ದಲಿತ ಯುವಕನ ಮೇಲೆ ಹಲ್ಲೆ ನಡೆಸಿ, ಆತನಿಂದ ಶೂ ನೆಕ್ಕಿಸಿದ ಪ್ರಬಲ ಜಾತಿಗರು ಜಾತಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಕೇಳಿ ಬಂದಿದೆ. ಈ ಘಟನೆಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವರದಿಗಳ ಪ್ರಕಾರ, ವೈರಲ್ ವಿಡಿಯೋದಲ್ಲಿ ಜಾತಿ ದೌರ್ಜನ್ಯಕ್ಕೆ ಒಳಗಾಗಿರುವ ಯುವಕನನ್ನು ರಾಯ್‌ಬರೇಲಿ ಬಳಿಯ ಉಂಚಹಾರ್ ಕೊತ್ವಾಲಿ ಪ್ರದೇಶದ ಸವಯ್ಯ ರಾಜೇ ಗ್ರಾಮದ ನಿವಾಸಿ ಅಮನ್ ಸಿಂಗ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ 15 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
रायबरेली : दलित युवक को चटाया जूता, विडियो वायरल
सोशल मीडिया पर एक विडियो तेज़ी से वायरल हो रहा है जिस में देखा जा सकता है कि एक दलित युवक से कुछ लोग मारपीट कर के उस से जूता चटाया जा रहा है
बताया जा रहा है कि ऊँचाहार कोतवाली के सवईया राजे का रहने वाला है दलित युवक
वीडियो के… pic.twitter.com/dONrvDYS8G
— Ambedkarite People's Voice (@APVNews_) September 18, 2024
ವಿಡಿಯೋ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ ಡಾಲ್ಮೌ ಅರುಣ್ ನೌಹರ್ ಅವರು ” ಇದು ಹಳೆಯ ಘಟನೆ. ಈ ಸಂಬಂಧ ಉಂಚಹಾರ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸಂತ್ರಸ್ತ ಯುವಕ ನೀಡಿದ ದೂರು ಆಧರಿಸಿ 15 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಹೇಳಿದ್ದಾಗಿ ವರದಿಗಳು ತಿಳಿಸಿವೆ.
ಪೊಲೀಸರ ಎಫ್‌ಐಆರ್ ಪ್ರಕಾರ, ಕಳೆದ ಆಗಸ್ಟ್ 21ರಂದು ಘಟನೆ ನಡೆದಿದೆ. ಸಂತ್ರಸ್ತ ಅಮನ್ ಸಿಂಗ್ ಕೆಲಸದ ನಿಮಿತ್ತ ಉಂಚಹಾರ್‌ಗೆ ಬೈಕ್‌ನಲ್ಲಿ ತೆರಳಿದ್ದರು. ಅಲ್ಲಿ ಅವರ ಬೈಕ್‌ಗೆ ಕಾರಿನಲ್ಲಿ ಬಂದ ನಾಲ್ವರು ಡಿಕ್ಕಿ ಹೊಡೆದು, ಅಪಹರಿಸಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಬಿಹಾರ | 100 ದಲಿತರ ಮನೆಗಳಿಗೆ ಬೆಂಕಿ; ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ


