ಕೋಲ್ಕತ್ತಾ ಪಶ್ಚಿಮ ಬಂಗಾಳದ ಸರ್ಕಾರದ ಕಿರಿಯ ವೈದ್ಯರು ಮತ್ತು ಅಧಿಕಾರಿಗಳ ನಡುವಿನ ಎರಡನೇ ಸುತ್ತಿನ ಮಾತುಕತೆ ಕೂಡಾ ಆರ್‌ಜಿ ಕಾರ್ ಸಮಸ್ಯೆಯ ಕುರಿತು ವೈದ್ಯಾಧಿಕಾರಿಗಳು ನಡೆಸುತ್ತಿರುವ ಮುಷ್ಕರವನ್ನು ನಿಲ್ಲಸಲು ವಿಫಲವಾಗಿದೆ. ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಬರೆದು ಸಹಿ ಮಾಡುವ ಲಿಖಿತ ನಡಾವಳಿಗಳನ್ನು ನೀಡಲು ರಾಜ್ಯ ಸರ್ಕಾರ ನಿರಾಕರಿಸಿದೆ ಎಂದು ವೈದ್ಯರು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಭೆಯ ನಂತರ ವೈದ್ಯಾಧಿಕಾರಿಗಳು ತಮ್ಮ ಆಂದೋಲನ ಮತ್ತು ‘ಕೆಲಸ ನಿಲ್ಲಿಸಿ’ ನಡೆಸುತ್ತಿರುವ ಚಳವಳಿಯನ್ನು ಮುಂದುವರೆಸುವುದಾಗಿ ಘೋಷಿಸಿದ್ದಾರೆ. ಸಭೆಯಲ್ಲಿ ಒಪ್ಪಿಗೆಯಂತೆ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಸುರಕ್ಷತೆಯ ಕುರಿತು ಸರ್ಕಾರವು ಲಿಖಿತ ನಿರ್ದೇಶನಗಳನ್ನು ಹೊರಡಿಸುತ್ತದೆ. “ಮಾತುಕತೆಗಳು ಸುಗಮವಾಗಿ ನಡೆದಾಗ, ಚರ್ಚಿಸಿದ ವಿಷಯಗಳ ಸಹಿ ಮತ್ತು ಲಿಖಿತ ನಡಾವಳಿಗಳನ್ನು ನೀಡಲು ಸರ್ಕಾರ ನಿರಾಕರಿಸಿತು. ಸರ್ಕಾರದ ಧೋರಣೆಯಿಂದ ನಾವು ನಿರಾಶರಾಗಿದ್ದೇವೆ” ಎಂದು ಧರಣಿ ನಿರತ ವೈದ್ಯರಲ್ಲಿ ಒಬ್ಬರಾದ ಡಾ ಅನಿಕೇತ್ ಮಹತೋ ಬುಧವಾರ ರಾತ್ರಿ ಹೇಳಿದ್ದಾರೆ.
“ನಾವು ನಮ್ಮ ಬೇಡಿಕೆಗಳನ್ನು ವಿವರಿಸುವ ಇಮೇಲ್ ಅನ್ನು ನಾಳೆ ಕಳುಹಿಸುತ್ತೇವೆ. ಅದರ ಆಧಾರದ ಮೇಲೆ ಸರ್ಕಾರವು ನಿರ್ದೇಶನಗಳನ್ನು ನೀಡುತ್ತದೆ ಎಂದು ಭರವಸೆ ನೀಡಿದೆ. ಆ ನಿರ್ದೇಶನಗಳನ್ನು ನೀಡುವವರೆಗೂ ನಾವು ನಮ್ಮ ಆಂದೋಲನವನ್ನು ಮುಂದುವರೆಸುತ್ತೇವೆ” ಎಂದು ಮಹತೋ ಹೇಳಿದ್ದಾರೆ.
ಆರ್ ಜಿ ಕರ್ ಆಸ್ಪತ್ರೆಯ ಪಿಜಿ ವೈದ್ಯೆಯ ಮೇಲೆ ಅತ್ಯಾಚಾರ-ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯದರ್ಶಿ ಎನ್ ಎಸ್ ನಿಗಮ್ ವಿರುದ್ಧ ಇಲಾಖಾ ತನಿಖೆಯನ್ನು ಆರಂಭಿಸಬೇಕೆಂಬ ವೈದ್ಯರ ಬೇಡಿಕೆಯನ್ನು ಒಪ್ಪಿಕೊಳ್ಳಲು ರಾಜ್ಯ ನಿರಾಕರಿಸಿದೆ.
ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಮತ್ತು ನಂತರದ ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪಗಳನ್ನು ವಿದ್ಯಾರ್ಥಿಗಳು ಮತ್ತು ಟ್ರೈನಿ ವೈದ್ಯರು ಆರೋಪಿಸಿದ್ದರು. ಜೊತೆಗೆ ಈ ಸಮಸ್ಯೆಗಲನ್ನು ಪರಿಹರಿಸಬೇಕು ಎಂದು ಭಾರಿ ಪ್ರತಿಭಟನೆ ನಡೆಸುತ್ತಿದ್ದು, ಆರೋಗ್ಯ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ.ಕೋಲ್ಕತ್ತಾ
48 ಗಂಟೆಗಳಲ್ಲಿ ವೈದ್ಯಾಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ನಡುವೆ ನಡೆದ ಎರಡನೇ ಸುತ್ತಿನ ಮಾತುಕತೆ ಇದಾಗಿದೆ. ಸೋಮವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾಳಿಘಾಟ್ ನಿವಾಸದಲ್ಲಿ ಮೊದಲ ಸುತ್ತಿನ ಸಭೆಯನ್ನು ನಡೆಸಲಾಯಿತು.
ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ನೇತೃತ್ವದ ರಾಜ್ಯ ಮಟ್ಟದ ಸಾರ್ವಜನಿಕ ಆರೋಗ್ಯ ಕಾರ್ಯಪಡೆ ಮತ್ತು 30 ಕಿರಿಯ ವೈದ್ಯರ ನಿಯೋಗದ ನಡುವಿನ ಸಭೆಯು ನಬನ್ನಾದಲ್ಲಿರುವ ರಾಜ್ಯ ಸಚಿವಾಲಯದಲ್ಲಿ 7 ರ ಸುಮಾರಿಗೆ ಪ್ರಾರಂಭವಾಯಿತು. ರಾಜ್ಯ ಸರ್ಕಾರವು ನಿಗದಿಪಡಿಸಿದ ನಿಗದಿತ ಸಮಯದ ಒಂದು ಗಂಟೆಯ ನಂತರ ಪ್ರಾರಂಭವಾದ ಸಭೆಯು ಐದೂವರೆ ಗಂಟೆಗಳ ಕಾಲ ನಡೆಯಿತು.
ಇದನ್ನೂಓದಿ:ಆಂಬ್ಯುಲೆನ್ಸ್ ಇಲ್ಲದೆ ತಂದೆಯ ಶವ ಬೈಕ್‌ನಲ್ಲೆ ಕೊಂಡೊಯ್ದ ಮಕ್ಕಳು | ಯುಪಿ ಅಲ್ಲ, ಕರ್ನಾಟಕ!
ಸರ್ಕಾರಿ ಆಸ್ಪತ್ರೆಯ ಆವರಣದೊಳಗೆ ತಮ್ಮ ಸುರಕ್ಷತೆಯ ಸಮಸ್ಯೆಗಳು, ಕಾರ್ಯಪಡೆಯ ರಚನೆ ಮತ್ತು ಕಾರ್ಯಗಳ ವಿವರಗಳನ್ನು ಸಭೆಯಲ್ಲಿ ಎತ್ತಿ ತೋರಿಸಿದ್ದೇವೆ ಎಂದು ಪ್ರತಿಭಟನಾನಿರತ ವೈದ್ಯರು ಹೇಳಿದ್ದಾರೆ. ರೆಫರಲ್ ವ್ಯವಸ್ಥೆಗಳಲ್ಲಿ ಪಾರದರ್ಶಕತೆ, ರೋಗಿಗಳಿಗೆ ಹಾಸಿಗೆ ಹಂಚಿಕೆ, ಆರೋಗ್ಯ ಕಾರ್ಯಕರ್ತರ ನೇಮಕಾತಿ ಮತ್ತು ಕ್ಯಾಂಪಸ್‌ಗಳಲ್ಲಿ ಚಾಲ್ತಿಯಲ್ಲಿರುವ “ಬೆದರಿಕೆ ಸಂಸ್ಕೃತಿ” ಯ ಅಂತ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ವೈದ್ಯರು ಅಲ್ಲಿ ಪ್ರಸ್ತಾಪಿಸಿದ್ದಾರೆ.
ಯೂನಿಯನ್‌ಗಳು, ಹಾಸ್ಟೆಲ್‌ಗಳು ಮತ್ತು ಆಸ್ಪತ್ರೆಗಳ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರಾತಿನಿಧ್ಯ, ಕಾಲೇಜು ಮಟ್ಟದ ಕಾರ್ಯಪಡೆಗಳ ಸ್ಥಾಪನೆ, ಕಾಲೇಜು ಕೌನ್ಸಿಲ್ ಮತ್ತು ನಿವಾಸಿ ವೈದ್ಯರ ಸಂಘದ ಚುನಾವಣೆಗಳನ್ನು ನಡೆಸುವುದು ಸಹ ಸಭೆಯಲ್ಲಿ ಪ್ರಸ್ತಾಪವಾಗಿದೆ. ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದಂತಹ ಘೋರ ಘಟನೆ ಎಂದಿಗೂ ಪುನರಾವರ್ತನೆಯಾಗಬಾದರು ಎಂಬ ಕಾಳಜಿಯೊಂದಿಗೆ ವೈದ್ಯರ ಈ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ಹೇಳಿದ್ದಾರೆ.
“ನಮ್ಮ ಹೆಚ್ಚಿನ ಬೇಡಿಕೆಗಳು ನ್ಯಾಯಯುತವಾಗಿದ್ದು, ತಕ್ಷಣವೇ ಅನುಷ್ಠಾನಗೊಳ್ಳುವ ಅಗತ್ಯವಿದೆ ಎಂದು ಸರ್ಕಾರ ಒಪ್ಪಿಕೊಂಡಿತು. ಆದರೆ ಮಾತುಕತೆಯ ಕೊನೆಯಲ್ಲಿ ಮುಖ್ಯ ಕಾರ್ಯದರ್ಶಿ ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಬರೆದು ಸಹಿ ಮಾಡಿದ ನಡಾವಳಿಗಳನ್ನು ನಮಗೆ ನೀಡಲು ನಿರಾಕರಿಸಿದಾಗ ನಾವು ನಿರಾಶೆಗೊಂಡೆವು” ಎಂದು ವೈದ್ಯರು ಹೇಳಿದ್ದಾರೆ.
ವಿಡಿಯೊ ನೋಡಿ: ಗುರುಪ್ರಸಾದ್ ಕಂಟಲಗೆರೆ ಅವರ ‘ಅಟ್ರಾಸಿಟಿ’ ಕಾದಂಬರಿ ಕುರಿತ ಚರ್ಚೆಯಲ್ಲಿ ಲೇಖಕಿ ದು.ಸರಸ್ವತಿ ಅವರ ಮಾತುಗಳು


