1,399 ರೂಪಾಯಿ ಮೌಲ್ಯದ ಒಂದು ಜೊತೆ ಟ್ರಕ್ಕಿಂಗ್ ಟ್ರೌಸರ್ ಅನ್ನು ತಲುಪಿಸಲು ವಿಫಲವಾದ ಗ್ರಾಹಕನಿಗೆ 35,000 ರೂಪಾಯಿ ಪಾವತಿಸಲು ಕರ್ನಾಟಕದ ಗ್ರಾಹಕ ನ್ಯಾಯಾಲಯವು ಕ್ರೀಡಾ ಸಲಕರಣೆಗಳ ಮಾರಾಟ ಸಂಸ್ಥೆ ಡೆಕಾಥ್ಲಾನ್‌ಗೆ ಆದೇಶಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಂಗಳೂರಿನ ನಿವಾಸಿ 23 ವರ್ಷದ ಮೋಹಿತ್ ಅವರು ಡೆಕಾಥ್ಲಾನ್ ಅವರು ಆರ್ಡರ್ ಮಾಡಿದ ಪ್ಯಾಂಟ್ ಅನ್ನು ತಲುಪಿಸಲು ವಿಫಲವಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿದ್ದರು.
ಕಳೆದ ವರ್ಷ ಡಿಸೆಂಬರ್ 22 ರಂದು, ಅವರು ಫೋರ್ಕ್ಲಾಜ್ ಟ್ರೆಕ್ಕಿಂಗ್ ಟ್ರೌಸರ್ MT-500 ಅನ್ನು ಖರೀದಿಸುವ ಬಗ್ಗೆ ಡೆಕಾಥ್ಲಾನ್ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದರು. ಆದರೆ ಈ ಉತ್ಪನ್ನವು ಬೆಂಗಳೂರಿನ ETA ಮಾಲ್‌ನಲ್ಲಿರುವ ಚೈನ್ಸ್ ಸ್ಟೋರ್‌ನಲ್ಲಿ ಮಾತ್ರ ಲಭ್ಯವಿದೆ ಎಂದು ತಿಳಿಸಲಾಗಿತ್ತು. ಅದೇ ವೇಳೆ ಅಧಿಕಾರಿಗಳು ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸುವಂತೆ ಕೇಳಿದ್ದರು ಮತ್ತು ಪ್ಯಾಂಟ್ ಅನ್ನು ಅವರ ವಿಳಾಸಕ್ಕೆ ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದರು.
ಅದರಂತೆ ಮೋಹಿತ್ ಆನ್‌ಲೈನ್‌ನಲ್ಲಿ 1,399 ರೂ. ಪಾವತಿಸಿದ್ದರು. ಆದರೆ ಅವರು ಆರ್ಡರ್ ಮಾಡಿದ್ದ ಟ್ರೌಸರ್ ಅವರಿಗೆ ತಲುಪಿರಲಿಲ್ಲ. ಈ ಬಗ್ಗೆ ಇಟಿಎ ಮಾಲ್‌ನಲ್ಲಿರುವ ಡೆಕಾಥ್ಲಾನ್ ಮಳಿಗೆಯ ಸಿಬ್ಬಂದಿಯನ್ನು ವಿಚಾರಿಸಿದಾಗ ಉತ್ಪನ್ನ ನಾಪತ್ತೆಯಾಗಿದೆ ಎಂದು ತಿಳಿಸಿದ್ದರು.
ಇದನ್ನೂಓದಿ: ಅರ್ಕಾವತಿ ಬಡಾವಣೆ | ಸಿದ್ದಾಮಯ್ಯ v/s ತಾವರ್‌ಚಂದ್ ಸಂಘರ್ಷಕ್ಕೆ ಮತ್ತೊಂದು ವೇದಿಕೆ ಸಿದ್ಧ!
ಫೆಬ್ರವರಿ 6 ರಂದು, ಮೋಹಿತ್ ಇಟಿಎ ಮಾಲ್‌ನಲ್ಲಿರುವ ಅಂಗಡಿಗೆ ಭೇಟಿ ನೀಡಿದಾಗ, ಡೆಕಾಥ್ಲಾನ್ ಅವರ ಹಣವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡಿತ್ತು. ಆದಾಗ್ಯೂ, ಫೆಬ್ರವರಿ 10 ಮತ್ತು 13 ರಂದು ಫೋನ್ ಕರೆ ಮಾಡಿ ಹಣ ವಾಪಾಸಾತಿಗೆ ವಿನಂತಿ ಮಾಡಿದ್ದರೂ, ಕಂಪೆನಿಯು ಅವರಿಗೆ ಹಣ ಮರುಪಾವತಿ ಮಾಡಿರಲಿಲ್ಲ.
ನಂತರ ಮೋಹಿತ್ ಅವರು ಏಪ್ರಿಲ್ 9 ರಂದು ಲೀಗಲ್ ನೋಟಿಸ್ ಕಳುಹಿಸಿದ್ದರು. ಈ ವೇಳೆ ಇಟಿಎ ಮಾಲ್‌ನಲ್ಲಿರುವ ಅಂಗಡಿಯನ್ನು ಮುಚ್ಚಲಾಗಿದೆ ಎಂಬ ಉತ್ತರವನ್ನು ನೀಡಲಾಗಿತ್ತು. ಅದರ ನಂತರ ಅವರು ಗ್ರಾಹಕ ನ್ಯಾಯಾಲಯಕ್ಕೆ ತೆರಳಿದ್ದರು. ಹಾಗಾಗಿ ನ್ಯಾಯಾಲಯವು ಡೆಕಾಥ್ಲಾನ್‌ಗೆ ನೋಟಿಸ್‌ಗಳನ್ನು ಕಳುಹಿಸಿತ್ತು. ಅದಾಗ್ಯೂ, ಡೆಕಾಥ್ಲಾನ್ ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ.
ಗ್ರಾಹಕರ ನ್ಯಾಯಾಲಯದ ಮುಖ್ಯಸ್ಥ ಸೋಮಶೇಖರಪ್ಪ ಹಂದಿಗೋಳ ಅವರು ಮಂಗಳವಾರ ತಮ್ಮ ಆದೇಶದಲ್ಲಿ ಮೋಹಿತ್ ಅವರ 1399 ರೂ. ಮತ್ತು ಸೇವಾ ನ್ಯೂನತೆಗೆ 25000 ರೂ. ಮತ್ತು ವ್ಯಾಜ್ಯ ವೆಚ್ಚಕ್ಕಾಗಿ 10000 ರೂ. ಪಾವತಿಸಲು ಕಂಪನಿಗೆ ಆದೇಶಿಸಿದ್ದಾರೆ.
ವಿಡಿಯೊ ನೋಡಿ: ರೈತರ ಕರೆ ಮೇರೆಗೆ ಜಿಯೋ ಇಂದ ಪೋರ್ಟ್ ಆದವರೊಂದಿಗೆ ಜಿಯೋ ಕಂಪೆನಿಯವರ ಸ್ವಾರಸ್ಯಕರ ಸಂಭಾಷಣೆ ಕೇಳಿ. JioCustomerCare


