ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್‌ಎಸ್ ಕೆಂಪಣ್ಣ ಆಯೋಗದ ವರದಿಯನ್ನು ಕೇಳಿರುವುದರಿಂದ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಮತ್ತು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಡುವಿನ ಘರ್ಷಣೆ ಮತ್ತಷ್ಟು ಉಲ್ಬಣಗೊಳ್ಳುವ ವೇದಿಕೆ ಸಿದ್ದವಾಗಿದೆ. ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಈಗಾಗಲೇ ಆರೋಪ ಎದುರಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಇದು ಇನ್ನಷ್ಟು ಸಂಕಷ್ಟ ಎದುರಾಗುವಂತೆ ಮಾಡಲಿದೆ ಎಂದು ವರದಿಗಳು ಉಲ್ಲೇಖಿಸಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ರಾಜ್ಯಪಾಲರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದ ನಂತರ, ನಗರಾಭಿವೃದ್ಧಿ ಇಲಾಖೆಯು 1,861 ಪುಟಗಳ ಮೂಲ ವರದಿಯ ನಾಲ್ಕು ಸಂಪುಟಗಳನ್ನು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಸೆಪ್ಟೆಂಬರ್ 11 ರಂದು ಸಲ್ಲಿಸಿತು. ಡಿಸಿಎಂ ಕಚೇರಿ ಇದನ್ನು ದೃಢಪಡಿಸಿದ್ದು, ನಗರಾಭಿವೃದ್ಧಿ ಇಲಾಖೆಯು ದಾಖಲೆ ಹಸ್ತಾಂತರವನ್ನು ದೃಢೀಕರಿಸಿ ಸೆಪ್ಟೆಂಬರ್ 20 ರಂದು ಟಿಪ್ಪಣಿಯನ್ನು ಸಲ್ಲಿಸಿದೆ.
ಪ್ರತಿಪಕ್ಷ ಬಿಜೆಪಿಯ ಬಹುದಿನಗಳ ಬೇಡಿಕೆಯಂತೆ ಸರಕಾರ ಈ ವರದಿಯನ್ನು ಸಂಪುಟದ ಮುಂದೆ ಮಂಡಿಸಲಿದೆಯೇ ಅಥವಾ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. 2014 ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಅವಧಿಗೆ ಸಿಎಂ ಆಗಿದ್ದಾಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡ ದೊಡ್ಡ ಜಮೀನು (541 ಎಕರೆ) ಡಿನೋಟಿಫೈ ಮಾಡಲಾಗಿತ್ತು.
ಇದನ್ನೂ ಓದಿ: ತಮಿಳುನಾಡು | ಸ್ಯಾಮ್‌ಸಂಗ್ ಕಾರ್ಮಿಕರಿಂದ ಮುಷ್ಕರ; 80% ಉತ್ಪಾದನೆಗೆ ಹೊಡೆತ!
ಕಾನೂನು ಉಲ್ಲಂಘಿಸಿದ ಕಾರಣ ಡಿನೋಟಿಫಿಕೇಷನ್ ಕಡತಕ್ಕೆ ಸಹಿ ಹಾಕಿಲ್ಲ: ಶೆಟ್ಟರ್
ಕೆಲವು ರಿಯಲ್‌ಎಸ್ಟೇಟ್ ಏಜೆಂಟ್‌ಗಳಿಗೆ ಲಾಭ ಮಾಡಿಕೊಡಲು ಮುಖ್ಯಮಂತ್ರಿ ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಆಗ ಆಪಾದಿಸಿತ್ತು. ತಮ್ಮ ರಾಜೀನಾಮೆಯ ಕೂಗಿನ ನಡುವೆ, ಸಿದ್ದರಾಮಯ್ಯ ಅವರು ಆಗಸ್ಟ್ 2017 ರಲ್ಲಿ ವರದಿ ಸಲ್ಲಿಸಿದ ನ್ಯಾಯಮೂರ್ತಿ ಕೆಂಪಣ್ಣ ಆಯೋಗವನ್ನು ರಚಿಸಿದ್ದರು.ಅರ್ಕಾವತಿ ಬಡಾವಣೆ
ಆದರೆ ಸಿದ್ದರಾಮಯ್ಯ ಸರಕಾರವಾಗಲಿ ಅಥವಾ ನಂತರ ಬಂದ ಸರಕಾರಗಳಾಗಲಿ ವರದಿಯನ್ನು ಸಂಪುಟದಲ್ಲಾಗಲಿ ಅಥವಾ ವಿಧಾನಮಂಡಲದ ಅಧಿವೇಶನದಲ್ಲಾಗಲಿ ಚರ್ಚೆಗೆ ಮಂಡಿಸಲಿಲ್ಲ.
ಸಿದ್ದರಾಮಯ್ಯ 2.0 ಸರ್ಕಾರದ ಅವರ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 2023 ರಲ್ಲಿ ವಿಧಾನಸಭೆಯಲ್ಲಿ ವರದಿಯ ತೀರ್ಮಾನವನ್ನು ಮಾತ್ರ ಓದಿ, ಇದು ಜಮೀನುಗಳ ಡಿನೋಟಿಫಿಕೇಶನ್‌ನಲ್ಲಿನ ಕಾನೂನು ಉಲ್ಲಂಘನೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದರು.
2013ರಲ್ಲಿ ಸಿದ್ದರಾಮಯ್ಯನವರ ಹಿಂದಿನ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರು, ಜಮೀನು ಡಿನೋಟಿಫಿಕೇಶನ್ ಕಾನೂನು ಉಲ್ಲಂಘನೆ ಎಂದು ತಿಳಿದಿದ್ದರಿಂದ ತಾನು ಕಡತಗಳಿಗೆ ಸಹಿ ಮಾಡಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: FACT CHECK : CPI(M) ನಾಯಕ ಸೀತಾರಾಮ್ ಯೆಚೂರಿ ಕ್ರಿಶ್ಚಿಯನ್ನರೇ? ವೈರಲ್ ಫೋಟೋದ ಸತ್ಯಾಸತ್ಯತೆ ಏನು?
”ನಾನು ಸಿಎಂ ಆಗಿದ್ದಾಗ ಕಡತಗಳನ್ನು ಅಧ್ಯಯನ ಮಾಡಿದ್ದೆ. ಕಾನೂನು ಉಲ್ಲಂಘನೆ ಆಗಿದ್ದರಿಂದ ನಾನು ಸಹಿ ಮಾಡಿಲ್ಲ, ಆದರೆ ಸಿಎಂ ಆಗಿ ಸಿದ್ದರಾಮಯ್ಯ ಮಾಡಿದ್ದಾರೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿ ನಾನು ಆಗಿನ ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ಅವರನ್ನು ಸಂಪರ್ಕಿಸಿದ್ದೆ, ಆದರೆ ಅವರು ಒಪ್ಪಲಿಲ್ಲ” ಎಂದು ಶೆಟ್ಟರ್ ಅವರು ಹೇಳಿದ್ದಾಗಿ TNIE ವರದಿ ಮಾಡಿದೆ.
”ಸಿದ್ದರಾಮಯ್ಯ ಅವರಿಗೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಗಬೇಕಾದರೆ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಬೇಕಿತ್ತು. ಕಾನೂನು ಉಲ್ಲಂಘನೆ ಕುರಿತು ವರದಿಯಲ್ಲಿ ಕೆಲವು ಟೀಕೆಗಳನ್ನು ಮಾಡಿರುವ ಬಗ್ಗೆ ನಮಗೆ ಮಾಹಿತಿ ಇದೆ,” ಎಂದು ಅವರು ಹೇಳಿದ್ದಾರೆ.
ವರದಿಯಲ್ಲಿ ಉಲ್ಲೇಖಿಸಿರುವಂತೆ ಇದು 8,000 ಕೋಟಿ ರೂ.ಗೂ ಹೆಚ್ಚು ಹಗರಣವಾಗಿದೆ. ವಸತಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದ ಸಾವಿರಾರು ಜನರ ಹಕ್ಕನ್ನು ನಿರಾಕರಿಸಲಾಗಿದೆ. ವರದಿಯನ್ನು ಶಾಸಕಾಂಗದಲ್ಲಿ ಮಂಡಿಸಬೇಕು ಮತ್ತು ತಪ್ಪಿತಸ್ಥ ಸಿದ್ದರಾಮಯ್ಯ ಆಗಿದ್ದರೂ ಶಿಕ್ಷೆಯಾಗಲಿ,” ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಎಂಎಲ್ಸಿ ಸಿ.ಟಿ.ರವಿ ಹೇಳಿದ್ದಾಗ ವರದಿಯಾಗಿದೆ.
ವಿಡಿಯೊ ನೋಡಿ:ಕಟ್ಟುತ್ತೇವಾ ನಾವು ಜಾತಿ ಇಲ್ಲದ ಭೀತಿ ಇಲ್ಲದ ನಾಡ ಕಟ್ಟುತ್ತೇವೆ; ಹಾಡು ನೋಡಿ


