ಸೆಪ್ಟೆಂಬರ್ 14, 2024 ರಂದು ಹರಿಯಾಣದ ಕುರುಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಗಣಪತಿಯನ್ನೂ ಜೈಲಿಗೆ ಹಾಕಲಾಗುತ್ತಿದೆ. ಗಣಪತಿಯನ್ನು ಪೊಲೀಸ್ ವ್ಯಾನಿನಲ್ಲಿಟ್ಟು ಬೀಗ ಹಾಕಿದ್ದಾರೆ. ಇಡೀ ರಾಷ್ಟ್ರ ಗಣೇಶ ಉತ್ಸವವನ್ನು ಆಚರಿಸುತ್ತಿದ್ದರೆ, ವಿಘ್ನ ವಿನಾಶಕನಾದ ಗಣಪತಿಯನ್ನು ಪೂಜಿಸಲು ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ. ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಯಾವ ಹಂತಕ್ಕೂ ಹೋಗಬಹುದು” ಎಂದು ಹೇಳಿದ್ದರು.
ಸೆಪ್ಟೆಂಬರ್ 17ರಂದು ಒಡಿಶಾದ ಭುವನೇಶ್ವರದಲ್ಲಿ ಭಾಷಣ ಮಾಡುವಾಗಲೂ ಪ್ರಧಾನಿ ಈ ಮಾತುಗಳು ಪುನರುಚ್ಚರಿಸಿದ್ದರು “ಅವರ (ಕಾಂಗ್ರೆಸ್) ಸರ್ಕಾರವು ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಗಣೇಶನ ವಿಗ್ರಹವನ್ನು ಕಂಬಿ ಹಿಂದೆ ಇರಿಸುವ ಮೂಲಕ ದೊಡ್ಡ ಅಪರಾಧ ಮಾಡಿದ್ದಾರೆ” ಎಂದಿದ್ದರು.
Bhubaneswar, Odisha: PM Narendra Modi says, "People hungry for power are troubled by Ganesh Chaturthi celebrations. You might have noticed that Congress and its ecosystem have been agitated in recent days because I participated in Ganesh Puja. Furthermore, in Karnataka, where… pic.twitter.com/BbNpH1m9v8
— IANS (@ians_india) September 17, 2024
ಹರಿಯಾಣದಲ್ಲಿ ಪ್ರಧಾನಿ ಮೋದಿ ಹೇಳಿಕೆ ಕೊಟ್ಟಾಗ ಕರ್ನಾಟಕದಲ್ಲಿ ಗಣೇಶ ಮೂರ್ತಿಯನ್ನು ಪೊಲೀಸ್ ವ್ಯಾನ್‌ನಲ್ಲಿಟ್ಟ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಸೆಪ್ಟೆಂಬರ್ 13, 2024 ರಂದು ಎಕ್ಸ್‌ನಲ್ಲಿ ವೈರಲ್ ಫೋಟೋ ಹಂಚಿಕೊಂಡಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ “ಕಾಂಗ್ರೆಸ್ ಹಿಂದೂಗಳ ನಂಬಿಕೆಯನ್ನು ಅವಮಾನಿಸಿದೆ” ಎಂದು ಬರೆದುಕೊಂಡಿದ್ದರು.
This visual of Lord Ganesha in a police vehicle is terrifying.
Why is the Congress hell-bent on insulting our dieties, & belittling the belief and faith of millions of Hindus? pic.twitter.com/mFux03khJg
— Tejasvi Surya (@Tejasvi_Surya) September 13, 2024
ವೈರಲ್ ಫೋಟೋವನ್ನು ಎಕ್ಸ್ ಬಳಕೆದಾರ ಗಿರೀಶ್ ಭಾರದ್ವಾಜ್ (@Girishvhp) ಎಂಬವರು ಕೂಡ ಸೆ.13, 2024ರಂದು ಹಂಚಿಕೊಂಡಿದ್ದರು. ಗಿರೀಶ್ ಅವರು ತಮ್ಮ ಎಕ್ಸ್ ಬಯೋದಲ್ಲಿ ‘ಸ್ವಯಂಸೇವಕ’ ಹಾಗೂ ವಿಶ್ವ ಹಿಂದೂ ಪರಿಷತ್‌ನೊಂದಿಗೆ ಗುರುತಿಸಿಕೊಂಡಿರುವುದಾಗಿ ಬರೆದುಕೊಂಡಿದ್ದಾರೆ. “ಭಗವಾನ್ ಗಣೇಶನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಮಂಡ್ಯದ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ ಘಟನೆಯನ್ನು ಖಂಡಿಸಿ ನಡೆದ ಪ್ರತಿಭಟನೆಯ ವೇಳೆ ಈ ಬಂಧನ ನಡೆದಿದೆ ಎಂದೂ ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದರು.
𝐓𝐡𝐢𝐬 𝐢𝐦𝐚𝐠𝐞 𝐰𝐢𝐥𝐥 𝐟𝐨𝐫𝐞𝐯𝐞𝐫 𝐡𝐚𝐮𝐧𝐭 𝐭𝐡𝐞 𝐇𝐢𝐧𝐝𝐮𝐬 𝐨𝐟 𝐊𝐚𝐫𝐧𝐚𝐭𝐚𝐤𝐚—
Bhagavan Ganesha, along with Hindu activists, was detained by the Karnataka Police. The arrests followed protests condemning the stone-pelting by Muslims on a Ganesha procession… pic.twitter.com/IZs40dPQHI
— Girish Bharadwaj (@Girishvhp) September 13, 2024
ನಾವು ಈ ಸುದ್ದಿ ಬರೆಯುವ ಹೊತ್ತಿಗೆ ಗಿರೀಶ್ ಅವರ ಪೋಸ್ಟ್ 2 ಲಕ್ಷದ 70 ಸಾವಿರ ವೀಕ್ಷಣೆಗಳನ್ನು ಪಡೆದಿತ್ತು.
ಬಿಜೆಪಿಯ ಉನ್ನತ ನಾಯಕರು ಸೇರಿದಂತೆ ಹಲವಾರು ಎಕ್ಸ್ ಬಳಕೆದಾರರು ಕೂಡ ವೈರಲ್ ಫೋಟೋ ಹಂಚಿಕೊಂಡು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ ಎಂದು ಟೀಕಿಸಿದ್ದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ (@blsantosh), ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ (@BYVijayendra), ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ (@Shehzad_Ind), ಪಕ್ಷದ ಬೆಂಗಳೂರು ಕೇಂದ್ರ ಸಂಸದ ಪಿ ಸಿ ಮೋಹನ್ (@PCMohanMP), ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ (@shobabjp) ಫೋಟೋ ಹಂಚಿಕೊಂಡವರಲ್ಲಿ ಪ್ರಮುಖರು.
ಮಾಧ್ಯಮಗಳು ಕೂಡ ಘಟನೆಯ ಬಗ್ಗೆ ವರದಿ ಮಾಡಿತ್ತು. ಸುದ್ದಿ ಸಂಸ್ಥೆ ಎಎನ್‌ಐ (@ANI) ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೇಳಿಕೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿತ್ತು.
#WATCH | On Ganapati idol row in Karnataka, Maharashtra CM Eknath Shinde says, "It is unfortunate. They have stopped the celebration of Lord Ganapati and the idol of Ganapati has also been seized. The people of Maharashtra, the people of the country, will not sit without giving… pic.twitter.com/fgmnsimqq5
— ANI (@ANI) September 14, 2024
ಸೆಪ್ಟೆಂಬರ್ 14ರಂದು ವರದಿ ಪ್ರಕಟಿಸಿದ್ದ ರಿಪಬ್ಲಿಕ್ ಟಿವಿ ಇಂಗ್ಲಿಷ್ “ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಗಣಪತಿಯನ್ನೂ ಕಂಬಿ ಹಿಂದೆ ತಳ್ಳಲಾಗಿದೆ” ಎಂಬ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸಿತ್ತು.
ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿ ಭಾಷಣದಲ್ಲಿ ಉಲ್ಲೇಖಿಸಿರುವ, ಬಿಜೆಪಿ ನಾಯಕರು ಎಕ್ಸ್‌ನಲ್ಲಿ ಹಂಚಿಕೊಂಡಿರುವ ವೈರಲ್ ಫೋಟೋದ ಕುರಿತು ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ.
ಈ ಕುರಿತ ಮಾಧ್ಯಮ ವರದಿಗಳನ್ನು ಪರಿಶೀಲಿಸಿದಾಗ ” ಹಲವು ವರದಿಗಳು ನಮಗೆ ಲಭ್ಯವಾಗಿದೆ. ಈ ಪೈಕಿ ದಿ ನ್ಯೂಸ್ ಮಿನಿಟ್ ವೆಬ್‌ಸೈಟ್ “Controversy erupts in Bengaluru over Ganesha idol in police van: What really happened?” ಎಂಬ ಶೀರ್ಷಿಕೆಯ ವರದಿಯನ್ನು ನಾವು ಪರಿಶೀಲಿಸಿದ್ದೇವೆ.
ವರದಿಯಲ್ಲಿ “ಮಂಡ್ಯದ ಸೆಪ್ಟೆಂಬರ್ 11ರಂದು ಮಂಡ್ಯದ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ, ಗಲಾಟೆ ನಡೆದಿರುವುದನ್ನು ಖಂಡಿಸಿ ಸೆಪ್ಟೆಂಬರ್ 13ರಂದು ಬೆಂಗಳೂರಿನ ಟೌನ್‌ಹಾಲ್ ಮುಂಭಾಗದಲ್ಲಿ ‘ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ’ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪ್ರತಿಭಟನಾ ನಿರತರು ಗಣೇಶ ಮೂರ್ತಿಯನ್ನು ಹೊತ್ತು ತಂದಿದ್ದರು. ಪ್ರತಿಭಟನಾಕಾರರನ್ನು ಸ್ಥಳದಿಂದ ಚದುರಿಸುವಾಗ ಪೊಲೀಸರು ಗಣೇಶ ಮೂರ್ತಿಯನ್ನು ಎತ್ತಿಕೊಂಡು ಹೋಗಿ ಪೊಲೀಸ್ ವ್ಯಾನ್‌ನಲ್ಲಿಟ್ಟಿದ್ದರು. ಈ ಕುರಿತ ಫೋಟೋ ವೈರಲ್ ಆಗಿದ್ದು, ಬಿಜೆಪಿ ನಾಯಕರು ಹಾಗೂ ಮತ್ತಿತರು ಪೊಲೀಸರ ನಡೆಯನ್ನು ಖಂಡಿಸಿದ್ದಾರೆ” ಎಂದಿದೆ.
“ಹೈಕೋರ್ಟ್ ಆದೇಶದಂತೆ ಬೆಂಗಳೂರು ನಗರದಲ್ಲಿ ಸ್ವಾತಂತ್ರ್ಯ ಉದ್ಯಾನವದಲ್ಲಿ (ಫ್ರೀಡಂ ಪಾರ್ಕ್) ಮಾತ್ರ ಯಾವುದೇ ಪ್ರತಿಭಟನೆ ಮಾಡಬೇಕು. ಗಣೇಶ ಉತ್ಸವ ಸಮಿತಿಯವರು ನಿಯಮ ಉಲ್ಲಂಘಿಸಿ ಟೌನ್ ಹಾಲ್ ಬಳಿ ಪ್ರತಿಭಟಿಸಿದ್ದಕ್ಕೆ ಪೊಲೀಸರು ಅಡ್ಡಿಪಡಿಸಿದ್ದಾರೆ” ಎಂದೂ ವರದಿಯಲ್ಲಿ ತಿಳಿಸಲಾಗಿದೆ.
“ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಸುಮಾರು 40 ಮಂದಿಯನ್ನು ಬಂಧಿಸಿದ್ದರು. ಅವರಿಂದ ವಶಪಡಿಸಿಕೊಂಡ ಗಣೇಶ ಮೂರ್ತಿಯನ್ನು ಹಲಸೂರು ಕೆರೆಯಲ್ಲಿ ವಿಸರ್ಜನೆ ಮಾಡಿದ್ದಾರೆ” ಎಂದು ವರದಿಯಲ್ಲಿ ವಿವರಿಸಲಾಗಿದೆ.
ವೈರಲ್ ಫೋಟೋ ಮತ್ತು ಅದರ ಸುತ್ತಮುತ್ತ ಉಂಟಾಗಿರುವ ಗೊಂದಲದ ಕುರಿತು ಸೆಪ್ಟೆಂಬರ್ 15ರಂದು ಬೆಂಗಳೂರು ಕೇಂದ್ರೀಯ ವಿಭಾಗದ ಡಿಸಿಪಿ (@DCPCentralBCP)ಯವರ ಅಧಿಕೃತ ಎಕ್ಸ್ ಹ್ಯಾಂಡಲ್ ಸ್ಪಷ್ಟನೆ ಕೊಡಲಾಗಿತ್ತು.
Clarification regarding viral social media posts stating that authorities snatched Ganesh idol from devotees going for immersion near Town Hall in Bengaluru…
— DCP Central Division,ಉಪ ಪೊಲೀಸ್ ಆಯುಕ್ತ ಕೇಂದ್ರ ವಿಭಾಗ (@DCPCentralBCP) September 15, 2024
ಸೆಪ್ಟೆಂಬರ್ 13, 2024 ರಂದು, ಹಿಂದೂ ಗುಂಪುಗಳು ಬೆಂಗಳೂರಿನ ಟೌನ್ ಹಾಲ್ ಬಳಿ ನಾಗಮಂಗಲ ಗಣೇಶ ಮೆರವಣಿಗೆಯ ಘಟನೆಯನ್ನು ಖಂಡಿಸಿ, ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಪ್ರತಿಭಟಿಸಿದ್ದವು. ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಬಳಿಕ ಗಣಪತಿ ಮೂರ್ತಿಯನ್ನು ಅಧಿಕಾರಿಗಳು ವಿಧಿ ವಿಧಾನಗಳೊಂದಿಗೆ ನಿಮಜ್ಜನ ಮಾಡಿದ್ದಾರೆ” ಎಂದು ಡಿಸಿಪಿಯವರ ಎಕ್ಸ್ ಹ್ಯಾಂಡಲ್‌ನಲ್ಲಿ ಹೇಳಲಾಗಿತ್ತು.
On Sept 13, 2024, Hindu groups protested at Bengaluru's Town Hall over the Nagamangala Ganesh procession incident, defying a HC order. Demonstrators detained. Ganapati idol was later immersed by authorities with rituals. pic.twitter.com/GUKF6gla1e
— DCP Central Division,ಉಪ ಪೊಲೀಸ್ ಆಯುಕ್ತ ಕೇಂದ್ರ ವಿಭಾಗ (@DCPCentralBCP) September 15, 2024


