ ಭಾಷೆಯ ಭಾವನಾತ್ಮಕ ವಿಚಾರ ಅಲ್ಲ, ಅದು ರೋಗಿಗಳ ರೋಗ ನಿರ್ಣಯದ ದಾಖಲೆ ಕೂಡಾ ಆಗಿದೆ” ಎಂದು ಅವರು ಹೇಳಿದರು.

ಇದನ್ನೂಓದಿ:ಪರಶುರಾಮ ಪ್ರತಿಮೆ | ಕಂಚಿಗೆ ಬದಲಾಗಿ ಹಿತ್ತಾಳೆ, ತಾಮ್ರ ಬಳಕೆ : ಜನರ ಹಣ ಲೂಟಿ ಹೊಡೆಯಲಾಗಿದೆ ಎಂದ ಹೈಕೋರ್ಟ್‌

“ಅಷ್ಟೆ ಅಲ್ಲದೆ, ವೈದ್ಯರು ಹೇಗೆ ಔ‍ಷಧ ಚೀಟಿ ಬರೆಯಬೇಕು ಎಂದು ನಮಗೆ ವೈದ್ಯ ಪರಿಷತ್ತು ಆದೇಶಿಸುತ್ತದೆ. ಅದನ್ನು ವೈದ್ಯರು ಪಾಲಿಸಬೇಕಿದೆ. ಅದು ಬಿಟ್ಟು ಕನ್ನಡ ಪ್ರಾಧಿಕಾರ ಇದನ್ನು ಹೇಳುವ ಹಾಗೆಯೆ ಇಲ್ಲ. ಇತ್ತಿಚೆಗೆ ಆರೋಗ್ಯ ಸಚಿವರು ಕೂಡಾ ಇದನ್ನೇ ಹೇಳಿದ್ದಾರೆ. ಭಾಷೆ ತಳಮಟ್ಟದಿಂದ ಬೆಳೆಯುವುದಕ್ಕೆ ವೈದ್ಯರು ಆಯಾ ಭಾಷೆಗಳಲ್ಲಿ ಚೀಟಿ ಬರೆಯುವುದೇ ಮುಖ್ಯ ಕಾರಣ ಎಂದಾದರೆ ಅಭಿವೃದ್ಧಿ ಪ್ರಾಧಿಕಾರವು ಕೂಡ ಬೇಕಾಗಿಲ್ಲ ಅಲ್ಲವೆ. ಭಾಷೆ ಬೆಳೆಸುವ ಜವಾಬ್ದಾರಿಯನ್ನೂ ವೈದ್ಯರುಗಳಿಗೆ ಚೀಟಿ ಬರೆಯಲು ವಹಿಸಿಕೊಟ್ಟರಾಯಿತು” ಎಂದು ಅವರು ಹೇಳಿದರು.

“ಕನ್ನಡ ಬೆಳೆಯಬೇಕು, ಬೆಳೆಸಬೇಕು ಎಂಬ ಬಿಳಿಮಲೆ ಅವರ ಚಿಂತನೆಯ ಬಗ್ಗೆ ನನಗೆ ಸಮ್ಮತಿಯಿದೆ. ನಾನು ಅದರ ವಿರೋಧಿಯು ಅಲ್ಲ. ಆದರೆ ಅದನ್ನು ವೈದ್ಯರ ಮೇಲೆ ಹಾಕುವುದು ಸರಿಯಲ್ಲ. ಅದಕ್ಕಾಗಿ ಬೇರೆ ದಾರಿಯನ್ನು ಕನ್ನಡ ಪ್ರಾಧಿಕಾರ ಹುಡುಕಬೇಕು. ಈ ರಾಜ್ಯಕ್ಕೆ ಬಂದು ವೈದ್ಯಕೀಯ ಶಾಸ್ತ್ರ ಕಲಿಯುವ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಬಗ್ಗೆ ಪ್ರಾಧಿಕಾರ ಚಿಂತಿಸಲಿ. ಪ್ರೊಫೆಸರ್ ಬಿಳಿಮಲೆ ಅವರಲ್ಲಿ ಕನ್ನಡ ಕಲಿಸುವ ಇಂತಹ ಹಲವು ಮಾದರಿಗಳು ಇವೆ. ಇದರಲ್ಲಿ ಅವರು ತಜ್ಞರು ಕೂಡಾ ಆಗಿದ್ದಾರೆ” ಎಂದು ತಿಳಿಸಿದರು.

“ಬೇರೆ ರಾಜ್ಯದ ವಿದ್ಯಾರ್ಥಿಗಳು ಕನ್ನಡ ಕಲಿತು ರೋಗಿಗಳೊಂದಿಗೆ ಸಂವಹನ ನಡೆಸಿದರೆ ಅದು ಕನ್ನಡ ಕಟ್ಟುವ ಕೆಲಸ ಆಗಲಿದೆ. ಜೊತೆಗೆ ಕನ್ನಡದ ರೋಗಿಗಳಿಗೆ ಇದರಿಂದ ಲಾಭವೂ ಆಗಲಿದೆ. ಅಷ್ಟೆ ಅಲ್ಲದೆ, ವೈದ್ಯಕೀಯ ಸಾಹಿತ್ಯ ಬರೆಯುವರಿಗೆ ಪ್ರಾಧಿಕಾರ ಪ್ರೋತ್ಸಾಹ ನೀಡಿ ಅವರನ್ನು ಬೆಳೆಸಬೇಕಿದೆ. ಜೊತೆಗೆ ವೈದ್ಯಕೀಯ ಭಾಷೆಯಲ್ಲಿ ಇರುವ ಹಲವು ಪದಗಳನ್ನು ಕನ್ನಡೀಕರಣ ಮಾಡುವಲ್ಲಿ ಮತ್ತು ಅದನ್ನು ಕನ್ನಡಿಗರಿಗೆ ತಲುಪಿಸುವಲ್ಲಿ ಕೆಲಸವನ್ನು ಮಾಡಬೇಕಿದೆ. ಅದು ಬಿಟ್ಟು ವೈದ್ಯರ ಮೇಲೆ ಕನ್ನಡ ಉಳಿಸುವ ಭಾರ ಹಾಕುವುದು ಸರಿಯಲ್ಲ” ಎಂದು ಡಾಕ್ಟರ್ ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು.

ವಿಡಿಯೊ ನೋಡಿ: ರಾಜ್ಯಗಳ ಅಸ್ಮಿತೆ ಹಕ್ಕು ಮತ್ತು ಪಾಲಿನ ರಕ್ಷಣೆಗಾಗಿ ರಾಷ್ಟ್ರೀಯ ಅಭಿಯಾನ ಚಾಲನಾ ಸಭೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...

ಧರ್ಮದ ಕಾರಣಕ್ಕೆ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಗೆ ಹಲವು ಬಾರಿ ಇರಿತ: ಅಮೆರಿಕದ ಮಾಲ್‌ನಲ್ಲಿ ಕೃತ್ಯ

ಅಮೆರಿಕದ ಉತಾಹ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಇರಿತದ ಆರೋಪ ಹೊರಿಸಲಾಗಿದೆ. ಹೈದರಾಬಾದ್‌ ನಗರದ ಟೋಲಿಚೌಕಿಯ ನಿವಾಸಿ ಸೈಯದ್ ಸೊಹೈಲ್ ಉದ್ದೀನ್, ಉತಾಹ್‌ನ ಸಾಲ್ಟ್ ಲೇಕ್ ಕೌಂಟಿಯ...

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...