ಪೋಲಿಯೊ ಲಸಿಕೆ ಅಭಿಯಾನವನ್ನು ಅಫ್ಘಾನಿಸ್ತಾನ ಅಡಳಿತ ನಡೆಸುತ್ತಿರುವ ತಾಲಿಬಾನ್ ಸ್ಥಗಿತಗೊಳಿಸಿದೆ ಎಂದು ವಿಶ್ವಸಂಸ್ಥೆ ಸೋಮವಾರ ತಿಳಿಸಿದೆ. ಸೆಪ್ಟೆಂಬರ್ ವೇಳೆ ನಡೆಯಲಿದ್ದ ಲಸಿಕೆ ಅಭಿಯಾನವು ಪ್ರಾರಂಭವಾಗುವ ಮೊದಲು ಈ ಲಸಿಕೆ ಅಭಿಯಾನ ಸ್ಥಗಿತಗೊಳಿಸುವಿಕೆಯ ಬಗ್ಗೆ ವಿಶ್ವಸಂಸ್ಥೆ ಏಜೆನ್ಸಿಗಳಿಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸ್ಥಗಿತಗೊಳಿಸುವಿಕೆಗೆ ಯಾವುದೇ ಕಾರಣವನ್ನು ನೀಡಲಾಗಿಲ್ಲ ಮತ್ತು ತಾಲಿಬಾನ್ ನಿಯಂತ್ರಿತ ಸರ್ಕಾರ ಈ ಬಗ್ಗೆ ತಕ್ಷಣಕ್ಕೆ ಯಾರೂ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಗಳು ಹೇಳಿವೆ. ದೇಶದ ಮನೆ-ಮನೆಗೆ ಲಸಿಕೆಗಳಿಂದ ದೂರವಿರಲು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಲಸಿಕೆಯ ಬಗ್ಗೆ ಚರ್ಚೆ ನಡೆದಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂಓದಿ: ಪ್ರಸ್ತುತ ಸಂವಿಧಾನದ ಅಡಿಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಾಧ್ಯವಿಲ್ಲ: ಪಿ. ಚಿದಂಬರಂ
ದೇಶದ ದಕ್ಷಿಣದ ಭಾಗದಲ್ಲಿ ಎರಡು ಪ್ರಕರಣಗಳನ್ನು ಹೊರತುಪಡಿಸಿ, ವಿಶ್ವ ಆರೋಗ್ಯ ಸಂಸ್ಥೆ(WHO) ಈ ವರ್ಷ ಅಫ್ಘಾನಿಸ್ತಾನ ದೇಶದಲ್ಲಿ 18 ಪೋಲಿಯೊ ಪ್ರಕರಣಗಳನ್ನು ದೃಢಪಡಿಸಿದೆ. 2023 ರಲ್ಲಿ ಅಫ್ಘಾನಿಸ್ಥಾನದಲ್ಲಿ ಆರು ಪ್ರಕರಣಗಳು ಪತ್ತೆಯಾಗಿದ್ದವು ಎಂದು ವರದಿಗಳು ಹೇಳಿವೆ.
“ಜಾಗತಿಕ ಪೋಲಿಯೊ ನಿರ್ಮೂಲನೆ ಮಾಡುವ ಈ ಉಪಕ್ರಮವು ಅಫ್ಘಾನಿಸ್ತಾನದ ಕೆಲವು ಭಾಗಗಳಲ್ಲಿ ಮನೆ-ಮನೆಗೆ ಪೋಲಿಯೊ ಲಸಿಕೆ ಅಭಿಯಾನದಿಂದ ಸೈಟ್-ಟು-ಸೈಟ್ ಲಸಿಕೆಗೆ ಬದಲಾಯಿಸುವ ಬಗ್ಗೆ ಇತ್ತೀಚೆಗೆ ಚರ್ಚೆಯಾಗಿದೆ. ಅಭಿಯಾನದಲ್ಲಿ ಒಳಗೊಂಡಿರುವವರು ಪ್ರಸ್ತುತ ನೀತಿಯಲ್ಲಿನ ಯಾವುದೇ ಬದಲಾವಣೆಯ ವ್ಯಾಪ್ತಿ ಮತ್ತು ಪ್ರಭಾವವನ್ನು ಚರ್ಚಿಸುವ ಮತ್ತು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ” ಎಂದು WHO ಅಧಿಕಾರಿ ಡಾ. ಹಮೀದ್ ಜಾಫಾರಿ ಹೇಳಿದ್ದಾರೆ.
ನೆರೆಯ ಪಾಕಿಸ್ತಾನದಲ್ಲಿ ಪೋಲಿಯೊ ವಿರೋಧಿ ಅಭಿಯಾನಗಳು ನಿಯಮಿತವಾಗಿ ಹಿಂಸಾಚಾರದಿಂದ ಸ್ಥಗಿತಗೊಳ್ಳುತ್ತಿವೆ. ಜನರಿಗೆ ಮಕ್ಕಳಾಗದಂತೆ ಮಾಡುವ ಪಾಶ್ಚಿಮಾತ್ಯ ರಾಷ್ಟ್ರಗಳ ಪಿತೂರಿ ಇದಾಗಿ ಎಂದು ಪೊಲೀಯೊ ಲಸಿಕೆಯನ್ನು ತಪ್ಪಾಗಿ ಅರ್ಥೈಸಿ, ಲಸಿಕೆ ತಂಡಗಳು ಮತ್ತು ಅವರನ್ನು ರಕ್ಷಿಸಲು ನಿಯೋಜಿಸಲಾದ ಪೊಲೀಸರನ್ನು ಉಗ್ರಗಾಮಿಗಳು ಗುರಿಮಾಡುತ್ತಾರೆ.
ವಿಡಿಯೊನೋಡಿ: ಒಕ್ಕೂಟ ವ್ಯವಸ್ಥೆ ಮಣ್ಣು ಮುಕ್ಕಿದೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ ಮಾತುಗಳು


