ಫ್ರಿಡ್ಜ್‌ನಲ್ಲಿ ಯುವತಿಯ ಶವದ ತುಂಡುಗಳು ಪತ್ತೆಯಾದ ಬೆಂಗಳೂರಿನ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಗುರುತಿಸಲಾಗಿದ್ದು, ಆತನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸೋಮವಾರ ತಿಳಿಸಿದ್ದಾರೆ. ಪ್ರಿಡ್ಜ್‌ನಲ್ಲಿ ಯುವತಿಯ ಮೃತದೇಹ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಶನಿವಾರ ಬೆಂಗಳೂರಿನ ಮನೆಯೊಂದರ ಫ್ರಿಡ್ಜ್‌ನಲ್ಲಿ ಯುವತಿಯ ಶವದ ಮೂವತ್ತರಷ್ಟು ತುಂಡುಗಳು ಪತ್ತೆಯಾಗಿತ್ತು. ಸಿಂಗಲ್ ಬೆಡ್ ರೂಂನ ಮನೆಯಲ್ಲಿ ಯುವತಿ ಮಹಾಲಕ್ಷ್ಮಿ ಒಂಟಿಯಾಗಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.
ಇದನ್ನೂಓದಿ: ‘ನನ್ನ ಪರಿಸ್ಥಿತಿ ರಾಮನ ಅನುಪಸ್ಥಿತಿಯ ಭರತನಂತಿದೆ..’ ಎಂದ ದೆಹಲಿ ನೂತನ ಮುಖ್ಯಮಂತ್ರಿ ಅತಿಶಿ
“ಎಲ್ಲ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಪ್ರಮುಖ ಆರೋಪಿಯನ್ನು ಗುರುತಿಸಲಾಗಿದೆ ಮತ್ತು ಆತನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಆರೋಪಿ ಹೊರಗಿನವನಾಗಿದ್ದು, ನಾವು ಸದ್ಯಕ್ಕೆ ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ. ಹೆಚ್ಚು ಮಾಹಿತಿ ನೀಡಿದರೆ ಅದು ಆರೋಪಿಗೆ ಸಹಕಾರಿಯಾಗಲಿದೆ” ಎಂದು” ಎಂದು ನಗರ ಪೊಲೀಸ್ ಮುಖ್ಯಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗೃಹ ಸಚಿವ ಜಿ. ಪರಮೇಶ್ವರ ಅವರು ಮಹಿಳೆಯ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂದು ಇಂದು ಮುಂಜಾನೆ ಹೇಳಿದ್ದಾರೆ. “ಪೊಲೀಸರು ಸಾಕಷ್ಟು ಮಾಹಿತಿ, ಸಾಕಷ್ಟು ಸುಳಿವುಗಳನ್ನು ಸಂಗ್ರಹಿಸಿದ್ದಾರೆ” ಎಂದು ಹೇಳಿದ್ದಾರೆ ನಾವು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸದ ಹೊರತು, ಯಾರು ಎಂದು ಹೇಳಲು ಸಾಧ್ಯವಿಲ್ಲ. ಅವರು ಪಶ್ಚಿಮ ಬಂಗಾಳದವರು ಎಂದು ಅವರು ಹೇಳುತ್ತಿದ್ದಾರೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮಹಿಳೆಯರ ಸುರಕ್ಷತೆಗಾಗಿ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ವಿಪತ್ತು ಪರಿಹಾರ ಹಣ ಸೋನಿಯಾ ಗಾಂಧಿಗೆ ವರ್ಗಾವಣೆ ಆರೋಪ..’; ಕಂಗನಾ ಕ್ಷಮೆಯಾಚನೆಗೆ ಕಾಂಗ್ರೆಸ್ ಆಗ್ರಹ
ಹಿರಿಯ ಪೊಲೀಸ್ ಅಧಿಕಾರಿ ಎನ್.ಸತೀಶ್ ಕುಮಾರ್ ಮಾತನಾಡಿ,”ಕೊಲೆಯಾದ ಮಹಾಲಕ್ಷ್ಮಿ ಮೂಲತಃ ಬೇರೆ ರಾಜ್ಯದವರಾದರೂ ಕರ್ನಾಟಕದಲ್ಲಿ ನೆಲೆಸಿದ್ದರು. ಅವರು ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತಿ ಬೇರೆ ನಗರದಲ್ಲಿ ಕೆಲಸ ಮಾಡುತ್ತಾರೆ” ಎಂದು ಹೇಳಿದ್ದಾರೆ.
ಪೊಲೀಸರು ಯುವತಿಯ ದೇಹದ ತುಂಡುಗಳನ್ನು ಪತ್ತೆ ಮಾಡಿದಾಗ, ಅವು ಕೊಳೆತು ಹುಳು ಆಗಿದ್ದವು ಎಂದು ವರದಿಯಾಗಿದೆ. ದೇಹದ ಭಾಗಗಳು ಪತ್ತೆಯಾಗುವ ಕನಿಷ್ಠ ಎರಡು ವಾರಗಳ ಮೊದಲು ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾಗಿದ್ದು, ಪ್ರತಿಪಕ್ಷ ಬಿಜೆಪಿಯು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ.ಪ್ರಿಡ್ಜ್‌ನಲ್ಲಿ ಯುವತಿಯ ಮೃತದೇಹ
ವಿಡಿಯೊ ನೋಡಿ: ಸಿದ್ದರಾಮಯ್ಯ ವರ್ಸಸ್ ಸೋಮಣ್ಣ: ವರುಣಾ ಕ್ಷೇತ್ರದ ಮತದಾರರ ಮನದ ಮಾತು.



You are brave and fearless